ಬಡಕುಟುಂಬಗಳಿಗೆ ಗ್ಯಾಸ್ – ಆಹಾರ ಕಿಟ್ ವಿತರಣೆ

ಸಿರವಾರ, ಏ.೨೮- ಕಡು ಬಡವರಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ನೇರವಾಗುವ ಉದ್ದೇಶದಿಂದ ಯುವಕರು ಕೂಡಿ ರೆಹಮಾನ್ ಫೌಂಡೇಶನ ಪ್ರಾರಂಭ ಮಾಡಿದ್ದೂ, ಮುಂದೆ ಎಲ್ಲಾ ಜನರಿಗೆ ನೇರವಾಗುವುದಾಗಿ ರೆಹಮಾನ್ ಫೌಂಡೇಶನ ಸದಸ್ಯ ಜಾವೀದ್ ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ಕಾಲೋನಿಯಲ್ಲಿ ಮೂರು ಬಡ ಕುಟುಂಬಗಳಿಗೆ ರೆಹಮಾನ್ ಫೌಂಡೇಶನ್ ವತಿಯಿಂದ ಗ್ಯಾಸ್ ಸಿಲಿಂಡರ್, ಸ್ಟವ್ ಹಾಗೂ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಯುವಕರೇಲ್ಲಾ ಕೂಡಿ ರಹೇಮಾನ ಫೌಂಡೇಶನ್ ಮಾಡಿದ್ದೇವೆ ಈಗಾಗಲೇ ಅನೇಕ ಕಡೆಗಳಲ್ಲಿ ಈ ಫೌಂಡೇಶನ ಇದೆ. ಸಿರವಾರದಲ್ಲಿ ಪ್ರಥಮವಾಗಿ ಮೂರು ಬಡ ಕುಟುಂಬಗಳಿಗೆ ಆಹಾರ ಕಿಟ್ ಹಾಗೂ ಗ್ಯಾಸ್ ವಿತರಣೆ ಮಾಡಿದ್ದೇವೆ ಮುಂಬರುವ ದಿನಗಳಲ್ಲಿ ಎಲ್ಲಾ ಜಾತಿ,ಧರ್ಮದವರ ತೀರಾ ಬಡಕುಟುಂಬವಾಗಿದ್ದರೆ ನಮ್ಮ ಫೌಂಡೇಶನ್‌ನ ಇಂದ ಸಹಾಯ ಸಹಕಾರ ಮಾಡುತ್ತೇವೆ. ಈ ಫೌಂಡೇಶನ್ ಆರ್ಥಿಕವಾಗಿ ದುರ್ಭಲರಾಗಿರುವವರ ನೇರವಿಗೆ ಪ್ರಾರಂಭಿಸಲಾಗಿದೆ. ರಂಜಾನ್ ವೇಳೆಯಲ್ಲಿ ಕಾರ್ಯಾರಂಭ ಮಾಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಪ.ಪಂ ಸದಸ್ಯ ಇರ್ಫಾನ ಭಢಾಘರ ಮಾತನಾಡಿ ಫೌಂಡೇಶನ ಪದಾಧಿಕಾರಿಗಳು ಬಡವರ ಮನೆಗಳಿಗೆ ತೆರಳಿ ವಿಕ್ಷಣೆ ಮಾಡಿ ಆರ್ಥಿಕವಾಗಿ ದುರ್ಭಲವಾಗಿದರೆ ಅಂತವರನ್ನು ಗುರುತಿಸಿ ಸಹಾಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಹೇಮಾನ ಫೌಂಡೇಶನ್‌ನ ಪದಾಧಿಕಾರಿಗಳು, ವಾರ್ಡಿನ ನಿವಾಸಿಗರು ಇದ್ದರು