ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ ಸಂಸತ್ ಮುಂದೆ ಫೆ 7 ಕ್ಕೆ ಪ್ರತಿಭಟನೆ: ಸಿದ್ದರಾಮಯ್ಯ

ಬಳ್ಳಾರಿ: ರಾಜ್ಯದಿಂದಲೇ ಆಯ್ಕೆಯಾದ ನಿರ್ಮಲಾ ಸಿತಾರಾಮ್ ಅವರು ಪೈನಾನ್ಸ್ ಮಿನಿಸ್ಟರ್ ಆಗಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಹಾಗಾಗಿ ಫೆಬ್ರವರಿ ಏಳರಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಲು ನಿರ್ಧಾರಿಸಿದೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಂಪಿ ವಿವಿ ಹೆಲಿಪ್ಯಾಡ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಾದ್ಯಮಗಳಿಗೆ ಈ ಹೇಳಿಕೆ ನೀಡಿದ್ದಾರೆ.

ಬಜೆಟ್ ಅಧಿವೇಶನದ ಹಿನ್ನಲೆ ‌ಲೋಕಸಭೆ ಮುಂದೆ ಪ್ರತಿಭಟನೆ ಮಾಡ್ತೇವೆ ನಾನು ಕೂಡ ಭಾಗಿಯಾಗುವೆ. ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ತಾಯವಾಗಿದೆ ಬರ ನಿರ್ವಹಣೆಗೆ ಕೊಡಬೇಕಾದ ಹಣ ಕೂಡ ಕೊಟ್ಟಿಲ್ಲ. ಅದಕ್ಕಾಗಿ ನಾವು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತೇವೆಂದರು.

ಡಿ.ಕೆ ಸುರೇಶ್ ಕೋಪದಲ್ಲಿ ದೇಶ ವಿಭಜನೆ ಬಗ್ಗೆ ಮಾತನಾಡಿದ್ದಾರೆ ಅಷ್ಟೇ. ಡಿಕೆ ಸುರೇಶ್ ಹೇಳಿಕೆಯನ್ನು ತಪ್ಪಾಗಿ ಗ್ರಹಿಸೋದು ಬೇಡ. ಬಿಜೆಪಿ ಅವರಿಗೆ ಇಂತ ವಿಷಯ ಬಿಂಬಿಸೋದು ಬಿಟ್ಟು ಬೇರೆ ಕೆಲಸ ಇಲ್ಲ ಎಂದರು.

ಬರಗಾಲದ ನೆಪ ಹೆಳಿ ಉತ್ಸವಗಳನ್ನ‌ ನಿಲ್ಲಿಸೊಕೆ ಆಗಲ್ಲ. ಜನರ ಹಾಗೂ ಕಲಾವಿದರಗಾಗಿ ಉತ್ಸವ ಗಳಿಗೆ ನಾವು ಮನ್ನಣೆ ಕೊಡಲೇಬೇಕು. ಬರಗಾಲ ಇದೆ ಆದರೆ ಉತ್ಸವಗಳನ್ನ ನಿಲ್ಲಿಸೋದು ಸರಿ ಅಬುಸುತ್ತಿಲ್ಲ ಎಂದರು.