
ಬಸವನಬಾಗೇವಾಡಿ:ಆ.15:ಭಾರತದ 77ನೆಯ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ವೀರರನ್ನು ಸ್ಮರಿಸುವುದು, ಗೌರವಿಸುವುದು, ನಮ್ಮ ಜವಾಬ್ದಾರಿ ಯಾಗಿದೆ ಎಂದು ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಲೋಕನಾಥ್ ಅಗರವಾಲ ಹೇಳಿದರು
ಬ್ಯಾಂಕಿನ ಆವರಣದಲ್ಲಿ 77ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಅಗಸ್ಟ್ 15 ಪ್ರತಿ ಭಾರತೀಯರ ಪಾಲಿನ ಹೆಮ್ಮೆಯ ದಿನ ಬ್ರಿಟಿಷರ ಆಳ್ವಿಕೆ ಎಂಬ ಬಂಧನದ ಬೇಡಿ ಕಳಚಿಕೊಂಡ ದಿನ ಇದು ಈ ಸುದಿನದ ಹಿಂದೆ ಅದೆಷ್ಟೋ ಕೆಚ್ಚೆದೆಯ ವೀರರ ಬಲಿದಾನಗಳಾಗಿವೆ ತ್ಯಾಗದ ಕಥೆಗಳು ನಮ್ಮ ಮುಂದೆ ನಿಂತಿವೆ ಸ್ವಾತಂತ್ರ್ಯದ ಕಿಚ್ಚು ದೇಶದಲ್ಲೆಡೆ ವ್ಯಾಪಿಸಿದಾಗ ಕೊನೆಗೆ ಬ್ರಿಟಿಷರೇ ನಡುಗಿ ದೇಶ ಬಿಟ್ಟು ಹೋಗಬೇಕಾಯಿತು ಈ ಮಹತ್ವದ ದಿನಕ್ಕಾಗಿ ಅಸಂಖ್ಯಾತ ಹೋರಾಟಗಾರರು ಸಂಕಲ್ಪ ತೊಟ್ಟಿದ್ದರು ಧೈರ್ಯದಿಂದ ಹೋರಾಡಿದ್ದರು ಈ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿ ಭಾರತೀಯನ ಮೇಲಿದೆ ಎಂದು ಹೇಳಿದರು ನಿರ್ದೇಶಕರಾದ ಶಂಕರಗೌಡ ಬಿರಾದಾರ ಮಾತನಾಡಿ ಸ್ವಾತಂತ್ರ್ಯೋತ್ಸವದ ಈ ಪ್ರಮುಖ ದಿನದಂದು ದೇಶಕ್ಕಾಗಿ ಹೋರಾಡಿದ ವೀರಾಗ್ರಣಿಗಳನ್ನು ಸ್ಮರಿಸೋಣ ಈ ವೀರರ ಅದ್ಭುತ ಕೊಡುಗೆಯೆ ಈ ಸ್ವಾತಂತ್ರ್ಯ ತಮ್ಮ ಅಚಲಶಕ್ತಿಯಿಂದ ದೇಶವನ್ನು ಕಾಪಾಡುವ ಸಂಕಲ್ಪ ತೊಟ್ಟ ಎಲ್ಲರಿಗೂ ಸ್ಪೂರ್ತಿಯಾದ ವೀರರಿಗೆ ನಾವು ವಂದಿಸೋಣ ಇವರ ತ್ಯಾಗ ಹೋರಾಟವೇ ನಮಗೆ ಸ್ಪೂರ್ತಿ ಧೈರ್ಯ ದಾರಿ ದೀಪವಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ನೀಲಪ್ಪ ನಾಯಕ್ ಬಸವರಾಜ್ ಗೊಳಸಂಗಿ ಉಮೇಶ್ ಹಾರಿವಾಳ್ ರಮೇಶ್ ಯಳಮೇಲಿ ಬಿ.ಜಿ ಬಿರಾದಾರ ಶ್ರೀಶೈಲ ಪತ್ತಾರ್ ಅರ್ ವ್ಹಿ ಗುತ್ತರಗಿಮಠ ಬಸು ಚೌರಿ ಬ್ಯಾಂಕಿನ ಪ್ರಧಾನ್ ವ್ಯವಸ್ಥಾಪಕರಾದ ಪಿ.ಆಯ್.ಬ್ಯಾಕೊಡ ವ್ಯವಸ್ಥಾಪಕರಾದ ಸಿ.ಎಸ್ ತಳ್ಳುಳ್ಳಿ ರಾಘವೇಂದ್ರ ಚಿಕ್ಕೊಂಡ ಮಂಜುಳಾ ಪಾಟೀಲ್ ಉಮಾ ಕಾಳೇಕರ್ ಅನಿಲ್ ಕುಲಕರ್ಣಿ ಕಾಂತು ಅವಟಿ ಶರಣು ಹೊಕ್ರಾಣಿ. ಶೇಖರ್ ತಾಂಬೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು