ಬಡತನದಲ್ಲಿ ಬೆಂದ ವಿದ್ಯಾರ್ಥಿ ರಾಜ್ಯಕ್ಕೆ 2ನೇ ರ್ಯಾಂಕ್

ತಾಳಿಕೋಟೆ : ಎ.22:ಬಡತನದ ಬವಣೆ ತಪ್ಪಿಸಿಕೊಳ್ಳುವದಕ್ಕಾಗಿ ತುತ್ತಿನ ಚೀಲ ತುಂಬಿಸಿಕೊಳ್ಳುವದಕ್ಕಾಗಿ ನೇರ ರ್ಯಾಜ್ಯಕ್ಕೆ ಗೂಳೆ ಹೋಗಿದ್ದ ಕುಟುಂಭದ ಮಗ ತಾಳಿಕೋಟೆಯ ಎಸ್.ಕೆ.ಪಿ.ಯು.ಕಾಲೇಜ್ ವಿಧ್ಯಾರ್ಥಿ ರಾಹುಲ್ ಮೋತಿಲಾಲ್ ರಾಠೋಡ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆಯುವದರೊಂದಿಗೆ ಬಡತನವು ಶಿಕ್ಷಣಕ್ಕೆ ಅಡ್ಡಿಯಾಗದು ಎಂಬುದನ್ನು ನಿರೂಪಿಸಿದ್ದಾನೆ.

ರಾಜ್ಯಕ್ಕೆ ಟಾಫರ್ ಆದ ವಿಧ್ಯಾರ್ಥಿ ರಾಹುಲ್ ರಾಠೋಡನ ತಂದೆ ಮೋತಿಲಾಲ್-ತಾಯಿ ಸವಿತಾ ಅವರು ಕಳೆದ 15 ವರ್ಷಗಳ ಹಿಂದೆಯೇ ತಾವು ಅನುಭವಿಸುತ್ತಿರುವ ಬಡತನ ಮಕ್ಕಳಿಗೆ ತಾಗದಿರಲಿ ಎಂಬ ಭಾವನೆಯೊಂದಿಗೆ ಮಕ್ಕಳಿಗೆ ಉತ್ತಮ ವಿಧ್ಯಾಭಾಸಕ್ಕೆ ತಾಳಿಕೋಟೆಯಲ್ಲಿ ವೀರಶೈವ ವಿಧ್ಯಾವರ್ದಕ ಸಂಘದಡಿಯಲ್ಲಿ ನಡೆಯುವ ಎಸ್.ಕೆ.ಪಿಯು ಕಾಲೇಜ್‍ನ ಅವನ ಇಚ್ಚೆಯಂತೆ ಕಲಾ ವಿಭಾಗಕ್ಕೆ ಮತ್ತು ಹಾಸ್ಟೇಲ್‍ಗೆ ಸೇರಿಸಿ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿಯಲ್ಲಿ ತಮ್ಮ ದುಡಿಮೆಯನ್ನು ಮುಂದುವರೆಸಿದ್ದಾರೆ.

   ರಾಹುಲ್ ರಾಠೋಡ ತಂದೆ-ತಾಯಿ ಮೂಲತ ಯಾತಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನ್ನಾ ನಾಯಕ ತಾಂಡಾದ ಮಗ ರಾಹುಲ್ ತಾಳಿಕೋಟೆಯ ಎಸ್.ಕೆ.ಪಿಯು ಕಾಲೇಜಿನಲ್ಲಿ ಓದುತ್ತಿದ್ದಾನೆ. ರಾಹುಲ್‍ನ ಸಹೋದರಿಯರಾದ ರಂಜಿತಾ ಎಂಬ ಬಾಲಕಿ ಮುರಾರ್ಜಿ ಶಾಲೆಯಲ್ಲಿ ಓದುತ್ತಿದ್ದರೆ ಇನ್ನೋರ್ವ ಸಹೋದರಿ ದೀಪಾ ಎಂಬವಳು ಕೆಂಭಾವಿ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ.
   ಕುಟುಂಭದ ಬಡತನವನ್ನು ಅರೀತುಕೊಂಡಿರುವ ಈ ವಿಧ್ಯಾರ್ಥಿಗಳು ಶಿಕ್ಷಣದಲ್ಲಿ ನಾಮುಂದು ನೀಮುಂದು ಎಂಬಂತೆ ಉತ್ತಮವಾದ ಅಂಕಗಳಿಕೆಯಲ್ಲಿ ಸಾಗಿದ್ದಾರೆ. ರಾಹುಲ್ ಮೋತಿಲಾಲ ರಾಠೋಡ ರಾಜ್ಯಕ್ಕೆ ಎರಡನೇ ರ್ಯಾಂಕ್ ಬಂದಿರುವದು ಕುಟುಂಬಕ್ಕೆ ಎಲ್ಲಿಲ್ಲದ ಸಂತಸತಂದಿದ್ದು ಅದರ ಜೊತೆಯಾಗಿ ಜನ್ಮ ನೀಡಿದ ನೆಲ ಹುಣಸಗಿ ಪಟ್ಟಣ ಮತ್ತು ಶಿಕ್ಷಣ ನೀಡಿದ ಶ್ರೀ ಖಾಸ್ಗತೇಶ್ವರ ಪದವಿ ಪೂರ್ವ ಕಾಲೇಜಿಗೆ ಮತ್ತು ಕಲಿಸಿದ ಗುರು ವೃಂದದವರ ಹೆಸರನ್ನು ಅಚ್ಚಳಿಯದಂತೆ ರಾಜ್ಯಕ್ಕೆ ಪರಿಚಯಿಸಿದ್ದಾನೆ.
   ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದುಕೊಂಡ ರಾಹುಲ್‍ನ ಸುದ್ದಿ ಅರೀತ ತಂದೆ ತಾಯಿಗಳು ರತ್ನಾಗಿರಿಯ ಗುಡಿಸಲಿನಲ್ಲಿ ವಾಸಿಸುತ್ತಿರುವ ತಂದೆ ತಾಯಿಯ ಸಹಾಯಕ್ಕೆ ಇದ್ದ ರಾಹುಲ್‍ನಿಗೆ ಸಿಹಿ ತಿನ್ನಿಸಿ ತಮ್ಮ ಸಂಗಡಿಗರೊಂದಿಗೆ ಸಂಭ್ರಮವನ್ನು ಆಚರಿಸಿ ಖುಷಿ ಹಂಚಿಕೊಂಡಿದ್ದಾರೆ.

ರಾಹುಲ್ ರಾಠೋಡ ಸಮಾಶಾಸ್ತ್ರ, ಶಿಕ್ಷಣ ವಿಷಯದಲ್ಲಿ ನೂರಕ್ಕೆ 100 ಅಂಕ ಪಡೆದು, ಸಂಸ್ಕøತ ವಿಷಯಕ್ಕೆ 99, ಕನ್ನಡ ಹಾಗೂ ಇತಿಹಾಸ ವಿಭಾಗದಲ್ಲಿ 98 ಅಂಕ ಪಡೆದಿದ್ದಾನೆ. ಆರ್ಥಶಾಸ್ತ್ರಕ್ಕೆ 97 ಅಂಕ ಪಡೆದುಕೊಂಡಿದ್ದಾನೆ.

    ನಮಗಿರುವ ಬಡತನದ ಕಷ್ಟ ನಮಗಿರಲಿ ಮಕ್ಕಳು ಒಳ್ಳೆಯ ವಿಧ್ಯಾವಂತರಾಗಲಿ ಎಂಬ ಉದ್ದೇಶದಿಂದ ಒಳ್ಳೆಯ ಶಿಕ್ಷಣ ಸಂಸ್ಥೆಯಾದ ತಾಳಿಕೋಟೆಯ ಎಸ್.ಕೆ.ಪಿಯು ಕಾಲೇಜ್‍ಗೆ ಸೇರಿಸಿದ್ದೇವು ಈಗ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದುಕೊಳ್ಳುವದರೊಂದಿಗೆ ನಮ್ಮ ಕಷ್ಟದಿನದಲ್ಲಿಯೂ ಮಗ ರಾಹುಲ್ ಖುಷಿಯನ್ನು ಕೊಟ್ಟಿದ್ದಾನೆ ಉತ್ತಮ ಶಿಕ್ಷಣ ನೀಡಿದ ಸಂಸ್ಥೆಗೆ ಕುಟುಂಭ ಋಣಭಾರವಾಗಿದೆ.

ಸವಿತಾ ಮೋತಿಲಾಲ್ ರಾಠೋಡ. ರಾಹುಲ್‍ನ ತಂದೆ

   ನಮ್ಮ ಕಾಲೇಜಿನ ವಿಧ್ಯಾರ್ಥಿ ರಾಹುಲ್ ರಾಠೋಡ ಶಿಕ್ಷಣದಲ್ಲಿ ಅಷ್ಟೇ ಅಲ್ಲದೇ ಸಿಸ್ತು ಮತ್ತು ಸಮಯ ಪಾಲನೆಯಲ್ಲಿ ಮುಂಚೂಣಿಯಲ್ಲಿದ್ದ ತನಗೆ ಅರ್ಥವಾಗದ ವಿಷಯವನ್ನು ನೇರವಾಗಿ ಕೇಳಿ ತಿಳಿದುಕೊಳ್ಳುವಂತಹ ಅವ್ಯಾಸ ಅವನಲ್ಲಿತ್ತು ಆತನು ಎಷ್ಟು ಭಾರಿ ಪ್ರಶ್ನೇ ಮಾಡಿದರೂ ನಮಗೆ ಬೇಜಾರು ಆಗುತ್ತಿದ್ದಿಲ್ಲಾ ಆತನ ಕಲಿಕೆಯ ಆಸಕ್ತಿ ನೋಡಿ ನಮಗೆ ಖುಷಿ ನೀಡುತ್ತಿತ್ತು ಸದ್ಯ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದುಕೊಂಡಿರುವದು ನಮ್ಮ ಶಿಕ್ಷಣ ಸಂಸ್ಥೆಯ ಹಿರಿಮೆ ಹೆಚ್ಚಿಸಿದಂತಾಗಿದೆ. ವಿಧ್ಯಾರ್ಥಿಯ ಸಾಧನೆಗೆ ವೀ.ವಿ.ಸಂಘದ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

ಕೆ.ಕಿಶೋರಕುಮಾರ ಪ್ರಾಚಾರ್ಯರು ಎಸ್.ಕೆ.ಪಿ.ಯು.ಕಾಲೇಜ್

   ನನಗೆ ಉತ್ತಮವಾದ ಶಿಕ್ಷಣ ನೀಡುವಲ್ಲಿ ಎಸ್.ಕೆ.ಪಿಯು ಕಾಲೇಜ್‍ನ ಶಿಕ್ಷಕ ವೃಂದ ನಾನೇಂದು ಮರೆಯಲಾರೆ ಮುಂದಿನ ದಿನಗಳಲ್ಲಿ ಪಧವಿ ನಂತರ ಐಎಎಸ್ ಅಧಿಕಾರಿಯಾಗುವ ಕನಸನ್ನು ಕಟ್ಟಿಕೊಂಡಿದ್ದೇನೆ.
                 ರಾಹುಲ್ ಮೋತಿಲಾಲ್ ರಾಠೋಡ ವಿಧ್ಯಾರ್ಥಿ