ಬಡಕುಟುಂಬವೊಂದಕ್ಕೆ ಶೌಚಾಲಯ ನಿರ್ಮಿಸಲು ನೆರವಾದ ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ

ಗುರುವಾಯನಕೆರೆ, ನ.೮- ಶ್ರೀಧರ್ಮಸ್ಥಳ ವಿಪತ್ತು ಸೇವಾ ಹೊಸಂಗಡಿ ಘಟಕದ ಸಂಯೋಜಕಿ ಜಯಶೀಲ ಅವರು ಎಂಭತ್ತೈದು ವರ್ಷದ ವಯೋವೃದ್ಧೆ ಅಪ್ಪಿಪೂಜಾರ್ತಿ ಅವರ ಕುಟುಂಬವನ್ನು ಭೇಟಿಮಾಡಿ ಅವರು ಶೌಚಾಲಯ ಇಲ್ಲದೆ ಎದುರಿಸುತ್ತಿರುವ ಸಮಸ್ಯೆಯನ್ನು ಗಮನಿಸಿ ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಹೊಸದಾಗಿ ಶೌಚಾಲಯವನ್ನು ನಿರ್ಮಿಸಿಕೊಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.

ಶ್ರೀಧರ್ಮಸ್ಥಳ ವಿಪತ್ತು ಸೇವಾ ಘಟಕದ ಸ್ವಯಂಸೇವಕರಾದ ರವೀಂದ್ರ ಅವರು ಕಾಶಿಪಟ್ಣಗ್ರಾಮದ ಅಪ್ಪಿಪೂಜಾರ್ತಿ ಅವರು ಶೌಚಾಲಯವಿಲ್ಲದೆ ಎದುರಿಸುತ್ತಿರುವ ಸಮಸ್ಯೆಯನ್ನು ಗ್ರಾಮಸ್ಥರಿಂದ ತಿಳಿದು ವಿಪತ್ತು ನಿರ್ವಹಣೆ ಸಂಯೋಜಕಿ ಜಯಶೀಲ ಅವರಿಗೆ ಮಾಹಿತಿಯನ್ನು ನೀಡಿದ್ದರು.

ವಿಷಯವನ್ನು ತಿಳಿದ ಸಂಯೋಜಕಿ ಜಯಶೀಲಾ ಅವರು ಅಪ್ಪಿಪೂಜಾರ್ತಿ ಅವರ ಮನೆಭೇಟಿಮಾಡಿ ಕುಟುಂಬದ ಪರಿಸ್ಥಿತಿಯನ್ನು ಅರಿತುಕೊಂಡರು.

ಇವರ ಕುಟುಂಬದಲ್ಲಿ ಅಪ್ಪಿಪೂಜಾರ್ತಿ ಅವರ ಮಗಳಾದ ಮೋಹಿನಿ ಮತ್ತು ಮೂವರು ಹೆಣ್ಣು ಮಕ್ಕಳು ವಾಸವಿದ್ದಾರೆ.

ಮೊದಲ ಮಗಳು ಪಿಯುಸಿ ಓದುತ್ತಿದ್ದು ಎರಡನೆ ಮಗಳು ಹತ್ತನೇ ತರಗತಿ ಓದುತ್ತಿದ್ದಾಳೆ. ಇನ್ನೋರ್ವ ಮಗಳು ಚಿಕ್ಕವಳು.

ತೀರಾ ಚಿಕ್ಕದಾದ ಮನೆಯಲ್ಲಿ ವಾಸವಾಗಿರುವ ಇವರು ಶೌಚಕ್ಕಾಗಿ ಬಯಲನ್ನೇ ನೆಚ್ಚಿಕೊಂಡಿರಬೇಕಾಗಿತ್ತು. ಬೇಸಿನ್ ಅಳವಡಿಸಿದ ಶೌಚಾಲಯ ಮನೆಯಲ್ಲಿಇದ್ದರೂ ಅದು ತೆರೆದ ಮಾದರಿ ಆಗಿದ್ದರಿಂದ ಪರಿಸ್ಥಿತಿ ಶೋಚನೀಯವಾಗಿತ್ತು. ಮನೆಗೆ ಅತಿಥಿಗಳು ಬಂದರೆ ಹೆಣ್ಣುಮಕ್ಕಳು ಶೌಚಕ್ಕೆ ಎದುರಿಸುವ ಸಮಸ್ಯೆ ಕಠಿಣವಾಗಿತ್ತು.

ಎಂಬತ್ತೈದು ವರ್ಷ ವಯಸ್ಸಿನ ಅಪ್ಪಿಪೂಜಾರ್ತಿ ಅವರು ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ಹೊಸದಾಗಿ ಶೌಚಾಲಯ ರಚನೆ ಮಾಡಿಕೊಳ್ಳುವಷ್ಟು ಆರ್ಥಿಕ ಪರಿಸ್ಥಿತಿ ಅವರಲ್ಲಿ ಇರಲಿಲ್ಲ. ಹಾಗಾಗಿ ಇರುವ ಸಮಸ್ಯೆಯಲ್ಲಿಯೇ ದಿನದೂಡುತ್ತಿದ್ದರು.

ಇವರ ಪರಿಸ್ಥಿತಿಯನ್ನು ಅರಿತ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕಿ ಜಯಶೀಲ ಅವರು ನೆತ್ತೋಡಿ ಗ್ರಾಮದ ಸಂಪತ್ಕುಮಾರ್ ಅವರಿಗೆ ಪರಿಸ್ಥಿತಿಯನ್ನು ವಿವರಿಸಿದರು.

ಸಾಮಾಜಿಕ ಕಳಕಳಿ ಹೊಂದಿರುವ ಸಂಪತ್ಕುಮಾರ್ ಅವರು ಈ ವಿಷಯವನ್ನು ಮೂಡಬಿದಿರೆಯ ಯುವವಾಹಿನಿ ಸಂಘಟನೆಗೆ ತಿಳಿಸಿದರು. ಅಲ್ಲಿಂದ ಸೇವ್ಲೈಫ್ಚಾರಿಟೇಬಲ್ಟ್ರಸ್ಟ್ಮಂಗಳೂರು ಇವರಿಗೆ ವಿಷಯ ಮುಟ್ಟಿತು.

ಸೇವ್ಲೈಫ್ಚಾರಿಟೇಬಲ್ಟ್ರಸ್ಟು ಕುಟುಂಬದ ಸಮಸ್ಯೆಯನ್ನು ಅರಿತು ಇಪ್ಪತ್ತೈದು ಸಾವಿರರೂಪಾಯಿಯ ಚೆಕುನ್ನು ಅಪ್ಪಿಪೂಜಾರ್ತಿ ಮಗಳಾದ ಮೋಹಿನಿ ಅವರಿಗೆ ಹಸ್ತಾಂತರಿಸಿದರು.ಮತ್ತು ಶೌಚಾಲಯ ರಚಿಸಿಕೊಳ್ಳುವಂತೆ ತಿಳಿಸಿದರು.

ಅಪ್ಪಿ ಪೂಜಾರ್ತಿ ಅವರ ಕುಟುಂಬದಲ್ಲಿ ಈಗ ಹೊಸದಾಗಿ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಾಣವಾಗಿದೆ. ಇದಕ್ಕೆ ಒಟ್ಟು ನಲವತ್ತೈದು ಸಾವಿರ ರೂಪಾಯಿ ಖರ್ಚಾಗಿರುತ್ತದೆ. 

ಇಪ್ಪತ್ತೈದು ಸಾವಿರ ರೂಪಾಯಿ ಸೇವೆ ಫ್ಚಾರಿಟೇಬಲ್ ಸ್ಟ್ನೀಡಿದ್ದರೆ, ಉಳಿದ ಮೊತ್ತವನ್ನು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘz ಮೂಲಕ ಸಾಲದ ನೆರವನ್ನು ಪಡೆದುಕೊಂಡಿರುತ್ತಾರೆ.

ಸಮಸ್ಯೆಯಕೂಪದಲ್ಲಿಇರುವಂತಹಕುಟುಂಬವನ್ನುಗುರುತಿಸಿನೆರವುನೀಡಲುಸಹಕರಿಸಿದಂತಹವಿಪತ್ತುನಿರ್ವಹಣಾಹೊಸಂಗಡಿಘಟಕದಸ್ವಯಂ ಸೇವಕರಾದ ರವೀಂದ್ರ ಹಾಗೂ ಸಂಯೋಜಕಿಯಾದ ಜಯಶೀಲ ಅವರ ಸೇವಾ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.