ಬಟ್ಟೂರ ಗ್ರಾ.ಪಂ.-ಅಭ್ಯರ್ಥಿಗಳ ಗೆಲುವು

ಲಕ್ಷ್ಮೇಶ್ವರ, ಏ2: ಸಮೀಪದ ಬಟ್ಟೂರು ಗ್ರಾಪಂಯ 14 ಸದಸ್ಯರ ಪೈಕಿ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಆಗಿದ್ದರು. ಉಳಿದ 13 ಸದಸ್ಯರ ಆಯ್ಕೆಗೆ ಮಾ.29ರಂದು ಮತದಾನ ನಡೆದಿತ್ತು. ಬುಧವಾರ ಇಲ್ಲಿನ ಎಪಿಎಂಸಿ ಹತ್ತಿರ ಎಣಿಕೆ ಕಾರ್ಯ ನಡೆಯಿತು.
ನೂತನ ಸದಸ್ಯರಾಗಿ ಗಂಗವ್ವ ಗೋಣೆಪ್ಪ ಹರಿಜನ, ಗೌರವ್ವ ಯಲ್ಲಪ್ಪ ಸಾವಿರಕುರಿ, ಜಗದೀಶಗೌಡ ಜಂಬನಗೌಡ ಪಾಟೀಲ, ಇಂದ್ರವ್ವ ಚಂದ್ರಪ್ಪ ಹರಿಜನ, ಮಾಲತೇಶ ಉಡಚಪ್ಪ ಹೊಳಲಾಪುರ, ಲಲಿತವ್ವ ಫಕ್ಕೀರಪ್ಪ ಲಮಾಣಿ, ಹನಮಪ್ಪ ಶಿವಪ್ಪ ಹರಿಜನ, ಶಾಂತವ್ವ ಚನ್ನಬಸಪ್ಪ ಹಡಪದ, ನೀಲವ್ವ ಮಂಜಪ್ಪ ಕಳಸದ, ರುದ್ರಯ್ಯ ನಿರಂಜನಯ್ಯ ಶೀಲವಂತಮಠ, ಮಂಜುನಾಥ ಕೆಂಚಪ್ಪ ಗೌರಿ, ಸೋಮಪ್ಪ ಲೋಕಪ್ಪ ಲಮಾಣಿ, ಮಲ್ಲವ್ವ ಬಸಪ್ಪ ತಳವಾರ, ಸುರೇಶ ಮಂಗಲೆಪ್ಪ ಲಮಾಣಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಹಶೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟರ, ಉಪತಹಶೀಲ್ದಾರ ಮಂಜುನಾಥ ದಾಸಪ್ಪನವರ ಮತದಾನ ಎಣಿಕೆ ಕೇಂದ್ರದಲ್ಲಿ ಮೊಕ್ಕಾಂ ಹೂಡಿದ್ದರು. ಸಿಪಿಆಯ್ ವಿಕಾಸ ಲಮಾಣಿ, ಪಿಎಸ್‍ಆಯ್ ಶಿವಯೋಗಿ ಲೋಹಾರ, ಶಿರಹಟ್ಟಿ ಪಿಎಸ್‍ಆಯ್ ಜಕ್ಕಲಿ, ಮಹಿಳಾ ಪಿಎಸ್‍ಆಯ್ ಪಿ.ಎಂ. ಬಡಿಗೇರ ಹಾಗೂ ಸಿಬ್ಬಂದಿ ಯಾವುದೇ ಅಹಿತರಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ್ದರು.