ಬಕ್ರಿದ್ ಹಬ್ಬ ಶಾಂತಿಯಿಂದ ಆಚರಣೆ ಮಾಡಲು  ಕರೆ 

ಹರಿಹರ ಜೂ ೨೬; ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ  ಪವಿತ್ರ ಬಕ್ರೀದ್  ಹಬ್ಬ ಆಚರಿಸಬೇಕು ಎಂದು ನಗರ ಠಾಣೆ ಇನ್ಸ್ ಪೆಕ್ಟರ್ ದೇವಾನಂದ ಎಸ್ ಹೇಳಿದರು. ನಗರ ಠಾಣೆ ಸಭಾಂಗಣದಲ್ಲಿ ಶಾಂತಿ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರುನಮ್ಮ ದೇಶವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಜಾತ್ಯಾತೀತ ರಾಷ್ಟ್ರವಾಗಿದೆ ಹಬ್ಬಗಳು ಶಾಂತಿ ಸಾಮರಸ್ಯದ ಪ್ರತೀಕವಾಗಿವೆ ಹರಿಹರ ತಾಲೂಕು ಶಾಂತಿಗೆ ಹೆಸರುವಾಸಿಯಾಗಿದ್ದು ಪ್ರತಿಯೊಬ್ಬರೂ ಕಾನೂನಾತ್ಮಕವಾಗಿ ನಡೆದುಕೊಂಡು ಇನ್ನೊಬ್ಬರ ಧಾರ್ಮಿಕತೆಗೂ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಸರ್ಕಾರದ ಆದೇಶ  ಪ್ರತಿಯೊಬ್ಬರು ಪಾಲಿಸಬೇಕು ಹರಿಹರದ ಜನತೆ ಶಾಂತಿ ಪ್ರಿಯರು ಪೋಲಿಸ್ ಇಲಾಖೆಗೆ ಸದಾ ಸಹಕಾರಿಯಾಗಿರುತ್ತಾರೆ ಮುಂದಿನ ದಿನಗಳಲ್ಲಿ  ಎಲ್ಲಾ ಧರ್ಮದವರಿಂದ ಸಹಕಾರವನ್ನು ಇಲಾಖೆ ಬಯಸುತ್ತದೆ ಕಾನೂನು ಸುವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ   ಸಹಕರಿಸಬೇಕು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು ಯಾವುದೇ ಧರ್ಮದ ಹಬ್ಬ ಹರಿದಿನವಾಗಲಿ ಮತ್ತೊಂದು ಧರ್ಮದವರಿಗೆ ನೋವು ಉಂಟಾಗುವ ರೀತಿಯಲ್ಲಿ ಆಚರಿಸಿಕೊಳ್ಳುವುದು ಸರಿಯಲ್ಲ ಇತರರಿಗೆ ಸಮಸ್ಯೆ ಆಗದ ರೀತಿಯಲ್ಲಿ ನಮ್ಮ ಆಚಾರ ವಿಚಾರಗಳು ಕಾರ್ಯ ಚಟುವಟಿಕೆಗಳು ಇದ್ದಲ್ಲಿ ಸಮಾಜಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಯಾವುದೇ ಹಿಂತಕರ ಘಟನೆಗಳಿಗೆ ಆಸ್ಪದ ನಡೆದಂತೆ ಹಿಂದೂ ಮುಸ್ಲಿಂ  ಹಿರಿಯರು ಮುಖಂಡರುಗಳು ಯುವಕರು ಶಾಂತಿ ಸಹಬಾಳ್ವೆಯಿಂದ ಪವಿತ್ರ ಬಕ್ರೀದ್  ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದರು ಹಿರಿಯ ಪತ್ರಕರ್ತ ಪಂಚಾಕ್ಷರಿ  ಮಾತನಾಡಿ ಹರಿಹರದಲ್ಲಿ ಎಂದು ಅಹಿತಕರ ಘಟನೆ ನಡೆದಿಲ್ಲಾ ಹರಿ ಮತ್ತು ಹರ ನೆಲೆಸಿರುವ ನಗರ ಶಾಂತಿ ಮತ್ತು ಸೌಹಾರ್ದತೆ ಹೆಸರುವಾಸಿ ನಮ್ಮ ನಗರ ಹೀಗಾಗಿ ಬಕ್ರೀದ್ ಹಬ್ಬ ಆಚರಣೆಯು ಶಾಂತಿಯುತವಾಗಿ ಹಿಂದು ಮುಸ್ಲಿಂ ಸಮಾಜದವರು ಆಚರಿಸಬೇಕು ಎಲ್ಲಾ ಸಮಾಜದಲ್ಲು ಕೂಡ ಕಿಡಗೇಡಿಗಳು ಸಮಾಜ ಶಾಂತಿ ಕದಡಲು ಕಾಯುತ್ತಿರುತ್ತಾರೆ ಅಂತಹವರಿಗೆ ಹಿರಿಯ ಮುಖಂಡರು ತಿಳಿಹೇಳಬೇಕು ಆದಾಗಿಯು ಸಮಾಜದಲ್ಲಿ ಶಾಂತಿ ಭಂಗ ಮಾಡಿದರೆ ಪೊಲೀಸ್ ಇಲಾಖೆಯು ನೀರ್ದಾಕ್ಷಿಣಾ  ಕಮ ಕೈಗೊಳ್ಳಬೇಕು ಎಂದು ತಿಳಿಸಿದರು ನಗರಸಭಾ ಸದಸ್ಯ ಎ ಬಿ ಎಂ ವಿಜಯ್ ಕುಮಾರ್ ಮಾತನಾಡಿ ಬಕ್ರಿದ ದಾನ ಧರ್ಮದ ಹಬ್ಬವಾಗಿದ್ದು, ಆ ಸಮಯದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ ಶಾಂತರೀತಿಯಿಂದ ಹಬ್ಬ ಆಚರಿಸಬೇಕು ಎಂದರು.