ಬಡತನದಲ್ಲಿ ಅರಳಿದ ಪ್ರತಿಭೆ ಲಾವಣ್ಯ ಇತರರಿಗೆ ಮಾದರಿ

(ಸಂಜೆವಾಣಿ ವಾರ್ತೆ)
ಔರಾದ : ಎ.24:ಸಾಧನೆಗೆ ಬಡತನ ಅಡ್ಡಿಯಲ್ಲ, ಆತ್ಮವಿಶ್ವಾಸವೊಂದಿದ್ದರೆ ಸಾಕು ಎಂತಹ ಕಾರ್ಯವನ್ನು ಸಾಧಿಸಬಹುದು ಎನ್ನುವುದಕ್ಕೆ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.96% ಪ್ರತಿಶತ ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಲಾವಣ್ಯ ರಾಜಕುಮಾರ ಖರಾಬೆ ಅವರು ಉತ್ತಮ ಉದಾಹರಣೆ.
ಲಾವಣ್ಯ ಖರಾಬೆ ಅವರು ಮೂಲತಃ ಔರಾದ ಪಟ್ಟಣದ ನಿವಾಸಿ ರಾಜಮಾರ ಖರಾಬೆ ಅವರ ದ್ವಿತೀಯ ಸುಪುತ್ರಿ, ರಾಜಕುಮಾರ ಖರಾಬೆ ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದು ಸಣ್ಣ ಪುಟ್ಟ ಆದಾಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ವಿದ್ಯಾಭ್ಯಾಸದಲ್ಲಿ ಚುರುಕಾಗಿರುವ ಲಾವಣ್ಯ ಅವರು ಪಟ್ಟಣದ ಪತ್ರಿ ಸ್ವಾಮಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 576 ಅಂಗಳನ್ನು ಪಡೆದು ಶೇ.96% ಪ್ರತಿಶತ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಹಾಗೂ ತಂದೆ ತಾಯಿಯ ಕೀರ್ತಿ ಹೆಚ್ಚಿಸಿದ್ದಾಳೆ. ಮುಂದೆ ನಿಟ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.
ಪತ್ರಿ ಸ್ವಾಮಿ ಕಾಲೇಜು ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ತಮ್ಮ ಕಾಲೇಜಿನ ಕೀರ್ತಿ ಹೆಚ್ಚಿಸಿದ ಹಾಗೂ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಲಾವಣ್ಯ ಖರಾಬೆ ಅವರಿಗೆ ಹತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಿ ಶುಭ ಹಾರೈಸಿದ್ದಾರೆ. ಕಾಲೇಜು ಸಿಬ್ಬಂದಿ, ಕಾಯಕ ಯೋಗಿ ಟ್ರಸ್ಟ್, ಸರಸ್ವತಿ ಶಾಲೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಲಾವಣ್ಯ ಅವರಿಗೆ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದ್ದಾರೆ.
ಲಾವಣ್ಯ ಸಾಧನೆಗೆ ಬೆನ್ನೆಲುಬಾದ ತಂದೆ : ನನ್ನ ತಂದೆಯವರು ನನ್ನ ಪ್ರತಿಭೆಗೆ ನೀರೆರೆದು ಸಹಕಾರ ಪೆÇ್ರೀತ್ಸಾಹ ನೀಡಿ, ನನ್ನ ಓದಿಗೆ ಸಹಕರಿಸಿದ್ದೆ ನನ್ನ ಯಶಸ್ಸಿಗೆ ಕಾರಣ. ಅದರೊಂದಿಗೆ ನನ್ನ ತಾಯಿ, ಸಹೋದರಿ, ಕಾಲೇಜಿನ ಉಪನ್ಯಾಸಕರು ಪ್ರೇರಣೆ ಎಂದಿದ್ದಾರೆ.