ಬಡಕೇಗುಡ್ಲು ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಹುಳಿಯಾರು, ಆ. ೧- ಕಂದಿಕೆರೆ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಹುಳಿಯಾರು ಸಮೀಪದ ಬಡಕೇಗುಡ್ಲು ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಗಂಡು ಮಕ್ಕಳ ವಿಭಾಗದಲ್ಲಿ ೨೦೦ ಮೀ. ಗಿರೀಶ್ ಪ್ರಥಮ ಮತ್ತು ಮಂಜುನಾಥ್ ದ್ವಿತೀಯ, ೪೦೦ ಮೀಟರ್ ಯಶವಂತ್ ಪ್ರಥಮ, ಪ್ರಶಾಂತ್, ದ್ವಿತೀಯ, ೬೦೦ ಮೀಟರ್ ಓಟದಲ್ಲಿ ಗಿರೀಶ್ ದ್ವಿತೀಯ, ಮಾದೇಶ್ ತೃತೀಯ, ಗುಂಡು ಎಸೆತ ಗಿರೀಶ್ ಪ್ರಥಮ, ಎತ್ತರ ಜಿಗಿತ ಮಂಜುನಾಥ್ ಪ್ರಥಮ, ಚಕ್ರ ಎಸೆತ ಮಾದೇಶ ದ್ವಿತೀಯ, ಥ್ರೋಬಾಲ್ ಮಾದೇಶ ತಂಡ ಪ್ರಥಮ ಬಹುಮಾನ ಪಡೆದಿದ್ದಾರೆ. ಹೆಣ್ಣು ಮಕ್ಕಳ ವಿಭಾಗದಲ್ಲಿ ಗುಂಡು ಎಸೆತ ಸಿಂಚನ ಪ್ರಥಮ, ಕಬಡ್ಡಿ ಅನಿತಾ ತಂಡ ಪ್ರಥಮ, ಥ್ರೋಬಾಲ್ ದೀಪಿಕಾ ಪ್ರಥಮ, ಖೋಖೋ ಶ್ರಾವಂತಿ ತಂಡ ದ್ವಿತೀಯ, ಎತ್ತರ ಜಿಗಿತ ಲೇಖನ ತೃತೀಯ ಬಹುಮಾನ ಗಳಿಸಿದ್ದಾರೆ.
ಮಕ್ಕಳ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ಶಾಂತ, ಎಸ್‌ಡಿಎಂಸಿ ಅಧ್ಯಕ್ಷರಾದ ವೆಂಕಟೇಶ್, ಸದಸ್ಯರುಗಳು, ಸಹಶಿಕ್ಷಕರುಗಳು ಪೋಷಕರುಗಳು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.