ಬಡತನವಿದ್ದಲ್ಲಿ ವಿದ್ಯೆಎನ್ನುವದು ರಾರಾಜಿಸುತ್ತದೆ:ಡಾ.ನರಗುಂದ

ತಾಳಿಕೋಟೆ:ಜು.27: ಶೈಕ್ಷಣಿಕ ವ್ಯವಸ್ಥೆ ಅದರ ಕಲ್ಪನೆ ಯಾವ ರೀತಿ ಇದೆ ಎಂಬುದು ತಾಳಿಕೋಟೆ ಪಟ್ಟಣದಲ್ಲಿಯ ಶಾಲೆ ಕಾಲೇಜುಗಳ ಘನತೆ ಗೌರವದಿಂದ ಎದ್ದು ಕಾಣುತ್ತಿದೆ ಎಂದು ಮುದ್ದೇಬಿಹಾಳದ ಎಂ.ಜಿ.ವ್ಹಿ.ಸಿ.ಪದವಿ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರಕಾಶ ನರಗುಂದ ಅವರು ನುಡಿದರು.

ಮಂಗಳವಾರರಂದು ಸ್ಥಳೀಯ ಎಸ್.ಎಸ್.ವಿಧ್ಯಾ ಸಂಸ್ಥೆಯ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾ ವಿದ್ಯಾಲ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಎನ್.ಎಸ್.ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಸ್ವಚ್ಚತೆ ಭಾವೈಕ್ಯತೆ ರಾಷ್ಟ್ರೀಯತೆ ಅಲ್ಲದೇ ನಾಯಕತ್ವ ಗುಣಗಳನ್ನು ಕಲಿಸುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿದೆ ಈ ಸೇವೆಯಲ್ಲಿ ಶ್ರೀಮಂತ ಬಡತನ ಅನ್ನುವ ಬೇದ ಭಾವ ಇರುವದಿಲ್ಲಾ ಬೇದ ಭಾವವಿಲ್ಲದೇ ಶ್ರಮದಾನವನ್ನು ಮಾಡಲಾಗುತ್ತದೆ ಎಂದರು. ಸಂಗೀತ, ಕ್ರೀಡೆ ಇವುಗಳನ್ನು ದೇಹಗಳನ್ನು ಸದೃಢಗೊಳಿಸಲಾಗುತ್ತದೆ ಮಾನಸಿಕದಿಂದಲೂ ಮುಕ್ತಿಹೊಂದಲು ಸಾಧ್ಯವೆಂದರು. ಈ ದೇಶದ ರಕ್ಷಣೆ ಮಾಡಿದವರು ಸೈನಿಕರಾದ ಮಹಾ ಮಾರಿಯಂತಹ ಕೋರಾನವನ್ನು ನಿಯಂತ್ರಿಸಲು ಮುಂದಾಗಿದ್ದ ಪೊಲೀಸ್‍ರಾಗಲಿ, ವೈಧ್ಯರಾಗಲಿ ಅದರ ಜೊತೆ ಎನ್.ಎಸ್.ಎಸ್.ಕೂಡಾ ತನ್ನ ಕಾರ್ಯವನ್ನು ನಿರ್ವಹಿಸಿ ಸತ್ಯ ಅಹಿಂಸೆಯಿಂದಲೇ ಸ್ವಾತಂತ್ರ್ಯ ಹೋರಾಟದಂತೆ ತನ್ನ ಸೇವಾ ಕಾರ್ಯ ಮುಂದೆವರೆಸಿತ್ತು ಎಂದ ಡಾ.ನರಗುಂದ ಅವರು ಖ್ಯಾತ ಸಂಶೋದಕರಾದ ಕಲ್ಬುರ್ಗಿ ಅವರ ಶಿಷ್ಯತನವನ್ನು ತಾವು ಪಡೆದಿದ್ದರ ಕುರಿತು ವಿವರಿಸಿದರಲ್ಲದೇ ಸೈನಿಕರ ಕೆಚ್ಚೆದೆಯ ಹೋರಾಟ ಕುರಿತು ತಿಳಿ ಹೇಳಿದರಲ್ಲದೇ ಜೀವ ವಿದ್ದರೆ ಜೀವನ ಕಾಯಕ ಅನ್ನುವಂತಹದ್ದು ಎಲ್ಲರಿಗೂ ಬೇಕು ಬಡತನವಿದ್ದಲ್ಲಿ ವಿದ್ಯೆ ಎಂಬುದು ರಾರಾಜಿಸುತ್ತದೆ ಕಾರಣ ವಿದ್ಯಾರ್ಥಿಗಳು ಮಾತಾಪಿತರನ್ನು ಶಿಕ್ಷಕರನ್ನು ಹಾಗೂ ಕಲಿಕಾ ಸಂಸ್ಥೆಯನ್ನು ಕಟ್ಟಿದವರನ್ನು ಸ್ಮರಣೆ ಮಾಡಬೇಕೆಂದು ಹೇಳುತ್ತಾ ಓದು ಬರಹದಲ್ಲಿ ಶ್ರದ್ದೆ ವಿರಲಿ ಎಂದರು.

ಇನ್ನೋರ್ವ ಅತಿಥಿ ತಮದಡ್ಡಿ ವಸತಿ ಶಾಲೆಯ ಪ್ರಾಚಾರ್ಯ ದಯಾನಂದ ಹಿರೇಮಠ ಅವರು ಮಾತನಾಡಿ ಎನ್.ಎಸ್.ಎಸ್.ಶಿಬಿರದಲ್ಲಿ ಸೇವೆಯನ್ನು ಜೀವನದುದ್ದಕ್ಕೂ ಮುಂದುವರೆಸಬೇಕು ಗ್ರಾಮಾಂತರ ಪ್ರದೇಶ ಶಾಲಾ ಕಾಲೇಜುಗಳಲ್ಲಿಯೂ ಸ್ವಚ್ಚತೆಯ ಬಗ್ಗೆ ಕಾಳಜಿ ವಹಿಸಬೇಕೆಂದ ಅವರು ಸಾಮಾಜಿಕ ಶೈಕ್ಷಣಿಕ ಜವಾಬ್ದಾರಿ ಅರೀತುಕೊಂಡು ಸಮಾಜದ ಜನತೆಯ ಸೇವೆ ಗೈಯಲು ಮುಂದಾಗಿ ಒಳ್ಳೆಯ ಪ್ರಜೆಗಳಾಗಿ ಬಾಳಿ ಬೆಳಗರೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇನ್ನೋರ್ವ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಜಿ.ರಾಠೋಡ ಅವರು ಮಾತನಾಡಿ ಮಕ್ಕಳೆ ತಾವು ಅಲ್ಲಿದ್ದರೆ ನಾವು ಇಲ್ಲಿ ಒಂದು ವೇಳೆ ತಾವು ಅಲ್ಲಿಲ್ಲದಿದ್ದರೆ ನಾವೇಲ್ಲಿ ಎಂದು ಚಟಾಕೆ ಹಾರಿಸಿ ಮುಂದುವರೆಸಿ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ 500 ಯೋಧರು ಭೂಮಿಗಾಗಿ ತ್ಯಾಗ ಮಾಡಿದ ಯೋಧರಿಗಾಗಿ ನಾವೇಲ್ಲರೂ ಸೇಲೂಟ್‍ನ್ನು ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಸೇಲೂಟ್‍ನ್ನು ಕೊಡಿಸಿ ಗೌರವಿಸಿದ ಅವರು 1965ರಲ್ಲಿ ಬಂದಂತಹ ಯೋಜನೆ ಇದಾಗಿದ್ದು ಇಂತಹ ಸಂಘಟನೆಯಿಂದ ಸ್ವಚ್ಚತೆ ಸಮಾನತೆಯೊಂದಿಗೆ ಜನೆತೆಯೊಂದಿಗೆ ಸಂಬಂದ ಬೆಳೆಸುವಂತಹ ಕಾರ್ಯವಾಗಬೇಕೆಂಬುದೇ ಈ ಎನ್.ಎಸ್.ಎಸ್. ಸಂಘಟನೆಯ ಉದ್ದೇಶವಾಗಿದೆ ಎಂದರು.

ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಯಾವಾಗಲೂ ವಿದ್ಯಾರ್ಥಿಗಳು ತಮ್ಮ ವಿದ್ಯೆಯ ಕಲಿಕೆಯೊಂದಿಗೆ ವ್ಯಾಮಾಸೆ ಶರೀರ ಬಲಂ ವರ್ತತೆ ಎಂಬ ಪಧವನ್ನು ಬಳಿಸಿ ದಿನನಿತ್ಯ ವ್ಯಾಯಾಮ ಮಾಡುವ ಕಲೆಯನ್ನು ಡೂಡಿಸಿಕೊಳ್ಳಬೇಕು ಈ ಎನ್.ಎಸ್.ಎಸ್.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯ ಮಾಡಿದ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯಲ್ಲಾಗಲಿ ನೇವಿಯಲ್ಲಾಗಲಿ, ಸೈನಿಕರಲ್ಲಾಗಲಿ ಪ್ರಾದ್ಯಾನೆತೆ ಪಡೆಯಬಹುದು ಅಂತಹ ಸೇವೆಯಿಂದ ದೇಹ ಸದೃಢಗೊಂಡು ಆರೋಗ್ಯವಂತರಾಗಿ ಬಾಳಲು ಸಾಧ್ಯವೆಂದರು. ಯಾವುದೇ ವ್ಯಕ್ತಿ ದುಶ್ಚಟಗಳಿಂದ ಮುಂದುವರೆದಿದ್ದರೆ ಅವರಿಗೆ ತಿಳುವಳಿಕೆ ಹೇಳುವ ಕಾರ್ಯವಾಗಬೇಕು ಎಂದು ಹೇಳಿದ ಅವರು ಇಂತಹ ಸಂಘಟನೆ ಮಾಡುವ ನಿಸ್ಕಾಮ ಸೇವಾ ಕಾರ್ಯದಿಂದ ಗ್ರಾಮಾಂತರ ಪ್ರದೇಶಗಳಲ್ಲಿಯೂ ಸಹ ಸ್ವಚ್ಚತಾ ಕಾರ್ಯ ಕೈಗೊಂಡು ಅಲ್ಲಿಯೂ ಹೆಸರು ಗಳಿಸುವ ಕಾರ್ಯ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ಬಂದಂತಹ ಪ್ರಶಸ್ತಿ ಅನ್ಯರಿಗೆ ದಒರೆಯಬೇಕೆಂಬ ಆಸೆಹೊಂದಬೇಕು ಒಳ್ಳೆಯತನ ಒಳ್ಳೆಯ ವಿಚಾರಗಳಿಸಿಕೊಳ್ಳಬೇಕು ಸಮಯಕ್ಕಿರುವ ಮಹತ್ವವನ್ನು ಈ5ದಿನ ನಡೆದ ಕಾರ್ಯದಿಂದ ಅರೀತುಕೊಂಡಿದ್ದೀರಿ ಮುಂದಿನ ದಿನಗಳಲ್ಲಿ ಇನ್ನೂ 40 ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸೂಮಾರು ನೂರಾರು ಸಂಘಟನೆಗಳನ್ನು ಸಂಘಟಿಸಿ ಗ್ರಾಮಾಂತರ ಮಟ್ಟದಲ್ಲಿಯೂ ಸ್ವಚ್ಚತಾ ಕಾರ್ಯ ಮಾಡುವ ಕುರಿತು ವಿಚಾರ ವ್ಯಕ್ತಪಡಿಸಿದ ಅವರು ಇದು ಅಂತ್ಯವಲ್ಲಾ ಇದು ಆರಂಭವೆಂದರು.

ಇದೇ ಸಮಯದಲ್ಲಿ ಶಿಬಿರದಲ್ಲಿ ಪಾಲ್ಗೊಂಡು ವಿವಿಧ ತಮ್ಮ ಕಲೆಯನ್ನು ಪ್ರದರ್ಶಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಪ್ರಾಚಾರ್ಯ ಶ್ರೀಮತಿ ಎಂ.ಎಸ್.ಬಿರಾದಾರ, ಎಸ್.ಬಿ.ಮಂಗ್ಯಾಳ, ಶಿಕ್ಷಕ ಭೀಮಣ್ಣ ಅರಕೇರಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ ಪಾಟೀಲ, ಸುನೀಲ ಪಾಟೀಲ, ಕಿರಣ ಪಾಟೀಲ, ಪ್ರಾಚಾರ್ಯ ಅಶೋಕ ಕಟ್ಟಿ, ಎಸ್.ಸಿ.ಗುಡಗುಂಟಿ, ಎನ್.ಬಿ.ಪಾಟೀಲ, ಎಂ.ಎಸ್.ರಾಯಗೊಂಡ, ವ್ಹಿ.ಎಚ್.ಘಟನೂರ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಕುಮಾರಿ ಜ್ಯೋತಿ ಪೊಲೀಸ್‍ಪಾಟೀಲ, ಜೆ.ಎಂ.ಕೊಣ್ಣೂರ, ಮುತ್ತು ಬಿರಾದಾರ, ವಿಠ್ಠಲ ವಿಜಾಪೂರ, ಎಸ್.ಎಸ್.ಪಾಟೀಲ, ಕುಮಾರಿ ಆರ್.ಎಚ್.ಯರದಿಹಾಳ, ವ್ಹಿ.ಎಸ್.ಬಿರಾದಾರ, ಪ್ರಕಾಶ ಪಾಟೀಲ, ಆರ್.ಬಿ.ಪಾಟೀಲ, ಶ್ರೀಮತಿ ಎಸ್.ಬಿ.ಸಾತಕೇಡ, ಎಸ್.ಎಸ್.ಬಿದರಕುಂದಿ, ಶಿವು ನಾಯಕ, ಎಸ್.ಎಂ.ಸಜ್ಜನ, ಜಿ.ಎಸ್.ಹೆಸರೂರ, ಶ್ರೀಮತಿ ಸನಾ ಪಠಾಣ, ಎಸ್.ಎಂ.ಖಿಂಡಿಮನಿ, ಪ್ರಕಾಶ ವಾಲಿಕಾರ, ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಎಸ್.ವ್ಹಿ.ಜಾಮಗೊಂಡಿ ಅವರು ಪ್ರಾಸ್ಥಾವಿಕ ಮಾತನಾಡಿದರು.

ಪ್ರಕಾಶ ಪಾಟೀಲ ಸ್ವಾಗತಿಸಿದರು. ಬಿ.ಆಯ್.ಹಿರೇಹೊಳಿ ವಂದಿಸಿದರು.