ಬಟಗೇರದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

ಸೇಡಂ, ನ,05: ತಾಲೂಕಿನ ಬಟಗೇರಾ ಬಿ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ (ಕಾನೂನು ಅರಿವು ನೆರವು) ಕಾನೂನು ಅರಿವಿನಿಂದ ನಾಗರಿಕರ ಸಬಲೀಕರಣ ಜಾಗೃತಿ ಕಾರ್ಯಕ್ರಮ ಜರುಗಿತು.
ಉದ್ಘಾಟಕರಾಗಿ: ಗೌ. ಶ್ರೀ ವಿಜಯಕುಮಾರ್ ಜಟ್ಲಾ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಸೇಡಂ ಇವರು ಚಾಲನೆ ನೀಡಿ ಮಾತನಾಡಿದ ಅವರು ಸಮಾಜದಲ್ಲಿ ನಮ್ಮ ಜವಾಬ್ದಾರಿಗಳು ಯಾವ ರೀತಿ ಇದೆ ಅದನ್ನು ನಾವು ಹೇಗೆ ನಿಭಾಯಿಸಬೇಕು ಸದೃಢವಾಗಿ ಎಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಬಲಪಡಿಸಬೇಕು ಕಡು ಬಡವರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಯಾವುದೇ ಮಗು ಸಹಿತ ಶಿಕ್ಷಣದಿಂದ ವಂಚಿತನಾಗಬಾರದು ಕಡ್ಡಾಯವಾಗಿ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು. ಹಳ್ಳಿಗಳಲ್ಲಿ ಬಾಲ ಕಾರ್ಮಿಕ ನಿರ್ಮೂಲನೆ ಮಾಡಬೇಕು. ರಸ್ತೆ ಸಾರಿಗೆ ನಿಯಮವನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಲಕ್ಷ್ಮಿ ಮಲ್ಕಪ್ಪ ಪೂಜಾರಿ ಗ್ರಾ ಪಂ ಅಧ್ಯಕ್ಷರು ಬಟಗೇರಾ ಬಿ ಕಾರ್ಯಕ್ರಮದ ಮುಖ್ಯ ಅತಿಥಿಗಳು : ಶ್ರೀ ಅನಂತ ರೆಡ್ಡಿ ಪಾಟೀಲ್ ಹಾಶನಪಲ್ಲಿ ಮಲ್ಲನಗೌಡ ಪಾಟೀಲ್ ಬೆನಕನಹಳ್ಳಿ ಅಧ್ಯಕ್ಷರು ನ್ಯಾಯವಾದಿಗಳ ಸಂಘ ಮಹಿಂದ್ರ ರೆಡ್ಡಿ ಜಿಲ್ಲಾಡಪಲ್ಲಿ ಉಪಾಧ್ಯಕ್ಷರು ನ್ಯಾಯವಾದಿಗಳ ಸಂಘ ವಸಂತ ಕುಮಾರ್ ಪೂಜಾರಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿಗಳ ಸಂಘ ನಾಗೇಶ್ ಮೀಟ್ಟಿ ಹಿರಿಯ ವಕೀಲರು
ಬಸವರಾಜ್ ಆರೋಗ್ಯ ಅಧಿಕಾರಿ ಕುರುಕುಂಟಾ ವಲಯ ಶ್ರೀಮತಿ ಸುಲೋಚನಾ ಅಂಗನವಾಡಿ ಮೇಲ್ವಿಚಾರಕರು ಸೇಡಂ ಶ್ರೀ ರಾಜಶೇಖರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಟಗೇರಾ ಬಿ ಕಾರ್ಯಕ್ರಮದ ವಿಶೇಷ ಉಪನ್ಯಾಸಕರು ಶಾಂತಕುಮಾರ್ ಹಿರೇಮಠ ವಕೀಲರು ಸಹ ಕಾರ್ಯದರ್ಶಿ ನ್ಯಾಯವಾದಿಗಳ ಸಂಘ ಸೇಡಂ ಪ್ರಾರ್ಥನೆ ಗೀತೆ : ಮಣಿಕಂಠ 9ನೇ ತರಗತಿ ವಿದ್ಯಾರ್ಥಿಯಿಂದ,ಸ್ವಾಗತ ಭಾಷಣ: ಶ್ರೀಮತಿ ಪದ್ಮಾವತಿ ಸಹ ಶಿಕ್ಷಕರು ವಂದನಾರ್ಪಣೆ: ಶ್ರೀ ಶಿವಪ್ರಸಾದ್ ದೈಹಿಕ ಶಿಕ್ಷಕರು ಕಾರ್ಯಕ್ರಮ ನಿರೂಪಣೆ ಶ್ರೀ ಆನಂದಪ್ಪ ಹಿರಿಯ ಶಿಕ್ಷಕರು ಪ್ರೌಢಶಾಲೆ ಬಟಗೇರಾ ಬಿ. ನೇರವೇರಿಸಿದರು.