ಬಜೆಟ್ ವಿರೋಧಿಸಿ ಉಪವಾಸ ಸತ್ಯಾಗ್ರಹ

ರಾಯಚೂರು, ಮಾ.೧೫- ೨೦೨೧-೨೨ ರ ಬಜೆಟ್‌ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪರಿಶೀಲನೆ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು ಸಂಘ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಉಪವಾಸ ಧರಣಿ ಸತ್ಯಗ್ರಹ ನಡೆಸಿದರು.
ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕೊರೋನಾ ಸಂಧರ್ಭದಲ್ಲಿ ಸರ್ಕಾರ ಸೂಚನೆ ಮೇರೆಗೆ ಯಾವುದೇ ಷರತ್ತಗಳಿಲ್ಲದೆ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಕೆಲಸದ ಒತ್ತಡದಿಂದ ೩೫ ಜನ , ಕೊರೋನಾ ಕೆಲಸ ಮಾಡುವಾಗ ೨೮ ಜನರು ತಮ್ಮ ಜೀವನಗಳನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ ಎಂದು ದೂರಿದರು.
೧೭೩ ಜನರಿಗೆ ಕೊರೋನಾ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದು ಕೊಂಡಿದ್ದಾರೆ. ರಾಜ್ಯದ ಹೈಕೋರ್ಟ್ ಕೊರೋನಾ ಸಂಧರ್ಭದಲ್ಲಿ ಮಕ್ಕಳಿಗೆ – ಮಹಿಳೆಯರ ಅಪೌಷ್ಠಿಕತೆಯನ್ನು ತಡೆಯಲು ಪೌಷ್ಠಿಕ ಆಹಾರ ಫಲಾನುಭವಿಗಳಿಗೆ ತರಲುಪಿಸುವುದನ್ನು ಖಾತ್ರಿ ಪಡಿಸಬೇಕೆಂದೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿತ್ತು.
ಅಂತಹ ಎಲ್ಲಾ ದೂರುಗಳಿಂದ ಎಚ್ಚರಿಕೆಗಳಿಂದ ಸರ್ಕಾರದ ಘನತೆಯನ್ನು ಕಾಪಾಡಿದ್ದಾರೆ ಎಂದರು. ಕೊರೋನಾ ಸಾಂಕ್ರಾಮಿಕದ ಭಯಂಕರತೆ ಇದ್ದಾಗಲೂ ಮಲೆನಾಡು , ಗುಡ್ಡಗಾಡು , ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿ ಆಹಾರ ಸಾಮಾಗ್ರಿಗಳನ್ನು ಮನೆಮನೆಗೆ ಹಂಚಿದ್ದು , ಕ್ವಾರಂಟೈನ್ ಆದ ಸ್ಥಳಗಳಿಗೆ ಮಾಸ್ಕ್ , ಸ್ಯಾನಿಟೈಜರ್ , ಮಾತ್ರೆಗಳು ಇಲ್ಲದಿದ್ದರೂ ತಮ್ಮ ಕೈಯಿಂದ ಎಲ್ಲವನ್ನು ಖರ್ಚು ಮಾಡಿ ಕೊಂಡು ಆಹಾರ ವಿತರಣೆ ಮಾಡಿದ್ದಾರೆ .
ಕೊರೋನಾ ರೋಗಿಗಳನ್ನು ಸಂತೃಪ್ತಿಸಿದ್ದು ಮಾತ್ರವಲ್ಲದೇ ಸಾರ್ವಜನಿಕರಿಂದ ಹಲ್ಲೆಗೊಳಗಾದರೂ ಕೂಡಾ ಎದೆಗುಂದದೆ ಕೆಲಸ ಮಾಡಿದ ಈ ಹೆಣ್ಣು ಮಕ್ಕಳ ಧೈರ್ಯವನ್ನು ಮತ್ತು ಸೇವೆಯನ್ನು ಬರಿಯ ಮಾತುಗಳಲ್ಲಿ ಹೇಳಿದರೆ ಸಾಕೇ ? ಹಲವು ಹಂತಗಳ ಹೋರಾಟಗಳ ಒತ್ತಾಯಗಳ ಭಾಗವಾಗಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೇವಾ ಜೇಷ್ಟತೆಯ ಆಧಾರದಲ್ಲಿ ೧೫೩೨೫ ಕೋಟಿ ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ ೬.೯೯ ಕೋಟಿ ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ ೧೩೧.೪೨ ಕೋಟಿ ನಿವೃತಿಸೌಲಭ್ಯ ೪೭.೮೨ ಕೋಟಿ ಒಟ್ಟು -೩೩೯.೪೮ ಮೊತ್ತ ಶಿಫಾರಸ್ಸು ಮಾಡಲಾಗಿತ್ತು . ಈ ಮೊತ್ತ ನೀಡಿದ್ದರೆ , ೧ ಲಕ್ಷ ೩೦ ಸಾವಿರ ಕುಟುಂಬಗಳಿಗೆ ಸಹಾಯವಾಗುತ್ತಿತ್ತು . ಆದರೆ ರಾಜ್ಯ ಸರ್ಕಾರ ಈ ಮೂರು ಶಿಫಾರಸ್ಸುಗಳಲ್ಲಿ ಯಾವುದೇ ಒಂದು ಅಂಶವನ್ನು ಪರಿಗಣನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೧೬ ರಿಂದ ೭೩೦೪ ಜನ ನಿವೃತ್ತಯಾಗಿದ್ದಾರೆಅವರಿಗೆ ಕೊಡಬೇಕಾಗಿದ್ದ ಇಡಗಂಟನ್ನು ಕೂಡಾ ಸರ್ಕಾರ ಪರಿಗಣನೆ ಮಾಡಿಲ್ಲ . ಹೆಸರಿಗೆ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬಜೆಟ್‌ನ್ನು ಮಂಡಿಸಿ, ಮಹಿಳಾ ವಿರೋಧೀ ನೀತಿ ಅನುಸರಿಸಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಹೆಚ್ ಪದ್ಮ ,ಪಾರ್ವತಿ, ಮನ್ಸಲಾಪುರ, ಕೆಜಿ ವೀರೇಶ್, ಶರಣಬಸವ, ಗಂಗಮ್ಮ, ವರಲಕ್ಷ್ಮಿ, ಲಕ್ಷ್ಮಿ, ಗೌರಮ್ಮ, ಪ್ರಭಾವತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.