ಬಜರಂಗ ದಳದ ಕಾರ್ಯಕರ್ತರಿಂದ ಹನುಮಾನ ಚಾಲಿಸ ಪಠಣ

ಬೀದರ:ಮೇ.6:ರಾಜ್ಯದಲ್ಲಿ 2023ನೇ ಸಾಲಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಅಂಗವಾಗಿ ದಿನಾಂಕ: 02-05-2023 ರಂದು ಕಾಂಗ್ರೇಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಯ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ರವರು ರಾಜ್ಯದಲ್ಲಿ ಬಜರಂಗ ದಳ ಸಂಘಟನೆಯನ್ನು ನಿಷೇಧಗೊಳಿಸುವುದಾಗಿ ಹೇಳಿಕೆ ನೀಡಿರುವುದನ್ನು ಬಜರಂಗ ದಳ ಬೀದರ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿ, ಬೀದರ ತಾಲೂಕಿನ ಅನಂತಶಯನ ಮಂದಿರ ಅಗ್ರಹಾರ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ಹನುಮಾನ ಚಾಲಿಸಾ ಪಠಣ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬೀದರ ಉತ್ತರ ಕ್ಷೇತ್ರದ ಭಾಜಪಾ ಅಭ್ಯರ್ಥಿಯಾದ
ಈಶ್ವರಸಿಂಗ ಠಾಕೂರ, ಕಪೀಲ್ ಹೂಗಾರ ಗಾದಗಿ, ಮಾಣಿಕ ಸೋಲಪೂರ, ಸುರೇಶ ಸ್ವಾಮಿ, ಭದ್ರಪ್ಪಾ, ನಾಗರಾಜ, ಪ್ರತೀಕ ಠಾಕೂರ್, ಅಂಬರೀಶ ಕುಂಬಾರವಾಡಾ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.