ಬಜ್ಪೆ ಏರ್ ಪೋರ್ಟ್ ಖಾಸಗೀಕರಣ ವಿರೋಧಿಸಿ ಕೆಂಜಾರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ನ.೧೨-1954ನೇ ಇಸವಿಯಲ್ಲಿ ಅಂದಿನ ಶಾಸಕ ಶ್ರೀನಿವಾಸ್ ಮಲ್ಯ ಪ್ರಯತ್ನದಿಂದ ಜವಾಹರ ಲಾಲ್ ನೆಹರೂ ಅವರು ವಿಮಾನ ನಿಲ್ದಾಣ ಕೊಡುಗೆಯಾಗಿ ನೀಡಿದ್ರು. ಜವಾಹರ್ ಲಾಲ್ ಅವರ ಕಾರ್ಯದರ್ಶಿ ಆಗಿದ್ದ ಕಾರಣ ಇದೆಲ್ಲ ಸಾಧ್ಯವಾಯ್ತು. ಅಂದು ಎನ್ ಐ ಟಿಕೆ ಕೂಡ ಜಿಲ್ಲೆಗೆ ಬರಲು ಸಾಧ್ಯವಾಯ್ತು. ಬಂದರು ಸ್ಥಾಪನೆಯಲ್ಲೂ ಶ್ರೀನಿವಾಸ್ ಮಲ್ಯ ಅವರು ಬಜ್ಪೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರಣರಾದರು. ಅಂದು ಬಂದರು ಮತ್ತು ವಿಮಾನ ನಿಲ್ದಾಣದಿಂದ ನಿರ್ವಸಿತರಾದವರಿಗೆ ಬಂಟ್ವಾಳ ಸಿದ್ದಕಟ್ಟೆಯಲ್ಲಿ ನಿವೇಶನ ನೀಡಲಾಯಿತು. ಶೆಟ್ಟಿಗಾರ್ ಸಮುದಾಯದ ದೇವಸ್ಥಾನ ಕೂಡ ಸ್ಥಳಾಂತರಗೊಂಡು ನಿರ್ಮಾಣ ಆಯ್ತು. ಈ ವೇಳೆ ರಾಜ್ಯದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಜನಾರ್ಧನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಅವರ ತ್ಯಾಗವು ಕೂಡ ಇದೆ. ಎಂಆರ್ ಪಿಎಲ್ ಕೂಡ ಇದೇ ವೇಳೆ ಇವರ ಪರಿಶ್ರಮದಿಂದ ಬಂತು.1993ರಲ್ಲಿ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಇದೆಲ್ಲ ಆಯ್ತು. ಇದೇ ವೇಳೆ ಬ್ಯಾಂಕ್ ಗಳ ರಾಷ್ಟ್ರೀಕರಣ ಆಯ್ತು. ಹಿಂದೆ ಬ್ಯಾಂಕ್ ಗಳು ಸಾಲ ಕೊಡ್ತಾ ಇರಲಿಲ್ಲ.1969ರಲ್ಲಿ 14 ಬ್ಯಾಂಕ್ ಗಳು ಇಂದಿರಾ ಗಾಂಧಿ ಅವರಿಂದಾಗಿ ರಾಷ್ಟ್ರೀಕರಣಗೊಂಡವು. ನಂತರ ಜನಾರ್ಧನ ಪೂಜಾರಿಯವರು ಸಾಲಮೇಳ ಮಾಡುವ ಮೂಲಕ ಎಲ್ಲ ಸ್ತರದ ಜನರಿಗೆ ಸಾಲ ನೀಡುವ ಯೋಜನೆ ಆರಂಭವಾಯಿತು. ಕರ್ನಾಟಕ ರಾಜ್ಯಕ್ಕೆ ಮಾತ್ರ ಮಾಡದೇ ಇಡೀ ಭಾರತದಲ್ಲಿ ಸಾಲಮೇಳ ಮಾಡಿರುವುದು ಅವರ ಹೆಗ್ಗಳಿಕೆ ಕೂಡ ಆಗಿದೆ.ಅಂದು ವಿಮಾನ ನಿಲ್ದಾಣ ಆಗುವಾಗ ಅಲ್ಲಿದ್ದ ದಲಿತರ ಭೂಮಿ ಹೋಯಿತು, ಅವರಲ್ಲಿ ಎಷ್ಟು ಜನರಿಗೆ ಕೆಲಸ ಸಿಕ್ಕಿತು ಗೊತ್ತಿಲ್ಲ. ರಮಾನಾಥ್ ರೈ ಅವರು ಸೀ ಬರ್ಡ್ ನಿರ್ವಸಿತರಿಗೆ ಪರಿಹಾರ ನೀಡಿದ ರೀತಿ ನೀಡಲು ಶ್ರಮಿಸಿದರು. ಆದರೆ ಇಷ್ಟೆಲ್ಲ ಹೋರಾಟ ಪರಿಶ್ರಮದ ವಿಮಾನ ನಿಲ್ದಾಣ ಅದಾನಿ ಪಾಲಾಗಿದೆ. ನಾವು ಹಿಂದೆ ಅದೆಷ್ಟೋ ಬಾರಿ ಶ್ರೀನಿವಾಸ್ ಮಲ್ಯ ಅವರ ಹೆಸರು ವಿಮಾನ ನಿಲ್ದಾಣಕ್ಕೆ ಇಡಲು ಮನವಿ ಮಾಡಿದ್ದೆವು. ಆದರೆ ಈಗ ನಿಲ್ದಾಣವನ್ನು ಗುಜರಾತಿನ ಅದಾನಿ ಹೆಸರಿಟ್ಟು 50 ವರ್ಷಕ್ಕೆ ಮಾರಲಾಗಿದೆ. ಇಂದು ಇದರ ಬಗ್ಗೆ ಪ್ರತಿಭಟನೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಕೆಂಜಾರಿನಲ್ಲಿ ವಾರಕ್ಕೊಂದು ದಿನ ಪ್ರತಿಭಟನೆ ನಡೆಸಲಿದ್ದೇವೆ. ಜಿಲ್ಲೆಗೆ ಬಂದರು, ಎನ್ ಐಟಿಕೆ, ವಿಮಾನ ನಿಲ್ದಾಣ ವನ್ನು ಕೊಡುಗೆಯಾಗಿ ನೀಡಿದ ಶ್ರೀನಿವಾಸ ಮಲ್ಯರ ಹೆಸರಿಡದೆ ಅದಾನಿ ಹೆಸರಿಟ್ಟಿರುವ ಬಗ್ಗೆ ಪ್ರತಿಭಟಿಸಲಿದ್ದೇವೆ. ನಾಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭಾಗವಹಿಸುವ ಸಾಧ್ಯತೆಯಿದೆ ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್ ಹೇಳಿದರು. ಪೆರ್ಮುದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಹಸನಬ್ಬ ಮಂಗಳಪೇಟೆ, ಬಜ್ಪೆ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಉದಯ ಕುಮಾರ್, ಬಿಜೆ ರಹೀಮ್, ಸರ್ಫರಾಜ್ ನವಾಜ್ ಹಾಜರಿದ್ದರು.