ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ರೈತರ ಒತ್ತಾಯ

ದಾವಣಗೆರೆ, ಜು.13; ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸರ್ವೇ ಸ್ಕೆಚ್ ಕಾಪಿ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ  ಪ್ರತಿಭಟಿಸಲಾಯಿತು.ನಗರದ ತಾಲೂಕು ಕಚೇರಿ ಎದುರು ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟಿಸಿದ ರೈತರು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಹಾಗೂ ಹಕ್ಕುಪತ್ರ ಪಡೆದ ರೈತರಿಗೆ ಸ್ಕೆಚ್ ಕಾಪಿ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಬಸವನಗೌಡ ಕೋಟೂರುಗೆ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸರ್ವೇ ಸ್ಕೆಚ್ ಕಾಪಿ ನೀಡಬೇಕು. 94 ಸಿ(ನಿವೇಶನ ರಹಿತರಿಗೆ) ಅಡಿಯಲ್ಲಿ ಅರ್ಜಿ ಹಾಕಿದ -Àಲಾನುಭವಿಗೆ ತುರ್ತಾಗಿ ಹಕ್ಕುಪತ್ರ ನೀಡಬೇಕು. ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ನೀಡಬೇಕು. ಅದೆಷ್ಟೋ ಗ್ರಾಮಗಳಲ್ಲಿ ಭೂ ಇಲ್ಲದ ಕಡು ಬಡ ಕುಟುಂಬದ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಗೂ ಜಾಗ ಇಲ್ಲದೇ ಪರದಾಡುವ ಸ್ಥಿತಿ ಮೊದಲು ತಪ್ಪಿಸಬೇಕು ಎಂದು ಒತ್ತಾಯಿಸಿದರು.ತಾಲೂಕು ಆಡಳಿತ ಪ್ರತಿ ತಿಂಗಳು ಪ್ರತಿ ಸೋಮವಾರ ನಿಽðಷ್ಟ ಗ್ರಾಮ ಪಂಚಾಯಿಗಳಿಗೆ ಭೇಟಿ ನೀಡಿ, ಸ್ಥಳೀಯ ಗ್ರಾಮಸ್ಥ ಕುಂದು ಕೊರತೆಗಳನ್ನು ಆಲಿಸುವ ಕೆಲಸ ಮಾಡಬೇಕು. ದಾವಣಗೆರೆ ತಾ. ಮಾಯಕೊಂಡ ಗ್ರಾಪಂ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರದಲ್ಲಿ ವ್ಯವಸ್ಥಾಪಕರು ಕಚೇರಿ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವೈಯಕ್ತಿಕ ಕಾರಣಗಳನ್ನೊಡ್ಡಿ, ಸಾರ್ವಜನಿಕರು, ಗ್ರಾಮೀಣರ ಕೆಲಸ ಕಾರ್ಯಕ್ಕೆ ವಿಳಂಬ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನಿನ್ವಯ ಕ್ರಮ ಕೈಗೊಂಡು, ಸಮಸ್ಯೆ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಸಂಘಟನೆ ಮುಖಂಡರಾದ ಎ.ಎಂ.ಕುಮಾರಸ್ವಾಮಿ ಅಣಬೇರು, ಚಮನ್, ಭೀಮಣ್ಣ ಆನಗೋಡು, ಸಿ.ಆರ್.ಭೀಮಾನಾಯ್ಕ ಚಿನ್ನಸಮುದ್ರ, ಚಿಕ್ಕನಹಳ್ಳಿ ರೇವಣ್ಣ, ಬಿ.ಸುಭಾಶ್ಚಂದ್ರ, ಜಿ.ಸಿ.ಅಶೋಕ, ಆರ್.ಜಿ.ಬಸವರಾಜ ರಾಂಪು, ಎನ್.ಟಿ.ಜಯನಾಯ್ಕ ನಾಗರಕಟ್ಟೆ, ಆರ್.ಎಚ್.ಪ್ರತಾಪ ಮಾಯಕೊಂಡ, ದಶರಥರಾಜ, ಚೌಡಪ್ಪ, ರೇವಣ್ಣ ಇತರರು ಇದ್ದರು.