ಬಟ್ಟೆ ತೊಳೆಯಲು ಹೊದ ಯುವಕರು ನೀರು ಪಾಲು

ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಮೇ.೦೨-
ತಾಲೂಕಿನ ರೋಡಲಬಂಡಾ (ಯುಕೆಪಿ) ಹತ್ತರದ ಬಸವಸಾಗರ ಬಲದಂಡೆ ನಾಲೆಯಲಿ ಪಾಲಕರೊಂದಿಗೆ ಬಟ್ಟೆ ತೊಳೆಯಲು ಹೋಗಿ ಇಬ್ಬರು ಯುವಕರು ಕಾಲುಜಾರಿ ನೀರುಪಾಲಾದ ಘಟನೆ ಜರುಗಿದ್ದು, ಪ್ರತ್ಯಕ್ಷ ದರ್ಶಿಗಳು ಮಾಹಿತಿಯನ್ನು ನೀಡಿದ್ದಾರೆ.
ತಾಲೂಕಿನ ಬೆಂಡೋಣಿ ಗ್ರಾಮದ ಲಕ್ಕಣ್ಣ ವಿರುಪಾಕ್ಷಪ್ಪ ಕಮರಿ ಹಾಗೂ ಬಸವಂತ ತಂದೆ ಶರಣಪ್ಪ ಉಪ್ಪಾರ ಎನ್ನುವ ಸುಮಾರು ಇಪ್ಪರಿಂದ ಇಪ್ಪತ್ತೈದು ವರ್ಷದ ಯುವಕರು ತಮ್ಮ ಪಾಲಕರೊಂದಿಗೆ ಬಟ್ಟೆ ತೊಳೆಯಲು ಇಂದು ಮುಂಜಾನೆ ಹೋಗಿದ್ದಾರೆ.
ಜಾತ್ರೆ ನಿಮಿತ್ಯ ಬಟ್ಟೆ ತೊಳೆಯುವುದಕ್ಕಾಗಿ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಬುಧವಾರ ಬೆಳಗ್ಗೆ ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಬಸವಸಾಗರ ಬಲದಂಡೆ ನಾಲೆಯಲ್ಲಿ ಘಟನೆ ಸಂಭವಿಸಿದೆ
ನಾಲೆಯಲಿ ಯುವಕರು ಕಾಲುಜಾರಿ ಬೀಳುತ್ತಲೆ ಸ್ಥಳಿಯರು ನಾಲೆಗೆ ಜಿಗಿದು ರಕ್ಷಣೆಗೆ ಮುಂದಾಗಿದ್ದಾರೆ ಆದರೆ ಅಷ್ಟರಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದು ಸ್ಥಳಿಯರು ಹುಡುಕಾಟ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಮೃತದೇಹಗಳನು ಶವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ ಈ ಪ್ರಕರಣ ದೂರ ದಾಖಲಿಸಿ
ಲಿಂಗಸುಗೂರ ಪೋಲೀಸ್ ಇಲಾಖೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.