ಬಕ್ರೀದ್ ಮೋದಿ, ಕೋವಿಂದ್ ಶುಭಾಶಯ

ನವದೆಹಲಿ, ಆ. ೧- ದೇಶದಲ್ಲೆಡೆ ಸಡಗರ ಸಂಭ್ರಮದಿಂದ ನಡೆಯುತ್ತಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ತ್ಯಾಗ, ಬಲಿದಾನ, ಸಂಕೇತವಾದ ಮುಸ್ಲೀಂರ ಪವಿತ್ರ ಹಬ್ಬವಾದ ಬಕ್ರೀದ್‌ನ್ನು ಇಂದು ದೇಶದಾದ್ಯಂತ ಮುಸ್ಲಿಂರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇಶದ ಜನತೆಗೆ ಟ್ವೀಟ್ ಮೂಲಕ ಹಬ್ಬದ ಶುಭಾಶಯ ಕೋರಿದ್ದು, ಎಲ್ಲರಿಗೂ ಈದ್ -ಉಲ್ ಆದ ಹಬ್ಬದ ಶುಭಾಶಯಗಳು ನ್ಯಾಯಯುತ ಸಾಮರಸ್ಯ ಮತ್ತು ಸಮಾಜ ಒಗ್ಗೂಡಿಸಲು ಇದು ದೇಶದ ಜನತೆಗೆ ಪ್ರೇರಣೆಯಾಗಲಿ. ಸಹೋದರತ್ವ ಮತ್ತು ಸ್ನೇಹ, ಸಹಾನುಭೂತಿ, ಮನೋಭಾವ, ಹೆಚ್ಚಿಸಲಿ ಎಂದು ತಿಳಿಸಿದ್ದಾರೆ.
ಬಕ್ರೀದ್ ಹಬ್ಬ ತ್ಯಾಗ ಮತ್ತು ಸೌಹಾರ್ದತೆ, ಮನೋಭಾವ, ಸಾಂಕೇತವಾಗಿದೆ. ಒಬ್ಬರು ಮತ್ತೊಬ್ಬರ ಯೋಗಕ್ಷೇಮ, ಚಿಂತಿಸಲು ಹಬ್ಬ ಪ್ರೇರೇಣೆಯಾಗಿದೆ. ಈ ವೇಳೆ ಪರಸ್ಪರ ಸಂತೋಷವನ್ನು ಹಂಚಿಕೊಳ್ಳೋಣ. ದೇಶದೆಲ್ಲೆಡೆ ಕೊರೊನಾ ಸೋಂಕು ವ್ಯಾಪಿಸಿರುವ ಹಿನ್ನೆಲೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸೋಣ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.