
ರಾಯಚೂರು,ಜು.೮-
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ವರ್ಷದ ಬಜೆಟ್ ರಾಯಚೂರ ಜಿಲ್ಲಾ ಮಟ್ಟಿಗೆ ನಿರಾಶಾಯಕವಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷರಾದ ಬಾಬುರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ನೀರಾವರಿ, ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಕಡೆಗಣಿಸಿದ್ದಾರೆ.
ರಾಯಚೂರ ವಿಶ್ವ ವಿದ್ಯಾಲಯಕ್ಕೆ ಮೂಲಸೌಕರ್ಯಕ್ಕೆ, ಅನುದಾನ ಕೊಟ್ಟಿಲ್ಲ.ಹೆಸರಿಗೆ ಮಾತ್ರ ವಿವಿ ಸ್ಥಾನಮಾನ ಕೊಡಲಾಗಿದೆ.ಪೂರಕ ಅಗತ್ಯತೆಗಳೇ ಒಸಗಿಸಿಲ್ಲ.ಇನ್ನು ಈ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾದ ರಿಂಗ ರಸ್ತೆಗಳ ನಿರ್ಮಾಣವೂ ಕಡೆಗಣಿಸಲಾಗಿದೆ. ಜಿಲ್ಲೆಗೆ ಕಳಸಪ್ರಾಯವಾದ ಓಪೆಕ್ ಆಸ್ಪತ್ರೆ ಸುಧಾರಣೆಗೂ ಹಣ ಒದಗಿಸಿಲ್ಲ.ತುಮಗಭದ್ರ ಎಡದಂಡೆ ಬಲದಂಡೆ ನಾಲೆಗಳ ಲಿಂಕ ಕಾಲುವೆಗಳ ನಿರ್ಮಾಣದ ವಿಷಯವೂ ಗೌಣ ಮಾಡಲಾಗಿದೆ ಎಂದು ದೂರಿದ್ದಾರೆ.ರಾಯಚೂರ ಜಿಲ್ಲೆಯ ಜನ ತಾಯಿ ಮಕ್ಕಳ ಆಸ್ಪತ್ರೆ ಕೇಳಿದ್ದೂ, ನಿರ್ಲಕ್ಷಿಸಿ, ಕಲ್ಬುರ್ಗಿ ಜಿಲ್ಲೆಗೆ ನೀಡಿ, ರಾಯಚೂರ .ಜಿಲ್ಲೆ ಬಗ್ಗೆ ಅಭಿವೃದ್ದಿಯ ಅನ್ಯಾಯ ಮುಂದುವರೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನತೆಯ ಹರಿಕಾರ ಎಂಬುದು ಜಿಲ್ಲಾ ಮಟ್ಟಿಗೆ ಹುಸಿಯಾಗಿದೆ ಎಂದು ಟೀಕಿಸಿದ್ದಾರೆ.