ಚನ್ನಮ್ಮನ ಕಿತ್ತೂರ,ಜೂ30: ವಿವಿಧ ಗ್ರಾಮಗಳಲ್ಲಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಮೀಪದ ಗಂದಿಗವಾಡ ಗ್ರಾಮದಲ್ಲಿ ಆಕರ್ಷಕ ಪಥ ಸಂಚಲನದ ಮೂಲಕ ಮುಸ್ಲಿಂ ಬಾಂದವರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ನೇರವೇರಿಸಿದರು. ಲೋಕಕಲ್ಯಾಣಕ್ಕಾಗಿ ತೌಫಿಕ್ ಮೌಲಾನಾ ಪ್ರಾರ್ಥನೆ ನೇರವೇರಿಸಿದರು.
ಈ ವೇಳೆ ಮುಸ್ಲಿಂ ಜಮಾತ್ ಅಧ್ಯಕ್ಷ ಗೌಸ್ ಬಾಗವಾನ, ಕಾರ್ಯದರ್ಶಿ ಅನ್ವರ್ ಬಾಗವಾನ, ಇಸಾಕ್ ಸಾಹೇಬಖಾನ, ಯೂನೂಸ್ ಬಾಗವಾನ, ನೌಸರಲಿ ಸಾಹೇಬ ಖಾನ, ಯಾಸೀನ ಅತ್ತಾರ, ಎಮ್.ಎಮ್.ರಾಜೀಬಾಯಿ, ಆಯ್,ಜೆ ಬಾಗವಾನ, ಡಿ.ಎಂ.ಬಾಗವಾನ ಇನ್ನಿತರರಿದ್ದರು.