ಬಟ್ಟರಗಾ ಮೌಲಾಲಿ ಜಾತ್ರೆ 11ರಿಂದ ಆರಂಭ

ಆಳಂದ:ಎ.5: ಪ್ರತಿ ವರ್ಷದಂತೆ ಈ ವರ್ಷವೂ ಬಟ್ಟರಗಾ ಗ್ರಾಮದ ಸೂಫಿ-ಸಂತ ಹಜರತ್ ಸೈಯದ ಹುಸೇನ ಶಾಹವಲಿ ಉರ್ಫ ಮೌಲಾಲಿ ಜಾತ್ರಾ ಮಹೋತ್ಸವ ವಿಭ್ರಮಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸದ್ಭಕ್ತ ಮಂಡಳಿ ಪರವಾಗಿ ನಬೀಲಾಲ ಮುತ್ತ್ಯಾ ಅವರು ತಿಳಿಸಿದ್ದಾರೆ.

ಏ. 11 ರಂದು ರಾತ್ರಿ 10:00 ಗಂಟೆಗೆ ಮಾಜಿ ಶಾಸಕ ದಿ. ಶರಣಬಸಪ್ಪ ಮಾಲಿಪಾಟೀಲ್ ಧಂಗಾಪುರ ಗ್ರಾಮದ ಅವರ ನಿವಾಸದಿಂದ ಗಂಧ ಹೊರಟು ಸಾಹೇಬರ ಮನೆ ತಲುಪಿ ಇಡೀ ರಾತ್ರಿ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ವಿವಿಧ ಸಂಸ್ಕøತಿಕ ವಾದ್ಯವೃಂದದೊಂದಿಗೆ ಬೆಳಗ್ಗೆ 4.30 ಕ್ಕೆ ದರ್ಗಾ ತಲುಪಿ ದರ್ಗಾದ ಪೀಠಾಧಿಪತಿ ಶ್ರೀ ಸೈಯದ ಭಾಷಾ ಹುಸೇನಿ ಉರ್ಫ ಸೈಯದ ಖುತುಬಿ ಹುಸೇನಿ ಸಜ್ಜಾದಾ ನಶೀನ ಅವರಿಂದ ಗಂಧ ಲೇಪನಗೊಳ್ಳುವುದು.

ಏ. 12 ರಂದು ರಾತ್ರಿ ದೀಪ ಬೆಳಗುವ ಕಾರ್ಯಕ್ರಮ ಜರಗುವುದು, ಏ 13 ರಂದು ಜಿಯಾರತ ನಂತರ ಪ್ರಸಾದ ವಿತರಣೆ ಮಧ್ಯಾಹ್ನ 4:00 ಗಂಟೆಗೆ ಜಂಗಿ ಪೈಲವಾನ ಕುಸ್ತಿಗಳು ಹಾಗೂ ಗೀಗೀ ಪದಗಳು, ಖವಾಲಿ ನಡೆಯಲಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂದ್ರಪ್ರದೇಶದಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಂದಿನಂತೆ ಪಾಲ್ಗೊಂಡು ಪೀಠಾಧಿಪತಿಗಳ ದರ್ಶನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.