ಬಡತನ ತ್ರೀವತೆ ಕಡಿಮೆಗೊಳಿಸಲು ಸಂಜೀವಿನಿ ಯೋಜನೆ ಜಾರಿಗೆ- ಡಾ.ಶಿವರಾಜ

ರಾಯಚೂರು- ಸಂಜೀವಿನಿ ಯೋಜನೆ ಕೇಂದ್ರ ಸರಕಾರದ ಒಂದು ಯೋಜನೆ ಆಗಿದ್ದು, ಮಹಿಳಾ ಸ್ವ ಸಹಾಯ ಗುಂಪುಗಳನ್ನು ಆಧಾರವಾಗಿ ಇಟ್ಟುಕೊಂಡು ಅನುಷ್ಠಾನಗೊಳ್ಳುತ್ತಿರುವ ಯೋಜನೆ ಆಗಿದೆ ಎಂದು ಮಾನವಿ ಎನ್.ಆರ್.ಎಲ್.ಎಮ್ ಯೋಜನಾ ವ್ಯವಸ್ಥಾಪಕರಾದ ಡಾ. ಶಿವರಾಜ ಅವರು ಹೇಳಿದರು.
ಮಾನವಿ ತಾಲೂಕು ಪಂಚಾಯತನ ಸಾಮರ್ಥ್ಯ ಸೌಧದಲ್ಲಿ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್. ಗ್ರಾಮೀಣ ಜೀವನೋಪಾಯ ಸಂವರ್ಧನೆ ನಿರ್ವಹಣಾ ಘಟಕ ಮಾನವಿ ಅಡಿಯಲ್ಲಿ ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಎಂಬಿಕೆ, ಎಲ್ಸ್ ಸಿಆರ್ ಪಿ ಹಾಗೂ ಬಿಸಿ ಸಖಿ ಅವರಿಗೆ ಆಯೋಜಿಸಿರುವ ಪರಿಚಯಾತ್ಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಬಡತನ ತೀವ್ರತೆಯನ್ನು ಕಡಿಮೆಗೊಳಿಸುವುದರ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸವುದಾಗಿದೆ. ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಮುಖ್ಯ ಪುಸ್ತಕ ಬರಹಗಾರರು ಸಮುದಾಯ ಆಧಾರಿತ ಸಂಸ್ಥೆಗಳನ್ನು ಬಲವರ್ಧನೆಗೊಳಿಸುವುದರ ಮುಖಾಂತರ ಗ್ರಾಮೀಣ ಮಹಿಳೆಯರ ಸಾಮಥ್ರ್ಯ ಬಲವರ್ಧನೆ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ ಎಂದರು.
ಎನ್.ಆರ್.ಎಲ್.ಎಮ್ನ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಇಸ್ಮಾಯಿಲ್ ಅವರು ಮಾತನಾಡಿ
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಎಸ್ ಜಿಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ ?ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಆರ್ ಎಲ್ ಎಂ)೨೦೧೦-೧೧ರಿಂದ ಜಾರಿಗೊಳಿಸಿದೆ. ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ” ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನರೇಗಾ ಐಸಿಸಿ ಸಂಯೋಜಕ ವಿರೇಶ, ಕ್ಲಸ್ಟರ್ ಸೂಪರ್ ವೈಸರ್ ಉಮೇಶ್, ಸೂರತ್ ಪ್ರಸಾದ್ ಗಟ್ಟು, ಡಿಒ ಶರಣ ಬಸವ, ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಎಂಬಿಕೆ, ಎಲ್ಸ್ ಸಿಆರ್ ಪಿ ಉಪಸ್ಥಿತರಿದ್ದರು.