ಬಗರ ಹುಕುಂ ಸಾಗುವಳಿದಾರರ ಬೇಡಿಕೆ ಆಗ್ರಹಿಸಿ ಪ್ರತಿಭಟನೆ

ವಿಜಯಪುರ:ಮಾ.25: ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಕೆಪಿಆರ್‍ಎಸ್ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ನಗರದ ಡಾ. ಅಂಬೇಡ್ಕರ ವೃತ್ತದಿಂದ ಬೃಹತ್ ಪ್ರತಿಭಟನೆ ಮುಖಾಂತರ ಬಗರ ಹುಕುಂ ಸಾಗುವಳಿದಾರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಸನ್ಮಾನ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ, ಕರ್ನಾಟಕ ಸರಕಾರ ಬಗರ ಹುಕುಂ ಸಾಗುವಳಿದಾರರಿಗೆ ಫಾರಂ ನಂ. 57 ತುಂಬಲಿಕೆ 2018 ರಿಂದ ಆದೇಶ ಮಾಡಿದರು. ಆ ಪ್ರಕಾರ ವಿಜಯಪುರ – ಬಬಲೇಶ್ವರ, ಇಂಡಿ, ನಿಡಗುಂದಿ, ತಿಕೋಟಾ ತಾಲ್ಲೂಕೂಗಳಲ್ಲಿ ಬಗರ ಹುಕುಂ ಸಾಗುವಳಿ ಸುಮಾರು ವರ್ಷದಿಂದ ಸಾಗುವಳಿ ಮಾಡುತ್ತಿದ್ದಾರೆ: ದಾಖಲೆಗಳನ್ನು ಹಚ್ಚಿ ಹಲವಾರು ಅರ್ಜಿಗಳನ್ನು ಕೊಟ್ಟಿದ್ದಾರೆ. ಸರಕಾರ ಅಕ್ರಮ ಸಕ್ರಮ ಗೊಳಿಸಲ್ಲಿಕೆ ಹಕ್ಕು ಪತ್ರ ಕೊಡಲ್ಲಿ, ಶಾಸಕರ ಅಧ್ಯಕ್ಷತೆಯಲ್ಲಿ ಕಮಿಟಿ ರಚನೆ ಮಾಡುವದರಲ್ಲಿ ವಿಫಲವಾಗಿ ಇನ್ನೂವರೆಗೆ ಯಾವ ರೈತರಿಗೆ ಬಗರ ಹುಕುಂ ಸಾಗುವಳಿ ಮಾಡುವರಿಗೆ ಹಕ್ಕು ಪತ್ರ ಕೊಟ್ಟಿಲ್ಲ. ತಕ್ಷಣ ಅಕ್ರಮ ಸಕ್ರಮಗೊಳಿಸಲಿಕ್ಕೆ ಕಮಿಟಿ ರಚನೆ ಮಾಡಬೇಕು. ತಕ್ಷಣ ಬಗರ ಹುಕ್ಕುಂ ಹಕ್ಕು ಪತ್ರ ಕೊಡಬೇಕು. ) ಜಿಲ್ಲಾ ಅಧಿಕಾರಿಗಳು ವಿಜಯಪುರ ಹಾಗೂ ತಹಶೀಲದಾರ ವರದಿಯ ಮೇಲೆ ದಿನಾಂಕ: 18-12-2021 ರಿಂದ ಆದೇಶ ಮಾಡಿ ಬಗರ ಹುಕುಂ ಸಾಗುವಳಿಯ 57 ಪಾರಂ ತಿರಸ್ಕರಿಸಿದ್ದು, ಕಂದಾಯ ಕಾಯ್ದೆ ವಿರುದ್ಧವಾಗಿದ್ದು, ಇದನ್ನು ತಕ್ಷಣ ಗದ್ದುಗೊಳಿಸಬೇಕು.

ಬಬಲೇಶ್ವರ ತಾಲೂಕಿ ಶಿರಟುರ, ಹೊಸುರ, ಬಗಿ, ಚಿಕ್ಕಗಲಗಲ್ಲಿ, ಕಣಬೂರೆ, ಈ ಗ್ರಾಮಗಳ ಸರಕಾರದ ಭೂಮಿ ಸುಮಾರು ವರ್ಷದಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಫಾರಂ ನಂ. 57 ತುಂಬಿದ್ದಾರೆ. ಇವರ ಕಡೆ ಸಾಗುವಳಿ ಮಾಡುವ ದಾಖಲೆಗಳು, ನಕಾಶೆಗಳ ಹಾಗೂ ಸುಪ್ರೀಂ ಕೋರ್ಟ್ ಆದೇಶ ಇದ್ದು. ಇವರು ಇನ್ನೂವರೆಗೆ ಕಬ್ಬಾ ವಹಿವಾಟ್ಟು ಮಾಡುತ್ತಿದ್ದಾರೆ. ಕರ್ನಾಟಕ ಸರಕಾರ ಕೃಷ್ಣ ಅಲಮಟ್ಟಿ ಆಣೆಕಟ್ಟು, ಹಿನ್ನಿರುವಲ್ಲಿ ಮುಳುಗಡೆ ಪ್ರದೇಶ ಭೂಮಿ ಸ್ವಾಧೀನ ಪಡಿಸಿ ಕೊಳ್ಳುವುದಕ್ಕೆ ಜಾಹೀರಾತು ಕೊಟ್ಟಿದ್ದು, ಅ) ಅಕ್ರಮ ಸಕ್ರಮ ಗೊಳಿಸಿ ಹಕ್ಕು ಪತ್ರ ಕೊಡಬೇಕು. (ಅ) ಅವರು ಸಾಗುವಳಿ ಮಾಡಿದ ಭೂಮಿಗೆ ಪರಿಹಾರ ಹಣ ಕೊಡಬೇಕು. (ಇ) ಪುನರ ವಸತಿ ಕಾಯ್ದೆ ಪ್ರಕಾರ ಬೇರೆ ಕಡೆ ಭೂಮಿ ಮನೆಗಳು ಕೊಡಬೇಕು. (ಈ) ಬೆಳೆಗಳ ಪರಿಹಾರ ಧನ ಕೊಡಬೇಕು. ಇಂಡಿ ತಾಲೂಕಿನ ತಡಲಗಿ ಗ್ರಾಮದ ಮುಪತಗೈರಾಣ ಭೂಮಿ 5 ಎಕರೆಯಂತೆ ಸುಮಾರು ವರ್ಷದಿಂದ ದಲಿತರು. ಸಾಗುವಳಿ ಮಾಡಿದ್ದಾರೆ. ಮನೆ, ಶಡ್ಡಗಳು ಹಾಕಿಕೊಂಡು ಜೀವನತಹಶೀಲದಾರ ಇವರು 57 ಫಾರಂನ್ನು ಕಾನೂನ ಭಾಹಿರ ರದ್ದು ಮಾಡಿದ್ದಾರೆ. ಅಕ್ರಮ ಮನೆಗಳು ಸಕ್ರಮಗೊಳಿಸಲ್ಲಿ ಕೆ ಹಣ ತುಂಬಿದ್ದಾರೆ. ಸರಕಾರ ಆದೇಶ ಪ್ರಕಾರ ಭೂಮಿ, ಮತ್ತು ಮನೆ, ಅಕ್ರಮ ಸಕ್ರಮಗೊಳಿಸಿ ಹಕ್ಕು ಪತ್ರ ಕೊಡಬೇಕು.

ವಿಜಯಪುರ ತಾಲೂಕಿನ ಅಲಿಯಾಬಾದ ಸರ್ವೆ ನಂ. 166, 167, 169 ಸುಮಾರು ವರ್ಷದಿಂದ ಬಗರ ಸಾಗುವಳಿ ಮಾಡುತ್ತಾ ಬಂದಿದ್ದಾರೆ. 57 ಫಾರಂ ತುಂಬಿದ್ದಾರೆ. ಎಲ್ಲಾ ದಾಖಲೆಗಳನ್ನು ಹಚ್ಚಿ ಕೊಟ್ಟಿದ್ದಾರೆ. ತಹಶೀಲದಾರ ವಿಜಯಪುರ ಇವರಿಗೆ ದಿನಾಂಕ 20-01-2022 ಸಾಲಿನ ದಾಖಲೆ ಕೊಡಬೇಕಂತ ಅರ್ಜಿ ಕೊಟ್ಟರು 3 ತಿಂಗಳು ಎಡತಾಕಿಸಿದ್ದಾರೆ. ಶ್ರೀ ಅಡಿಗಲ, ಖಾಸಗಿ ಸರ್ವೇಯರ ಶ್ರೀ. ವಟ್ಟಾರ ಅಮಿಸಿಗೆ ಒಳಗಾಗಿ ದಾಖಲೆ ಕೊಡದೆ ಹಶೀಲದಾರ ದಿನಾಂಕ:11-03-2022 ರಿಂದ ಅಭಿಲೇಖಾಲಯದಲ್ಲಿ ಅಳವಡಿಸಿರುವುದಿಲ್ಲ ಅಂತ ತಿಳಿಸಿದ್ದಾರೆ. ಕಾನ್ಸೂನ ಸಕ್ರಮಗೊಳಿಸಿ ಹಕ್ಕು ಪತ್ರ ಕೊಡಬೇಕು. ಮಾಡಿದವರಿಗೆ ಕ್ರಮ ತೆಗೆದುಕೊಳ್ಳಬೇಕು. ಅಕ್ರಮ

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಗುಡಿಮನಿ ಮಾತನಾಡಿ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ರಿ.ಸ.ನಂ. 221 , 109 ಎಕರೆ 43 ಗುಂಟೆ ಸುಮಾರು ವರ್ಷದಿಂದ ಸರಕಾರ ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಫಾರಂ ನಂ. 57 ತುಂಬಿದ್ದಾರೆ. ಅರಣ್ಯ ಭೂಮಿಯನ್ನು ಕಂದಾಯ ಇಲಾಖೆ ವರ್ಗಾಯಿಸಿದ್ದು. ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದಾರೆ. ಹಲವರು ರ್ಜಿಗಳನ್ನು ಕೊಟ್ಟಿದ್ದಾರೆ.

ಸರಕಾರ ದಲ್ಲಿತರಿಗೆ 2 ಎಕರೆ ಭೂಮಿ ಕೊಡುತ್ತಾರೆ. ಅದ ಕಾರಣ ಸರಕಾರ ಭೂಮಿಯನ್ನು ಅಕ್ರಮ ಸಕ್ರಮಗೊಳಿಸಲಿಕ್ಕೆ ಹಕ್ಕು ಪತ್ರ ಕೊಡಬೇಕು. ಹಾಗೂ ಅರಣ್ಯ ಭೂಮಿ ಶ್ರೀ ರವಿ ರಾಠೋಡ 10 ಎಕರೆ ಮಾರುತ್ತಾರೆ. ಇವರ ಮೇಲೆ ಕ್ರಮ ತೆಗೆದುಕೊಳದ ದಲಿತರಿಗೆ ಅರಣ್ಯ ಇಲಾಖೆ ಕಿರುಕೊಳ್ಳ ಕೊಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು ಎಂದರು

ಈ ಸಂದರ್ಭದಲ್ಲಿ ಪರಸಪ್ಪ ಮಂಟೂರ, ಸುರೇಖಾ ರಜಪೂತ, ಹಣಮಂತ ಶಿರಬೂರ, ದಾದರಸಾಬ ಜೈನಾಪೂರ, ಲಾಲಸಾಬ ಮ್ಯಾಗೇರಿ, ಸೊಮಪ್ಪ ಗುಡಿಮನಿ, ಭೀಮಪ್ಪ ಮಾದರ, ಸೋಮನಿಂಗ ತಳಕಡೆ, ಚಂದಪ್ಪ ತಡಲಗಿ, ಸುರೇಶ ತಳಕೇರಿ, ಮಾಳಪ್ಪ ನಡುವಿನಮನಿ ಜುಬೇದಾ ಹಣಗಿ, ರಾಜು ರಣದೇವಿ ಹುಸೇನಸಾಬ ದೊಡಮನಿ ವಿಠ್ಠಲ ಚಲವಾದಿ ಸಿದ್ದಪ್ಪ ಹುಲಿಜಂತಿ ಮತ್ತಿತರರು ಉಪಸ್ತಿತರಿದ್ದರು.