ಬಜರಂಗ ದಳ ನಿಷೇಧಿಸಿದರೆ ತಕ್ಕ ಪಾಠ

ಶಹಾಬಾದ್:ಮೇ.5:ದೇಶ ದ್ರೋಹಿಗಳನ್ನು ರಕ್ಷಣೆ ಮಾಡಿ, ದೇಶ ಭಕ್ತ ಸಂಘಟನೆಯನ್ನು ನಿಷೇಧಿಸುವ ಪ್ರಣಾಳಿಕೆ ನೀಡಿರುವ ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯ ಮುಖವಾಡ ಕಳಚಿದೆ ಎಂದು ಬಜರಂಗ ದಳ ಸಂಯೋಜಕ ಉದಯ ನಂದಗೌಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸಂಜೆ ಶ್ರೀಜಗದಂಬಾ ದೇವಸ್ಥಾನದ ಸಭಾಂಗಣದಲ್ಲಿ ಬಂಜರಂಗ ದಳ, ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ಮುಖಂಡರು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಖಂಡರು ಅಧಿಕಾರಕ್ಕಾಗಿ ದೇಶವನ್ನೇ ಮಾರಾಟ ಮಾಡಲು ಮುಂದಾದರು ಆಶ್ಚರ್ಯವಿಲ್ಲ. ಬಜರಂಗ ದಳವನ್ನು ನಿಷೇಧ ಮಾಡಿ ನೋಡಿ ನಿಮ್ಮ ರಾಜಕಾರಣ ನೀವು ಯಾವ ದಿಕ್ಕಿನಲ್ಲಿ ಸಾಗಲಿದ್ದೀರಿ ಎಂದು ಹೇಳಿದರು. ವಿಹೆಚ್‍ಪಿ ಗೌರವ ಅಧ್ಯಕ್ಷ ಚಂದ್ರಕಾಂತ ಗೊಬ್ಬುರಕರ್ ಮಾತನಾಡಿ ದೇಶದ್ರೋಹಿಗಳಿಗೆ ಸಹಕಾರ ನೀಡುವ ಮೂಲಕ ತನ್ನ ನರಿ ಬುದ್ಧಿಯನ್ನು ರಾಜ್ಯದ ಜನತೆ ಮುಂದಿಟ್ಟಿರುವ ಕಾಂಗ್ರೆಸ್ ಈ ಬಾರಿ ನೆಲಕಚ್ಚಲಿದೆ. ಹಿಂದುಗಳ ವಿರೋಧಿ ನೀತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ದೂಳಿಪಟವಾಗಲಿದೆ. ಈ ಬಗ್ಗೆ ಈ ಕೂಡಲೇ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸದಿದ್ದರೆ ತಕ್ಕ ಬುದ್ದಿ ಕಲಿಸಲಾಗುವುದು. ನಿಷೇದ ಮಾಡಿದರೆ, ಅದರ ಪರಿಣಾಮ ಅನುಭವಿಸಬೇಕಾಗಲಿದೆ ಎಂದು ಸವಾಲು ಹಾಕಿದರು. ಅಧ್ಯಕ್ಷ ಬಸವರಾಜ ಸಾತ್ಯಾಳ, ಗೋವಿಂದ ಕುಸಾಳೆ, ಭೀಮರಾವ ಸಾಳುಂಕೆ, ಸುಭಾಷ ಜಾಪೂರ, ಕನಕಪ್ಪ ದಂಡಗುಲಕರ್, ಅನಿಲ ಹಿಬಾರೆ, ಸಚಿನ ಛತ್ರಬಂಡಿ, ಹರಿಷ, ಅಮೋಲ್, ಅನಿಲ ರಾಜಾಪೂರ, ಪ್ರಶಾಂತ ಕುಂಬಾರ, ದೇವು ಪಾಟೀಲ್, ಅಭಿಷೇಕ ದೇವಕರ, ಸುಂದರ, ಅವಿನಾಶ ಜಿಂಗಾಡೆ, ಶಿವಾಜಿ ರೆಡ್ಡಿ, ಯುವಕರು, ಮುಖಂಡರು ಪಾಲ್ಗೊಂಡಿದರು.


ಹಿಂದೂ ಸಮಾಜದ ಮೇಲಿನ ದೌರ್ಜನ್ಯಗಳನ್ನು ಪ್ರತಿಭಟಿಸುವ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವೆ ಮಾಡುತ್ತಿರುವ ವಿಶ್ವ ಹಿಂದೂ ಪರಿಷತ್‍ನ ಒಡನಾಡಿ ಸಂಘಟನೆಯನ್ನು ನಿಷೇಧ ಮಾಡುವ ಪ್ರಣಾಳಿಕೆ ನೀಡಿರುವ ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ಅಧಿಕಾರಕ್ಕಾಗಿ ಅನುಸರಿಸುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಹಿಂದೂಗಳು ತಕ್ಕ ಪಾಠ ಕಲಿಸಲಿದ್ದಾರೆ

ಬಸವರಾಜ ಸಾತ್ಯಾಳ, ವಿಶ್ವ ಹಿಂದೂ ಪರಿಷತ್ತ ಅಧ್ಯಕ್ಷ.