ಬಟಗೇರಾದಲ್ಲಿ ಗಡಿನಾಡ ಉತ್ಸವ, ಸೃಷ್ಟಿ ಪುರಸ್ಕಾರ ಪ್ರದಾನ

ಕಲಬುರಗಿ,ಜು.22: ಸೇಡಂ ತಾಲೂಕಿನ ಬಟಗೇರಾ ಬಿ. ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಬೃಹನ್ಮಠದ ಆವರಣದಲ್ಲಿ ಗಡಿನಾಡ ಕನ್ನಡ ಉತ್ಸವ ಮತ್ತು ಸೃಷ್ಟಿ ಪುರಸ್ಕಾರ ಪ್ರದಾನ ಸಮಾರಂಭವು 23 ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಸೃಷ್ಟಿ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಸ್ಥೆ ಕಲಬುರಗಿಯ ಸಹಯೋಗದಲ್ಲಿ ಗಡಿನಾಡ ಕನ್ನಡ ಉತ್ಸವ ಸಮಾರಂಭದಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳು ಸಾನಿಧ್ಯ ವಹಿಸುವರು.
ಶಾಸಕರು, ಡಿಸಿಸಿ ಬ್ಯಾಂಕ್ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೆಲ್ಕೂರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ.ಸಿ.ಸೋಮಶೇಖ ಅಧ್ಯಕ್ಷತೆ ವಹಿಸುವರು. ಹಿರಿಯ ಮುಖಂಡರಾದ ಮಾಣಿಕರೆಡ್ಡಿ ಹಾಶನಪಲ್ಲಿ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗರೆಡ್ಡಿ ದೇಶಮುಖ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಪಂ ಮಾಜಿ ಸದಸ್ಯ ವೀರಾರೆಡ್ಡಿ ಹೂವಿನಬಾವಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಹಿರಿಯ ಮುಖಂಡ ಭೀಮರೆಡ್ಡಿ ಯಾನಾಗುಂದಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪತ್ರಕರ್ತ ದೇವಯ್ಯ ಗುತ್ತೇದಾರ್, ಕಸಾಪ ತಾಲೂಕು ಅಧ್ಯಕ್ಷೆ ಸುಮಾ ಚಿಮ್ಮನಚೋಡ್ಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಮಲ್ಕಪ್ಪ ಪೂಜಾರಿ, ಮಹಾದೇವ ಗಂವ್ಹಾರ ಅವರು ಮುಖ್ಯ ಅತಿಥಿಗಳಾಗಿರುವರು. ಈ ಉತ್ಸವದಲ್ಲಿ ಭರತನಾಟ್ಯ, ಡೊಳ್ಳು ಕುಣಿತ, ವೀರಗಾಸೆ ಮತ್ತು ಹಲಗೆ ತಂಡಗಳು ಭಾಗವಹಿಸಲಿವೆ.
ಸೃಷ್ಟಿ ಪುರಸ್ಕಾರ :
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸೃಷ್ಟಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸೃಷ್ಟಿ ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.
ಸಮಾಜ ಸೇವೆಗಾಗಿ ತೆಲ್ಕೂರ ಫೌಂಡೇಷನ್ನಿನ ರೂವಾರಿ ಸಂತೋಷಿರಾಣಿ ರಾಜಕುಮಾರ ತೆಲ್ಕೂರ, ಪತ್ರಿಕೋದ್ಯಮ ಸೇವೆಗಾಗಿ ಸೇಡಂ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶರಣು ಮಹಾಗಾಂವ, ರಂಗಭೂಮಿಯ ಸೇವೆಗಾಗಿ ರಂಗಮೇಷ್ಟ್ರು ಅಶೋಕ ತೊಟ್ನಳ್ಳಿ ಜಾಕನಪಲ್ಲಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪ್ರೇರಣೆ-ಪ್ರೋತ್ಸಾಹಕ್ಕಾಗಿ ಯುವ ಬರಹಗಾರ ವಿಜಯಭಾಸ್ಕರರೆಡ್ಡಿ ಅವರಿಗೆ ಸತ್ಕಾರ, ಪ್ರಮಾಣ ಪತ್ರ ನೀಡಿ, ಸೃಷ್ಟಿ ಪ್ರಶಸ್ತಿಯಿಂದ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.