ಬಜರಂಗದಳ ನಿಷೇಧ: ಹಿಂದು ಧರ್ಮಕ್ಕೆ ದ್ರೋಹ

ಕೋಲಾರ,ಮೇ,೫:ಹಿಂದು ಧರ್ಮದ ರಕ್ಷಣೆಗಾಗಿ ಮುಡುಪಾಗಿರುವ ಬಜರಂಗ ದಳವನ್ನು ನಿಷೇದಿಸುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿ ಕೋಮುವಾದವನ್ನು ಪ್ರಚೋದಿಸುತ್ತಿರುವುದನ್ನು ವಿ.ಹಿ.ಪ ಜಿಲ್ಲಾ ಕಾರ್ಯದರ್ಶಿ ಬಜರಂಗದಳ ಬಾಬು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಹಿಂದು ವಿರೋದಿಗಳ ಅಪಪ್ರಚಾರದಿಂದ ಹಿಂದು ಧರ್ಮವನ್ನು ಉಳಿಸುವುದಕ್ಕಾಗಿ ಹಿಂದುಗಳ ದೈವವಾದ ಗೋ ಮಾತೆಯ ರಕ್ಷಣೆಯಲ್ಲಿ ತೊಡಗಿದ್ದ ಬಜರಂಗದಳವನ್ನು ಧರ್ಮ ವಿರೋದಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಲಕ್ಷಾಂತರ ಗೋವುಗಳ ಶಾಪ ತಟ್ಟಲಿದೆ ಎಂದರು.
ಹಿಂದು ಧರ್ಮದವರನ್ನು ಜಿಹಾದ್ ಹೆಸರಿನಲ್ಲಿ ಕೊಲೆಗೈಯುವುದು, ಲವ್ ಜಿಹಾದ್ ಹೆಸರಿನಲ್ಲಿ ಹೆಣ್ಣು ಮಕ್ಕಳ ಮತಾಂತರ ಮಾಡುವುದನ್ನು ತಪ್ಪಿಸುವಲ್ಲಿ ಬಜರಂಗದಳ ಮುನ್ನಡೆಯುತ್ತಿದೆ, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಶವ ಸಂಸ್ಕಾರ ಇದೇ ಬಜರಂಗದಳ ಮಾಡಿ ಲಕ್ಷಾಂತರ ಜನರ ಮನೆಗಳಿಗೆ ಆಹಾರ ಕಿಟ್ ಕೊಟ್ಟು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿತ್ತು, ಇವೆಲ್ಲವನ್ನು ಮಾಡುವಾಗ ಇವರು ಯಾವ ಪಕ್ಷದವರು ಎಂದು ನೋಡಿರಲಿಲ್ಲ, ಅದಕ್ಕೆ ಹಿಂದು ಧರ್ಮ ವಿರೋದಿ ಕಾಂಗ್ರೆಸ್ ಪಕ್ಷ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸಿಮರನ್ನು ಓಲೈಸಿಕೊಳ್ಳುವ ಉದ್ದೆಶದಿಂದ ಬಜರಂಗದಳವನ್ನು ನಿಷೇದಿಸುವ ಬಳುವಳಿ ನೀಡಲು ಮುಂದಾಗಿದೆ ಎಂದು ಟೀಕಿಸಿದರು.
ಹಿಂದು ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸಿ ಜಿಹಾದಿಗಳಿಂದ ನಡೆಯುತ್ತಿದ್ದ ಕ್ರೌರ್‍ಯವನ್ನು ತೊಡೆದು ಮತಾಂಧರಿಗೆ ತಕ್ಕ ಉತ್ತರ ಕೊಟ್ಟು ಹಿಂದುಗಳಿಗೆ ಆತ್ಮಸ್ಥೈರ್ಯ ನೀಡಿ ಹಿಂದುಗಳಾಗಿ ನಾವಿನ್ನೂ ಬದುಕಿದ್ದೇವೆ ಎಂಬ ನಂಬಿಕೆ ಬಜಗಂದದಳ ನೀಡಿತ್ತು, ಇಂತಹ ಬಜರಂಗದಳವನ್ನು ನಿಷೇದಿಸಲು ಕಾಂಗ್ರೆಸ್ ಮುಂದಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿನ ಹಿಂದುಗಳು ಮಾಡುತ್ತಿರುವ ಧರ್ಮ ದ್ರೋಹ ಎಂದರು.
ಕೇವಲ ಓಟ್ ಬ್ಯಾಂಕ್‌ಗಾಗಿ ಒಂದು ಮತದ ತುಷ್ಟೀಕರಣ ಮಾಡುವ ಕಾಂಗ್ರೆಸ್ ಪಕ್ಷ ಕೇಂದ್ರ ಬಿಜೆಪಿ ಸರ್ಕಾರ ಪಿ.ಎಫ್.ಐ. ಸಂಘಟನೆ ನಿಷೇಧಿಸಿದಾಗ ಮೌನವಾಗಿತ್ತು. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ, ಗೋಹತ್ಯಾ ನಿಷೇದ ಕಾನೂನು, ಮತಾಂತರ ನಿಷೇದ ಕಾನೂನುಗಳನ್ನು ಗಟ್ಟಿ ಮಾಡುವಂತೆ ಹಾಗು ಕೂಡಲೆ ಸಮಾನ ನಾಗರೀಕ ಸಂಹಿತೆಯ ಜಾರಿಗೆ ತರುವಂತೆ ಮಾಡಲು ಹಿಂದುಗಳು ಮತ್ತು ದೇಶಭಕ್ತರು, ಸಂಕಲ್ಪ ಮಾಡಬೇಕು ಎಂದು ಒತ್ತಾಯಿಸಿದರು.