ಬಂದರವಾಡ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಅಫಜಲಪುರ:ನ.2: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದರವಾಡದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಎಚ್.ಎಮ್ ಸದಾಶಿವ ಹಿಟ್ಟಿನ, ಕಲ್ಯಾಣರಾವ ಜಮಾದಾರ, ಮಹಾಂತಮ್ಮ ಪಾಸೋಡಿ, ಸಾವಿತ್ರಿ ನಂದಿ, ಅಕ್ಕಮ್ಮ, ಮಹಾಂತಯ್ಯ ಮಠ, ಸಿದ್ದಪ್ಪ ಮ್ಯಾಳೇಸಿ, ರೇವಣಸಿದ್ದಪ್ಪ ಡಿ.ಬಿ, ದತ್ತು ಮೇಲಕೇರಿ, ಶಶಿಕಲಾ ಬಿ.ಡಿ, ಎಚ್.ಕೆ ಜೇವರ್ಗಿ, ಸಮಾಜ ಕಾರ್ಯಕರ್ತ ಹಾಗೂ ಹಿರಿಯ ಪತ್ರಕರ್ತರಾದ ಆರ್.ಎಸ್ (ರಾಜು) ಅತ್ತಾರ ಪಾಲ್ಗೊಂಡಿದ್ದರು.

ತೆಗ್ಗೆಳ್ಳಿ: ಮಹರ್ಷಿ ಋಷಿ ವಾಲ್ಮೀಕಿ ಜಯಂತಿ ಆಚರಣೆ. ಅಫಜಲಪುರ: ತಾಲೂಕಿನ ತೆಗ್ಗೆಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ಋಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಿದರು. ಮುಖ್ಯಗುರು ಲಕ್ಷ್ಮಣ ಜೋಗುರ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಜಯಂತಿಯಲ್ಲಿ ಶಿಕ್ಷಕರಾದ ಮಲಕಪ್ಪ ಸಿಂಗೆ, ಲಕ್ಷ್ಮಣ ತಳವಾರ, ಲಕ್ಷ್ಮಣ ಜಾಧವ, ದಲಿತ ಮುಖಂಡ ಸುರೇಶ ನೂಲಾ, ಸಮಾಜ ಕಾರ್ಯಕರ್ತ ಹಾಗೂ ಹಿರಿಯ ಪತ್ರಕರ್ತರಾದ ಆರ್.ಎಸ್ (ರಾಜು) ಅತ್ತಾರ ಪಾಲ್ಗೊಂಡಿದ್ದರು.