ಬಜಾಜ್ ಆಟೋ ಲಿಮಿಟೆಡ್‍ನಿಂದ ಹೊಸ ತ್ರಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ

ಕಲಬುರಗಿ,ಏ.8-ತ್ರಿಚಕ್ರ ವಾಹನಗಳ ದಿಗ್ಗಜ ಬಜಾಜ್ ಆಟೋ ಲಿಮಿಟೆಡ್ ಅತ್ಯಂತ ಸುಧಾರಿತ ಓಬಿಡಿ2ಎ ತಂತ್ರಜ್ಞಾನದೊಂದಿಗಿನ ಹೊಸ ತ್ರಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು.
ಅತ್ಯಾಧುನಿಕ ಇಂಜಿನ್ ಮತ್ತು ಅತ್ಯಂತ ಆಕರ್ಷಕ ವಿನ್ಯಾಸಗಳನ್ನು ಹೊಂದಿರುವ ಅತ್ಯಂತ ಹೆಚ್ಚಿನ ಮೈಲೇಜ್ ಅನ್ನು ಹೊಂದಿರುವ ತ್ರಿಚಕ್ರವಾಹನ ಎನ್ನುವ ಹೆಗ್ಗಳಿಕೆ ಈ ಹೊಸ ಮಾಡೆಲ್ ಹೊಂದಿದೆ.
ಈ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮೊದಲ 18 ಜನ ಗ್ರಾಹಕರಿಗೆ ವಾಹನಗಳನ್ನು ವಿತರಿಸಿ ಮಾತನಾಡಿದ ಕಲ್ಯಾಣ ಬಜಾಜ್ ಸಂಸ್ಥೆಯ ಪಾಲುದಾರರಾದ ಅರುಣ್.ವಿ.ಭಟ್ ಅವರು ತ್ರಿಚಕ್ರ ವಾಹನಗಳ ಗ್ರಾಹಕರಿಗೆ ಈ ಮಾಡೆಲ್‍ನ ವಾಹನಗಳ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆ ಮತ್ತು ಅತ್ಯಂತ ಹೆಚ್ಚಿನ ಮೈಲೇಜ್ ಹೊಂದಿರುವ ಸುಧಾರಿತ ವಾಹನಗಳು ಇವು ಆಗಿವೆ ಎಂದರು.
ಈ ವಾಹನಗಳಿಂದಾಗಿ ಆಟೋ ಚಾಲಕರ ದೈನಂದಿನ ಆದಾಯ ಹೆಚ್ಚಾಗಿ ನಿರ್ವಹಣಾ ವೆಚ್ಚ ಕಡಿಮೆಯಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಇನ್ನೊಬ್ಬ ಪಾಲುದಾರರಾದ ಸತ್ಯನಾಥ ಶೆಟ್ಟಿ, ಶ್ರೀಕಲ್ಯಾಣ ಬಜಾಜ್‍ನ ವಕ್ರ್ಸ್ ಮ್ಯಾನೇಜರ್ ಕುಮಾರಿ ಸವಿತಾ ಹಂಗರಗಿ, ಕುಮಾರಿ ಆರತಿ ರಾಥೋಡ್, ಕುಮಾರಿ ಪ್ರತಿಭಾ ಕುಲಕರ್ಣಿ, ಜನರಲ್ ಮ್ಯಾನೇಜರ್ ಮಚ್ಛೇಂದ್ರನಾಥ, ಫಾರ್ಚೂನ್ ಫೈನಾನ್ಸಿನ ಅಶೋಕ್ ಚೌಹಾನ್ ಮತ್ತಿತರರು ಇದ್ದರು.