ಬಟಾಣಿ ಆಂಬೋಡೆ

ಪದಾರ್ಥಗಳು :-
ನೀರಲ್ಲಿ ನೆಂದ ಬಟಾಣಿಕಾಳು -೧ಲೋಟ
ಹಸಿಮೆಣಸಿನಕಾಯಿ- ೪-೬
ಓಂಕಾಳು – ಚಮಚ
ಉಪ್ಪು – ರುಚಿಗೆ
ಈರುಳ್ಳಿ -೨
ಕೊತ್ತಂಬರಿ ಸೊಪ್ಪು- ಸ್ವಲ್ಪ
ತುರಿದ ಶುಂಠಿ – ೧ ಚಮಚ

ವಿಧಾನ :- ಬಟಾಣಿಕಾಳು, ಹಸಿಮೆಣಸಿನಕಾಯಿ, ಓಂಕಾಳು ಹಾಕಿ, ನೀರು ಹಾಕದೆಯೇ ತರಿ ತರಿ ರುಬ್ಬಿ ಉಳಿದ ಪದಾರ್ಥಗಳನ್ನು ಹಾಕಿ, ಕಲೆಸಿ ಉಂಡೆ ಮಾಡಿ ತಟ್ಟಿ, ಎಣ್ಣೆಯಲ್ಲಿ ಕರಿಯಬೇಕು.