ಬಟ್ಟೆಯಲ್ಲೂ ಶ್ರೀಮಂತ- ಬಡವ ಸಲ್ಲದು

ಚಿತ್ರದುರ್ಗ. ನ.೨೮; ನಮ್ಮ ಅಗತ್ಯದ ಬಟ್ಟೆಯನ್ನು ನಾವೇ ಉತ್ಪಾದಿಸಿಕೊಳ್ಳೋಣ ಎಂದು ಗಾಂಧೀಜಿಯವರು ಜನತೆಗೆ ಕರೆ ನೀಡಿ, ತಾವೇ ಚರಕ ಹಿಡಿದು ನೂಲು ನೇಯ್ದರು, ಅವತ್ತು ಗಾಂಧೀಜಿಯವರ ಪ್ರೇರಣೆಯಿಂದ ದೇಶದಲ್ಲಿ ನೇಕಾರರು ಕೈಯಿಂದ ನೂಲು ತಯಾರಿಸಿ, ಗುಣಮಟ್ಟದ ಖಾದಿ ಬಟ್ಟೆ ತಯಾರು ಮಾಡುತ್ತಿದ್ದಾರೆ. ಇಂದು ನಾವು ಬಡವ ಶ್ರೀಮಂತನೆನ್ನದೇ ಪ್ರತಿಯೋಬ್ಬರು ಸಹ ಖಾದಿ ಉಡುಪನ್ನ ಧರಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಕರೆ ನೀಡಿದರು.ಅವರು ನಗರದ ಚಿತ್ರದುರ್ಗ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕಲ್ಪ ವೃಕ್ಷ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ “ಖಾದಿ ಮತ್ತು ಗ್ರಾಮೀಣ ಉದ್ಯೋಗಗಳು” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಖಾದಿ ಕೈಯಿಂದ ಮಾಡಿದ ಬಟ್ಟೆ, ಮಹಾತ್ಮ ಗಾಂಧಿಯವರು ಸ್ವತಃ ನೂತು ಇತರರನ್ನು ಪ್ರೋತ್ಸಾಹಿಸಿದ್ದರು, ಸ್ವಾತಂತ್ರ÷್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ನೀಡಿದ ಕರೆಗೆ ಓಗೊಟ್ಟು ಸ್ಥಾಪನೆಗೊಂಡ ಖಾದಿ ಪರಸ್ಪರ ಸಹಕಾರ ಸಂWಗಳು ಪೈಪೋಟಿಗಳ ನಡುವೆಯೂ ಮುನ್ನಡೆಯುತ್ತಾ, ಗಾಂಧೀಜಿಯವರ ನೆನಪನ್ನು ಹಸಿರಾಗಿಸಿ ಇಟ್ಟುಕೊಂಡಿದೆ, ಇವುಗಳನ್ನ ನಾವು ಉತ್ತೇಜಿಸಬೇಕಾಗಿದೆ ಎಂದರು.ಜನರಲ್ಲಿ ಇನ್ನೂ ಖಾದಿ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ, ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವ ಸ್ವದೇಶಿ ಚಳುವಳಿ ಇನ್ನೂ ಜನರಲ್ಲಿ ಉಂಟು. ವಿದೇಶಿ ಬಟ್ಟೆಯನ್ನು ಬಹಿಷ್ಕರಿಸುವ ಉದ್ದೇಶದಿಂದ ಗಾಂಧಿಯವರ ಖಾದಿ ಚಳುವಳಿ ಪ್ರಾರಂಬಿಸಿ. ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬಿಯನ್ನ ಉತ್ತೇಜಿಸಿದರು. ಖಾದಿ ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿ ರೂಪುಗೊಳ್ಳಬೇಕು ಎಂದರು. ಖಾದಿ ಸಹಕಾರ ಸಂಘದ ಅಂಗಡಿಯ ಮ್ಯಾನೇಜರ್ ಲೋಕೇಶ್ ಮಾತನಾಡಿ ಚಿತ್ರದುರ್ಗದಲ್ಲಿ ಖಾದಿ ಬಟ್ಟೆಯನ್ನು ಇಷ್ಟಪಟ್ಟು ಧರಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಚಿತ್ರದುರ್ಗದಲ್ಲಿ ಖಾದಿ ತನ್ನ ಅಸ್ತಿತ್ವ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ, ನಮ್ಮ ಖಾದಿ ಸಹಕಾರ ಸಂಘ ಸುತ್ತಮುತ್ತಲಿನ ನೂರಾರು ಮಂದಿಗೆ ಉದ್ಯೋಗ ನೀಡಿದೆ. ಉತ್ಪನ್ನಗೊಂಡ ಖಾದಿ ಬಟ್ಟೆಗಳು ರಾಜ್ಯದ ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೂ ರವಾನೆಯಾಗುತ್ತಿದೆ, ಜನರು ಇನ್ನೂ ಹೆಚ್ಚಾಗಿ ಖಾದಿ ಬಳಸಬೇಕು ಎಂದರು. ಖಾದಿ ನೇಕಾರರಾದ ಶ್ರೀಮತಿ ಭಾಗ್ಯ ಲಕ್ಷಿö್ಮ ಮಾತನಾಡುತ್ತಾ ಖಾದಿ ಗಾಂಧೀಜಿಯವರ ಕನಸಿನ ಕೂಸಾಗಿದ್ದು, ಇವತ್ತಿಗೂ ಅವರ ಸ್ಮರಣೆಯಲ್ಲಿಯೇ ನಾವು ದಿನ ದುಡಿಯುತ್ತಿದ್ದೇವೆ, ಗಾಂಧೀಜಿಯವರು ಶೇಂಗ ತಿಂದು ನಮ್ಮನ್ನ ಸ್ವಾತಂತ್ರö್ಯಗೊಳಿಸಿದರು, ಅವರ ನೆನಪಲ್ಲಿ ನಾವು ದಿನಕ್ಕೆ ಒಂದಿಷ್ಟು ದುಡಿಮೆಮಾಡಿಕೊಳ್ಳುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಗೌರಮ್ಮ, ಮೀನಾಕ್ಷಿ, ಉಮಾದೇವಿ, ಶಾರದಮ್ಮ, ರೂಪ ಇದ್ದರು. ರೋಟರ‍್ಯಾಕ್ಟ್ ಹೆಚ್. ಎಸ್. ರಚನ ಗಾಂಧೀಜಿಗೆ ಇಷ್ಟವಾದ ರಘುಪತಿ ರಾಘವ ರಾಜಾ ರಾಮ್ ಗೀತೆಯನ್ನ ಹಾಡಿ, ಖಾದಿ ಕೆಲಸಗಾರರಿಗೆ ಸ್ಪೂರ್ತಿ ತುಂಬಿದರು.