ಬಟರ್ ಫ್ಲೈ ಬಟ್ಟೆಯಲ್ಲಿ ಭಾವನಾ ಮಿಚಿಂಗ್

ಬೆಂಗಳೂರು,ಏ.೧೨-ನಟಿ ಭಾವನಾ ಇತ್ತೀಚಿಗೆ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಚಿಟ್ಟೆ ಆಕಾರದ ಬಟ್ಟೆ ತೊಟ್ಟು ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿ ಭಾವನಾರ ಹೊಸ ಫೋಟೋ ಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಾಳಿಪಟ ಭಾವನಾ ಸಿನಿಮಾಗಳ ಜೊತೆ ಜೊತೆಗೆ ಈಗ ಫೋಟೋ ಶೂಟ್‌ಗಳಲ್ಲೂ ಫುಲ್ ಬ್ಯುಸಿಯಾಗಿದ್ದಾರೆ.
ಭಾವನಾ ಫೋಟೋ ಶೂಟ್ ಹಿಂದೆ ನುರಿತ ತಂಡ ಕೆಲಸ ಮಾಡಿದ್ದು, ಮೇಕಪ್, ಡ್ರೆಸ್, ಸ್ಟೈಲ್ ಸೇರಿದಂತೆ ಎಲ್ಲರೂ ಭಾವನಾರಿಗೆ ಹೊಸ ಲುಕ್ ನೀಡುವಲ್ಲಿ ಶ್ರಮಿಸಿದ್ದಾರೆ. ಇನ್ನು ಭಾವನಾ ತೊಟ್ಟಿರುವ ಕೇಪ್ ಡ್ರೆಸ್‌ನ್ನು ಡಿಸೈನರ್ ಅಮಿತ್ ಅಗ್ರವಾಲ್ ಡಿಸೈನ್ ಮಾಡಿದ್ದಾರೆ. ಫೋಟೋಗ್ರಾಫರ್ ವಿಜೇತ್ ಅದ್ಬುತವಾಗಿ ಭಾವನಾರ ಫೋಟೋಗಳನ್ನು ತೆಗೆದಿದ್ದಾರೆ. ಮೇಕಪ್ ಮ್ಯಾನ್ ಲಕ್ಷ್ಕಣ್ ಭಾವನಾ ಸೌಂದಂiiಕ್ಕೆ ಮತ್ತಷ್ಟು ಹೊಳಪು ತಂದಿದ್ದಾರೆ.
ಸದ್ಯ ಗಾಳಿಪಟ ಭಾವನಾರ ಈ ಹೊಸ ಫೋಟೋಶೂಟ್ ನೆಟ್ಟಿಗರ ಮನ ಕದ್ದಿದ್ದು, ಫೋಟೋ, ವಿಡಿಯೋ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್, ಲೈಕ್ಸ್ ಕೊಡುತ್ತಿದ್ದಾರೆ.