ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ : ಪಿಎಸ್‍ಐ ಕಾರಜೋಳ

ಅಥಣಿ : ಜೂ.11:ಬಕ್ರೀದ್ ಹಬ್ಬವು ಮುಸ್ಲಿಂ ಧರ್ಮದ ಅತ್ಯಂತ ಪವಿತ್ರ ಶೃದ್ಧಾ ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ, ಹಿಂದೂ -ಮುಸ್ಲಿಂ ಸಮಾಜ ಬಾಂಧವರು ಒಟ್ಟಾಗಿ ಶಾಂತಿ ಮತ್ತು ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಬೇಕು ಎಂದು ಅಥಣಿ ಪೆÇೀಲಿಸ್ ಠಾಣೆಯ ಪಿಎಸ್‍ಐ ಶಿವಾನಂದ ಕಾರಜೋಳ ಮನವಿ ಮಾಡಿದರು.
ಅವರು ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಬೆಳಗ್ಗೆ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಹಿಂದೂ – ಮುಸ್ಲಿಂ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಮಾತನಾಡುತ್ತಿದ್ದರು. ಜೂನ್ 17 ರಂದು ಆಚರಿಸಲಾಗುತ್ತಿರುವ ಬಕ್ರೀದ್ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ, ತಕ್ಷಣ ಪೆÇಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಈ ವೇಳೆ ಮುಸ್ಲಿಂ ಮುಖಂಡರಾದ ಅಯಾಜ್ ಮಾಸ್ಟರ್ ಮಾತನಾಡಿ, ಅಥಣಿ ತಾಲೂಕಿನಲ್ಲಿ ಯಾವುದೇ ಹಬ್ಬ ಇರಲಿ ಇಲ್ಲಿ ಎಲ್ಲ ಸಮಾಜದವರು ಪರಸ್ಪರ ಭಾವೈಕ್ಯತೆಯಿಂದ ಸೌಹಾರ್ದತೆಯಿಂದ ಆಚರಿಸುತ್ತಾ ಬಂದಿದ್ದೇವೆ ಆದ್ದರಿಂದ ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಸಂಭವಿಸುವುದಿಲ್ಲ ಎಲ್ಲರೂ ಒಂದಾಗಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಪುರಸಭೆ ಸದಸ್ಯ ಸಂತೋಷ್ ಸಾವಡಕರ ಮಾತನಾಡಿ ಅಥಣಿ ಶಿವಯೋಗಿಗಳ ಪುಣ್ಯ ಕ್ಷೇತ್ರವಾಗಿದ್ದು ಇಲ್ಲಿ ಹಬ್ಬ ಹರಿದಿನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲ ಏಕೆಂದರೆ ಇಲ್ಲಿ ಎಲ್ಲ ಸಮಾಜದವರು ಭಾವೈಕ್ಯತೆ ಹಾಗೂ ಸೌಹಾರ್ದಯುತವಾಗಿ ಇದ್ದೇವೆ ಹಾಗಾಗಿ ಎಲ್ಲ ಸಮಾಜ ಬಾಂಧವರು ಶಾಂತಿ ಕಾಪಾಡುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪಿಎಸ್ ಐಗಳಾದ ಚಂದ್ರಶೇಖರ ಸಾಗನೂರ. ಪ್ರೇಮಾ ಕುಚಬಾಳೆ. ಮುಖಂಡರಾದ ಅಸ್ಲಮ್ ನಾಲಬಂದ. ಸೈಯದ್ ಗಡ್ಡೇಕರ. ರಿಯಾಜ್ ಸನದಿ. ಆಸೀಫ್ ತಾಂಬೋಳಿ. ವಿನಯಗೌಡಾ ಪಾಟೀಲ. ಶಬ್ಬೀರ್ ಸಾತಬಚ್ಚೆ. ಮಂಜು ಹೋಳಿಕಟ್ಟಿ. ರಾಜಕುಮಾರ ಜಂಬಗಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೆಚ್ಚುವರಿ ಪಿಎಸ್ ಐ ಚಂದ್ರಶೇಖರ ಸಾಗನೂರ ಸ್ವಾಗತಿಸಿ ವಂದಿಸಿದರು.