ಬಡಕುಟುಂಬದವರಿಗೆ ಮಾಸ್ಕ್, ಸ್ಯಾನಿಟೈಜರ ವಿತರಣೆ

ಧಾರವಾಡ ಜೂ.01–ಮೃದು ಮನೋಭಾವನೆಯಿಂದ ಸದಾ ಪದವೀಧರರ ಸಮಸ್ಯೆಗಳ ಅಧ್ಯಯನ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ, ಬಿಡದ ಹಠದಿಂದ ಕಾರ್ಯಮಾಡುವ ವ್ಯಕ್ತಿ ಎಸ್ ವಿ.ಸಂಕನೂರ ಅವರ ಹುಟ್ಟು ಹಬ್ಬವನ್ನು ಕೋವಿಡ್ ಸಮಯದಲ್ಲಿ ಮಾಸ್ಕ, ಸ್ಯಾನಿಟೈಜರ ವಿತರಣೆ ಮಾಡುವ ಮೂಲಕ ಆಚರಿಸಿರುವುದು ಉತ್ತಮ ಕಾರ್ಯ ಎಂದು ಶಿಕ್ಷಣ ಚಿಂತಕರಾದ ಮಲ್ಲಿಕಾರ್ಜುನ ಎಮ್ ಚಿಕ್ಕಮಠ ಹೇಳಿದರು.
ಅವರು ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಕಲಾ ಸ್ಪಂದನ ಹಾವೇರಿ ವತಿಯಿಂದ ಕರಮಕರಲೇಔಟ, ಲಕ್ಮೀ ಸಿಂಗನಕೇರಿ ಮತ್ತು ಮೆಹಬೂಬ್ ನಗರದ ಬಡಾವಣೆಯಲ್ಲಿನ ಬಡ ಕುಟುಂಬ ವರ್ಗದವರಿಗೆ ಮಾಸ್ಕ, ಸ್ಯಾನಿಟೈಜರ ವಿತರಣೆ ಮಾಡಿ ಮಾತನಾಡುತ್ತಾ ಸಂಕನೂರ ಅವರು ಮೃದು ಭಾಷೆ,ಹಿರಿಯರೊಂದಿಗೆ ಉತ್ತಮ ಬಾಂಧವ್ಯವಿಟ್ಟು, ಪ್ರಾಮಾಣಿಕತೆ ಕಾರ್ಯಮಾಡುವ ರಾಜಕಾರಣಿ. ಹಾಗಾಗಿ ಒಬ್ಬ ಉತ್ತಮ ಶಿಕ್ಷಕ ರಾಜಕಾರಣಿ ಎನಿಸಿದ್ದಾರೆ. ಸದಾ ಲವಲವಿಕೆಯಿಂದ ಕಾರ್ಯ ಮಾಡುವ ಅವರು ಇತರರಿಗೆ ಮಾದರಿ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಅಭಿಪ್ರಾಯಪಟ್ಟರು.
ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಎಚ್.ನಾಯಕ ಮಾತನಾಡಿ ಒಬ್ಬ ಸರಳ ವ್ಯಕ್ತಿತ್ವದ ಸಂಕನೂರ ಅವರ ಹುಟ್ಟು ಹಬ್ಬದ ದಿನದಂದು ಸಮಾಜದ ಜನರ ಆರೋಗ್ಯದ ಕಾಳಜಿಯ ಬಗ್ಗೆ ಗಮನಹರಿಸಿ ಅವರು ಸಂತೋಷವಾಗಿರಬೇಕು ಎಂಬ ಭಾವನೆ ಸರ್ವಶ್ರೇಷ್ಠವಾದದ್ದು ಎಂದು ಹೇಳಿದರು.
ರಕ್ತಭಂಡಾರದ ಡಾ.ಉಮೇಶ ಹಳ್ಳಿಕೇರಿ ಮಾತನಾಡಿ ಎಲ್ಲರೂ ಸರಕಾರದ ನಿಯಮ ಪಾಲಿಸಿ, ಸಂಕನೂರ ಅವರು ಸಮಾಧಾನ ವ್ಯಕ್ತಿ ಅಂತಹ ಆದರ್ಶಗಳನ್ನು ನಾವು ಪಾಲಿಸೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಎಮ್ ಕತ್ತಿ, ಕೋಶಾದ್ಯಕ್ಷರಾದ ಪ್ರೇಮಾನಂದ ಶಿಂಧೆ, ವಿವಿಧ ನಗರ,ಬಡಾವಣೆಯ ಗಣ್ಯರು ಇದ್ದರು.