
ಕಲಬುರಗಿ,ಮೇ 6: ಜಿಲ್ಲೆಯ ಅಫಜಲಪುರ ತಾಲೂಕು ಪಂಚಾಯತ ವ್ಯಾಪ್ತಿಯ ಬಂದರವಾಡ ಗ್ರಾಮ ಪಂಚಾಯತಿಯ ಉದ್ಯೋಗ ಖಾತರಿ ಯೋಜನೆ ಅಡಿ ಹಳ್ಳದ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸಹಾಯಕ ನಿರ್ದೇಶಕ ರಮೇಶ ಪಾಟೀಲ್ ಅವರು ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಮತದಾನದ ಹಾಗೂ ಉದ್ಯೋಗ ಖಾತರಿ ಜಾಗೃತಿ, ಮತ್ತು ರೋಜಗಾರ ದಿನಾಚರಣೆ ಬಗ್ಗೆ ಅರಿವು ಮೂಡಿಸಿ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡು ವಿತರಿಸಿದರು.ನಂತರ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಪಿಡಿಒ,ಟಿಸಿ, ಟಿಎಇ,ಟಿಇಒ, ಫೈಲ್ಡ್ ಅಸಿಸ್ಟಂಟ್, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ 200 ಜನ ಕೂಲಿ ಕಾರ್ಮಿಕರು ಹಾಜರಿದ್ದರು.