ಬಡಜನರಿಗೆ ಆಹಾರ ಕಿಟ್ ವಿತರಿಸಲು ಶಿಖರಮಠ ಒತ್ತಾಯ

ರಾಯಚೂರು.ಜು.೦೮-ರಾಜ್ಯದ ಎಲ್ಲಾ ವರ್ಗದ ಬಡಜನರಿಗೆ ಆಹಾರ ಸಾಮಗ್ರಿ ಕಿಟ್ ನೀಡಲು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ ಅವರು ಜಿಲ್ಲಾಧಿಕಾರಿಗಳ ಮುಖಂತರಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೋವಿಡ್ ೧೯ ಕರೋನಾ ಮಹಾಮಾರಿ ರೋಗದಿಂದ ಇಡೀ ರಾಜ್ಯದ ಜನ ಸಾವು – ನೋವುಗಳಿಂದ ಸಂಕಷ್ಟ ಎದುರಿಸುತ್ತಿದ್ದು ದೀರ್ಘ ಕಾಲದ ಲಾಕ್ ಡೌನ್ ನಿಂದಾಗಿ ದೈನಂದಿನ ಕೆಲಸ ಮಾಡಿ ಕೂಲಿ ಪಡೆದು ಜೀವನ ಸಾಗಿಸುತ್ತಿದ ಜನರ ಪರಿಸ್ಥಿತಿ ಗಂಭೀರವಾಗಿದೆ ಅದರಿಂದ ರಾಜ್ಯದ ಎಲ್ಲಾ ಸಮುದಾಯಗಳ ಮಂಡಳಿಗಳ ವತಿಯಿಂದ ಆಯಾ ಸಮುದಾಯದ ಬಡಜನರಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿ.ವಿಜಯ ರಾಜೇಂದ್ರ, ಮಂಜುನಾಥ್ ಪಾಟೀಲ್, ಪ್ರಮೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.