ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ  ಅನುದಾನ ನೀಡಲು ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.03.: ಈ ತಿಂಗಳು 7 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುವ ರಾಜ್ಯ ಬಜೆಟ್ ನಲ್ಲಿ  ಅಲ್ಪ ಸಂಖ್ಯಾತರ ಸಾಮಾಜಿಕ ನ್ಯಾಯ, ಮತ್ತು    ಸಂವಿಧಾನದ ಅಶಯಗಳಂತೆ ಅನುದಾನನ ನೀಡವಂತೆ  ಕೋರಿ ಇಂದು ಜಿಲ್ಲಾಡಳಿತದ ಮೂಲಕ  ಸಿಪಿಎಂ ಮನವಿ ಸಲ್ಲಿಸಿದೆ.
ದ್ವೇಷ ರಾಜಕಾರಣವನ್ನು, ತಾರ-ತಮ್ಯದ ರಾಜಕಾರಣವನ್ನು ಸೋಲಿಸಿರುವ  ಜನತೆ ತಮಲ್ಲಿ  ವಿಶ್ವಾಸ ಇಟ್ಟು  ಅಧಿಕಾರ  ನೀಡಿರುವ ಸಂರ್ಧಭದಲ್ಲಿ    ಸಿಪಿಐಎಂ ಪಕ್ಷ ಹಾಗು   ಇನ್ಸಾಪ್  ಸಂಘಟನೆಗಳು.  ಸಂವಿಧಾನವು ನಾಗರೀಕರಿಗೆ ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ನಡೆಸಿಕೊಳ್ಳುವ ಕರ್ತವ್ಯವನ್ನು ಹೊಂದಿದೆ. ಸರ್ವರಿಗೂ ಸಮಭಾವದಿಂದ ಅವರ ಅವರ ಪಾಲನ್ನು ನೀಡಬೇಕಾಗಿದೆ.  ಅದರೆ ಈ ಹಿಂದಿನ ಬಿಜೆಪಿ ರಾಜ್ಯ ಸರ್ಕಾರವು ಅಲ್ಪ ಸಂಖ್ಯಾತರ ಮೇಲೆ  ದ್ವೇಷ ರಾಜಕಾರಣ ಮಾಡಿದೆ. ತರತಮ್ಯ ಮಾಡಿದೆ.  ಇದರಿಂದ ಅಲ್ಪ ಸಂಖ್ಯಾತರಲ್ಲಿ  ಭಯ.ಭೀತಿ ಮತ್ತು ಒಂದು  ತರನಾದ ಹತಾಶದ ಮನಸ್ಥಿತಿ  ನಿರ್ಮಾಣವಾಗಿತ್ತು.
ನಿಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ   ಅಲ್ಪ ಭರವಸೆ ಮೂಡಿದೆ.  ರಾಜ್ಯದ ಜನ ಸಂಖ್ಯೆಯಲ್ಲಿ ಸರಿ ಸುಮಾರು ಶೇ  14 ರಷ್ಟು   ಮುಸ್ಲೀಂ ಅಲ್ಪ ಸಂಖ್ಯಾತರು ಇದ್ದಾರೆ.   ಕರ್ನಾಟಕದ ಮುಸ್ಲಿಂರ  ಅರ್ಥಿಕ , ಸಾಮಾಜಿಕ, ಔದ್ಯೋಗಿಕ ಮತ್ತು  ಶೈಕ್ಷಣಿಕ ಸ್ಥಿತಿ-ಗತಿಗಳು  ತುಂಬಾ ಶೋಚನಿಯವಾಗಿವೆ.
ಈ ಬಗ್ಗೆ  ಭಾರತ ಸರ್ಕಾರವು  ಈ ಹಿಂದೆ ಅಲ್ವಸಂಖ್ಯಾತರ ಸ್ಥಿತಿ-ಗತಿಗಳನ್ನು ಅಧ್ಯಯನ ಮಾಡಲು ರೂಪಿಸಿದ ಡಾ; ರಾಜೆಂದ್ರ ಸಿಂಗ್ ಸಾಚರ್, ಹಾಗು ನ್ಯಾ; ರಂಗನಾಥ ಮಿಶ್ರ ಸಮಿತಿಗಳ ಶಿಪಾರಸ್ಸುಗಳಂತೆ ನ್ಯಾಯ ಒದಗಿಸಬೇಕು ಎಂದಿದ್ದಾರೆ‌
ಈ ಹಿಂದೆ ಇದ್ದ  ಶೈಕ್ಷಣಿಕ ಉತ್ನತಿಗಾಗಿ  ಇರುವ ವಿಧ್ಯಾರ್ಥಿ ವೇತನಗಳನ್ನು ಸಹ   ಕಡಿತ ಮಾಡಲಾಗಿದೆ. ರಾಜ್ಯದ  ಒಟ್ಟಾರೆ ಅಭಿವೃದ್ದಿಯು ಮುಸ್ಲಿಂ  ಸಮುದಾಯದ ಹೊರಗಿಟ್ಟು ಸಾಧಿಸಲಾಗದು ,  ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ಸಾಲಿನ ಆಯ್ಯವಯ್ಯದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ದಿಗೆ ನ್ಯಾಯೋಜಿತವಾದ ಅನುಧಾನ ಬಿಡುಗಡೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
 ಜೆ ಸತ್ಯ ಬಾಬು,  ಜೆ. ಚಂದ್ರ ಕುಮಾರಿ, ಇನ್ಸಾಪ್ ಸಂಘಟನೆಯ ಖಾಜಾ ಮೊನಿದ್ದಿನ್, ಅಬ್ದುಲ್ ಲತೀಫ್, ಸ್ಯೆಯದ್ ಅಮ್ಜದ,ಹುಸೇನ್, ಎಂ.ಡಿ. ಜಹೀರ್ ಮೊದಲಾದವರು ಇದ್ದರು.