ಬಡಜನರಿಗೂ ಯೋಜನೆಯ ಲಾಭ ದೊರಕಲಿ


ಗಜೇಂದ್ರಗಡ,ಮಾ.30: ನರೇಗಾ ಯೋಜನೆಯಡಿ ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು, ಗ್ರಾಮೀಣ ಪ್ರದೇಶಗಳ ಕಡುಬಡವರಿಗೂ ಯೋಜನೆಯ ದೊರಕು ವಂತ್ತಾಗಬೇಕು ಎಂದು ಗಜೇಂದ್ರಗಡ ತಾಲೂಕು ಪಂಚಾಯತ ಕಾರ್ಯ ನಿರ್ವಹಕಾಧಿಕಾರಿ ಕಿಶನ ಕಲಾಲ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಬುಧವಾರ ನಡೆದ ಬಿಎಫ್ಟಿ, ಕಾಯಕ ಮಿತ್ರ ಹಾಗೂ ಕಾಯಕಬಂಧುಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ಎಪ್ರೀಲ್ 01 ರಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳಲ್ಲಿ ನರೇಗಾ ಕೆಲಸ ಆರಂಭವಾಗಲಿದ್ದು, ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸವಾಗಬೇಕೆಂದು ತರಬೇತಿಯಲ್ಲಿ ಭಾಗವಹಿಸಿದ್ದ ಕಾಯಕಬಂಧುಗಳಿಗೆ ಕಿವಿಮಾತು ಹೇಳಿದರು.
ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಯೋಜನೆಯಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತ್ತಾಗವೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ ಎಂದರು.
ನರೇಗಾ ಸಹಾಯಕ ನಿರ್ದೇಶಕ ವಾಸುದೇವ ಪೂಜಾರ ಮಾತನಾಡಿ, ನರೇಗಾ ಕೂಲಿಕಾರರಿಗೆ ದಿನವೊಂದಕ್ಕೆ ಕೂಲಿ ಮೊತ್ತವನ್ನು 316 ರೂಪಾಯಿಗೆ ಹೆಚ್ಚಿಸಲಾಗಿದೆ. ಬೇಸಿಗೆ ಅವಧಿಯ 60 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದ್ರೆ ಕೂಲಿಕಾರರಿಗೆ 18960 ರೂಪಾಯಿ ಸಿಗುತ್ತದೆ. ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಭಿತ್ತನೆಯ ಕಾರ್ಯಕ್ಕೆ ಸದೂಪಯೋಗ ಪಡಿಸಿಕೊಳ್ಳಲು ನೆರವಾಗುವುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ತಾಲೂಕು ಸಮಾಜಿಕ ಲೆಕ್ಕ ಪರಿಶೋಧನೆ ಸಂಯೋಜಕ ವಿಜಯಮಹಾಂತೇಶ ಹಿರೇಮಠ ನರೇಗಾ ಯೋಜನೆಯ ಕುರಿತು ತರಬೇತಿ ನೀಡಿದರು.
ಮಾಹಿತಿ ಮತ್ತು ಶಿಕ್ಷಣ ಸಂಯೋಜಕರಾದ ಮಂಜುನಾಥ ಹಳ್ಳದ ಮಾತನಾಡಿ, ಕಾಯಕ ಬಂಧುಗಳು ಎಂದರೇ ಯಾರು? ಕಾಯಕ ಬಂಧುಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ತರಬೇತಿ ನೀಡಿದರು. ಕಂದಕಬಧುಗಳ ನಿರ್ಮಾಣ ಮತ್ತು ಅನುಷ್ಟಾನ ಕುರಿತು ತಾಂತ್ರಿಕ ಸಂಯೋಜಕ ಪ್ರಿಯಾಂಕ ಅಂಗಡಿ, ತಾಂತ್ರಿಕ ಸಹಾಯಕ ಸಿದ್ದು ಗುಡಿಮನಿ ವಿಷಯ ಮಂಡಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಬಿಎಫ್ಟಿ, ಕಾಯಕ ಮಿತ್ರರು, ಕಾಯಕ ಬಂಧುಗಳು ಹಾಗೂ ನರೇಗಾ ಸಿಬ್ಬಂದಿ ವರ್ಗ, ತಾಲೂಕು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಾಗಾರವನ್ನು ಗ್ರಾಮ ಕಾಯಕ ಮಿತ್ರ ತನುಜಾ ಮ್ಯಾಗೇರಿ ನಿರೂಪಿಸಿದರು.
ಬಾಕ್ಸ್
ತರಬೇತಿ ಕಾರ್ಯಾಗಾರದ ನಂತರ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಪ್ರಚಾರ ಮಾಡುವ ರೋಜಗಾರ ವಾಹಿನಿ ಜಾಗೃತಿ ರಥಕ್ಕೆ ಮಾನ್ಯ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕಿಶನ ಕಲಾಲ ಚಾಲನೆ ನೀಡಿದರು.
ಈ ವಾಹಿನಿಯು ಗಜೇಂದ್ರಗಡ ತಾಲೂಕಿನ 11 ಗ್ರಾಮ ಪಂಚಾಯತಿಗೆ ತೆರಳಲಿದ್ದು, ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ನರೇಗಾ ಯೋಜನೆ ಮತ್ತು ಯೋಜನೆಯಡಿ ದೊರಕುವ ಸೌಲಭ್ಯಗಳ ಬಗ್ಗೆ ಕೂಲಿಕಾರರಿಗೆ ಹಾಗೂ ಸಾರ್ವಜಕರಿಗೆ ಮಾಹಿತಿಯನ್ನು ನೀಡಲಿದೆ.