ಕಲಬುರಗಿ,ಜು 25:ಕರ್ನಾಟಕ ಸರ್ಕಾರವು ಎಂಎಸ್‍ಎಂಇ ಕೈಗಾರಿಕೆಗಳಿಗೆ ಜಿಲ್ಲಾ ರಫ್ತುದಾರರ ವಿಭಾಗದಲ್ಲಿ ಮ್ಯಾನುಫಾಕ್ಚ್‍ರಿಂಗ್ ಕೈಗಾರಿಕೆಗಳು ತಮ್ಮ ಕಂಪನಿಯ ಉತ್ಪಾದನೆಯನ್ನು ರಫ್ತು ಮಾಡುವುದರಲ್ಲಿ ಅತಿ ಹೆಚ್ಚು ವಹಿವಾಟು ಹೊಂದಿರುವವರಿಗೆ ಶ್ರೇಷ್ಠ ರಫ್ತುದಾರರ ಪ್ರಶಸ್ತಿಪ್ರದಾನ ಸಮಾರಂಭವನ್ನು ಬೆಂಗಳೂರುನ ವಿಧಾನ ಸೌಧ,ಬ್ಯಾಂಕ್ವೆಟ್ ಹಾಲ್, ಏರ್ಪಡಿಸಲಾಗಿತ್ತು.
ಕಲಬುರಗಿ ಜಿಲ್ಲೆಯ ಬಜಾಜ್ ಅಥ್ರ್ಸ ಕಂಪನಿಯು ಶ್ರೇಷ್ಠ ರಫ್ತುದಾರರ ಪ್ರಶಸ್ತಿಗೆ ಆಯ್ಕೆಯಾಗಿದೆ. ಬಜಾಜ್ ಅಥ್ರ್ಸ ಪೈ.ಲೀ ಕಂಪನಿಯು
ಕಲಬುರಗಿಯಲ್ಲಿ 2006ರಲ್ಲಿ ಸ್ಥಾಪನೆಯಾಗಿದ್ದು, ಕಳೆದ 3ವರ್ಷಗಳಲ್ಲಿ ರೂ.5488 ಲಕ್ಷಗಳ ತನ್ನಉತ್ಪನ್ನಗಳನ್ನು ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ,
ಶ್ರೀಲಂಕಾ, ನೇಪಾಳ, ಮಲೇಶಿಯಾ ಮುಂತಾದ ದೇಶಗಳಿಗೆ ರಫ್ತು ಮಾಡಿದೆ.
ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರಧಾನಸಮಾರಂಭದಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಬಜಾಜ್ ಕಂಪನಿಯನಿರ್ದೇಶಕ ಶ್ಯಾಮ್‍ಸುಂದರ ಬಜಾಜ್ ರವರಿಗೆ ಪ್ರಶಸ್ತಿ ನೀಡಿಗೌರವಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ,ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಎಂ.ಬಿ.
ಪಾಟೀಲ್, ಅಧಿಕಾರಿಗಳಾದ, ಡಾ.ಎಸ್. ಸೆಲ್ವಕುಮಾರ ,ಗುಂಜನ್ ಕೃಷ್ಣ ಮತ್ತು ಕ¯ಬುರಗಿ ಜಿಲ್ಲೆಯ ಪರವಾಗಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಸತೀಶ್‍ಕುಮಾರ ಉಪಸ್ಥಿತರಿದ್ದರು.