ಬಡಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳ ವಿತರಣೆ

ಚಿತ್ರದುರ್ಗ, ಜೂ.2; ಅಗೋಚರವಾದ ವೈರಾಣು ಕೊರೋನಾದಿಂದ ಮಾನವನ ಬದುಕು ವೇದನೆಗೆ ಒಳಗಾಗಿದೆ. ಸುಖವನ್ನು ಹಂಚಿಕೊಳ್ಳಲು ಜನರಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ದುಃಖವನ್ನು ಹಂಚಿಕೊಳ್ಳಲು ಯಾರೂ ಇರುವುದಿಲ್ಲ. ಈ ಕಾಯಿಲೆ ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಎಲ್ಲರು ಮಾಸ್ಕ್ ಧರಿಸುವುದರೊಂದಿಗೆ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದರೊಂದಿಗೆ ಮತ್ತು ಸ್ಯಾನಿಟೈಸರ್‌ನ್ನು ಪದೇಪದೇ ಬಳಸುವ ಮೂಲಕ ರೋಗಕ್ಕೆ ತುತ್ತಾಗದಂತೆ ಎಚ್ಚರವಹಿಸಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅರಿವು ಮೂಡಿಸಿದರು.ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿಂದು ಪಟೇಲ್ ಜಿ.ವಿ.ರುದ್ರಪ್ಪನವರು (85ವರ್ಷ) ಸೇರಿದಂತೆ ಇಡೀ ಕುಟುಂಬ ಕೊರೋನಾ ಪೀಡಿತರಾಗಿ ಅಷ್ಟೇ ಶೀಘ್ರವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟು ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಆ ಕುಟುಂಬದ ವತಿಯಿಂದ ಊರಿನ ಬಡಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿ ಶ್ರೀಗಳು ಮಾತನಾಡಿದರು.ಈ ಸಂದರ್ಭದಲ್ಲಿ ಪಟೇಲ್ ಶಿವಕುಮಾರ್, ಜಿ.ಆರ್. ಪ್ರಭಾಕರ್ ಮತ್ತು ಕುಟುಂಬದವರು, ಸಿದ್ದಾಪುರ ನಾಗಣ್ಣ, ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ.ಪರಮಶಿವಯ್ಯ ಇದ್ದರು.