ಬಟಿಂಡಾ ಮಿಲಿಟರಿ ದಾಳಿ: ಉನ್ನತ ಮಟ್ಟದ ತನಿಖೆಗೆ ಶಿರೋಮಣಿ ಅಕಾಲಿ ದಳ ಆಗ್ರಹ

ಚಂಡಿಗಡ,ಏ.13-ಪಂಜಾಬ್‌ನ ಬಟಿಂಡಾ ಮಿಲಿಟರಿ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಯೋಧರನ್ನು ಬಲಿತೆಗೆದುಕೊಂಡ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಶಿರೋಮಣಿ ಅಕಾಲಿದಳ, ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

“ಇದು ಅತ್ಯಂತ ದುಃಖಕರ ಘಟನೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು” ಎಂದು ಪ್ರೇಮ್ ಸಿಂಗ್ ಚಂದುಮಜ್ರಾ ಒತ್ತಾಯಿಸಿದ್ದಾರೆ.

ಬಟಿಂಡಾ ಸೇನಾ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಘಟನೆಯ ಸಾಕ್ಷಿ ಮೇಜರ್ ಅಶುತೋಷ್ ಶುಕ್ಲಾ ಹೇಳಿಕೆಯ ಆಧಾರದ ಮೇಲೆ
ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮೃತಪಟ್ಟ ಯೋಧರನ್ನು ನಾಲ್ವರು ಯೋಧರನ್ನು ಸಾಗರ್, ಕಮಲೇಶ್, ಸಂತೋಷ್ ಮತ್ತು ಯೋಗೇಶ್ ಎಂದು ಗುರುತಿಸಲಾಗಿದೆ.

ಇಬ್ಬರು ಮುಸುಕುಧಾರಿ ವ್ಯಕ್ತಿಗಳು, ಬಿಳಿ ಕುರ್ತಾ ಪೈಜಾಮಾದಲ್ಲಿ, ರೈಫಲ್‌ಗಳು ಮತ್ತು ಹರಿತವಾದ ಆಯುಧಗಳಿಂದ ಅವರ ಮೇಲೆ ದಾಳಿ ಮಾಡಿದರು. ನಾಲ್ವರು ಯೋಧರು ಅವರ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಪೊಲೀಸ್ ಅಧೀಕ್ಷಕ ಗುಲ್ನೀತ್ ಖುರಾನಾ ಹೇಳಿದ್ದಾರೆ.

ಫೊರೆನ್ಸಿಕ್ ವರದಿ ಹೊರಬಂದ ನಂತರ ಶಿಬಿರದ ಒಳಗಿನಿಂದ ಕಳವು ಮಾಡಲಾದ ಅದೇ ಆಯುಧವೇ ಎಂಬುದನ್ನು ನ ಖಚಿತಪಡಿಸಿಕೊಳ್ಳಬಹುದು. ತನಿಖೆ ನಡೆಯುತ್ತಿದೆ. ಬಟಿಂಡಾ ಪೊಲೀಸರು ಸೇನೆಯೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದಾರೆ.

ಭಯೋತ್ಪಾದಕ ದಾಳಿ ಅಲ್ಲ:.
ಘಟನೆಯ ನಂತರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುರೀಂದರ್ ಪಾಲ್ ಸಿಂಗ್ ಪರ್ಮಾರ್ ಅವರು ಘಟನೆಯಲ್ಲಿ ಭಯೋತ್ಪಾದಕ ದಾಳಿ ತಳ್ಳಿಹಾಕಿದ್ದಾರೆ.

ಘಟನೆಯ ವೇಳೆ ಉಂಟಾದ ಗುಂಡಿನ ಗಾಯಗಳಿಗೆ ಫಿರಂಗಿ ಘಟಕದ ನಾಲ್ವರು ಸೇನಾ ಯೋಧರು ಬಲಿಯಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಹೇಳಿಕೆಯ ಪ್ರಕಾರ, ಘಟನೆಯಲ್ಲಿ ಸಿಬ್ಬಂದಿಗೆ ಯಾವುದೇ ಗಾಯ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ.

ಕಳೆದ ಎರಡು ದಿನಗಳಿಂದ ಐಎನ್‌ಎಸ್‌ಎಎಸ್ ರೈಫಲ್ ಮತ್ತು 28 ಸುತ್ತುಗಳು ನಾಪತ್ತೆಯಾಗಿವೆ ಮತ್ತು ಈ ಘಟನೆಯ ಹಿಂದೆ ಕೆಲವು ಸಿಬ್ಬಂದಿ ಇರಬಹುದು ಎಂದು ಸೇನೆ ಹೇಳಿದೆ.

ಮೂಲಗಳ ಪ್ರಕಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಂದ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.