
(ಸಂಜೆವಾಣಿ ವಾರ್ತೆ)
ವಿಜಯಪುರ: ಆ.28:ಬಂಥನಾಳದ ಸಂಗನಬಸವ ಶ್ರೀಗಳು ಉತ್ತರ ಕರ್ನಾಟಕದ ಶಿಕ್ಷಣದ ಬೆಳಕು. ಸಾಹಿತ್ಯದಿಂದ ಮನಸ್ಸು ವಿಕಾಸವಾಗಲಿ, ಸಾಮರಸ್ಯ ಬಿತ್ತಲಿ ಎಂದು ಇಂಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ ಎಸ್ ಆಲಗೂರ ಅಭಿಪ್ರಾಯ ವ್ಯಕ್ತಪಡಿಸಿದರು
ಕನ್ನಡ ಸಾಹಿತ್ಯ ಪಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ದಿ. ಬಸಪ್ಪ ಶಿವಪ್ಪ ಉತ್ನಾಳ ಹಾಗು ದಿ. ಸಿದ್ದಪ್ಪ ಮಲ್ಲಪ್ಪ ಗುಂದಗಿ ಇವರ ಸ್ಮರಣಾರ್ಥ ನಡೆದ ದತ್ತಿನಿಧಿ ಕಾಯ9ಕ್ರಮ ಉದ್ಘಾಟಿಸಿ ಮಾತನಾಡಿದ ಪಿ ಎಸ್ ಆಲಗೂರ ಮಾತನಾಡುತ್ತಾ ಕನ್ನಡ ಸಾಹಿತ್ಯ ಹಾಗು ಶಿಕ್ಷಣಕ್ಕೆ ಮಠಾಧೀಶರ ಕೊಡುಗೆ ಅಪಾರ ಎಂದರು
ಒಂದನೇಯ ಉಪನ್ಯಾಸ ಜಯಶ್ರೀ ಹಿರೇಮಠ ಬಂಥನಾಳದ ಸಂಗನಬಸವ ಸ್ವಾಮಿಜಿಯವರ ಶೈಕ್ಷಣಿಕ ಹಾಗು ಸಾಮಾಜಿಕ ಸೇವೆ ಕುರಿತು ಮಾತನಾಡಿ ವಿಧ್ಯಾರ್ಥಿಗಳೆ ದೇವರು, ವಿದ್ಯಾಲಯಗಳೆ ದೇವಾಲಯ ಶಿಕ್ಷಣ ಪ್ರಸಾರವೆ ಲಿಂಗಪೂಜೆ ಎಂದ ಅವರು ತಮ್ಮ ಪ್ರವಚನಗಳಿಂದ ಹಾಗು ಜೋಳಿಗೆ ಹಾಕಿ ಶಿಕ್ಷಣಕ್ಕಾಗಿ ನೂರಾರು ಗ್ರಾಮಗಳಿಗೆ ಬೇಟಿ ದೇಣಿಗೆ ಸಂಗ್ರಹಿಸಿ ಬಿ ಎಲ್ ಡಿ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಕೀರ್ತಿ ಬಂಥನಾಳದ ಸಂಗನಬಸವ ಸ್ವಾಮಿಜಿಯವರಿಗೆ ಸಲ್ಲುತ್ತದೆ ಎಂದರು
ಎರಡನೇಯ ಗೋಷ್ಠಿಯನ್ನು ಉಪನ್ಯಾಸಕ ಶರಣಗೌಡ ಪಾಟೀಲ ಕಲ್ಯಾಣದ ಅನುಭವ ಮಂಟಪದ ಶೂನ್ಯ ಪೀಠ ಅಧ್ಯಕ್ಷ ಅಲ್ಲಮಪ್ರಭು ದೇವರ ಕುರಿತು ಮಾತನಾಡುತ್ತಾ ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅನುಭವ ಮಂಟಪದ ಶೂನ್ಯ ಸಿಂಹಾಸನದ ಅಧ್ಯಕ್ಷರಾಗುತ್ತಾರೆ. 1294 ಅಲ್ಲಮನ ವಚನಗಳು ಲಭ್ಯವಾಗಿವೆ. ಗುಹೇಶ್ವರ ಅಲ್ಲಮನ ವಚನಗಳ ಅಂಕಿತವಾಗಿದೆ. ಆಧ್ಯಾತ್ಮಿಕ ,ತತ್ವಶಾಸ್ತ್ರ, ಹಾಗು ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಮಾನತೆಯ ಸಮಾಜಕ್ಕೆ ಮಹತ್ವ ನೀಡಿದರು.
ಸಂಪ್ರದಾಯಗಳಿಗೆ ನಿಯಮಗಳಿಗೆ ಸವಾಲು ಹಾಕಿದ ಕ್ರಾಂತಿಕಾರಿ. ಲಿಂಗಾಯತ ಧಮ9ದ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸಿ ಅನುಭವ ಮಂಟಪದಲ್ಲಿ ಮೌಢ್ಯತೆಗಳನ್ನು ಮುರಿದು ಭಕ್ತಿಯ ಆರಾಧನೆಯ ಮಹತ್ವವನ್ನು ಸಾರಿದರು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವರಾಜ ಬಿರಾದಾರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಾಹಿತ್ಯಾಸಕ್ತಿ ಶಿಕ್ಷಕರನ್ನು ಭಾಗವಹಿಸುವಂತೆ ನಮ್ಮೆಲ್ಲರ ಜವಾಬ್ದಾರಿ .ಕನ್ನಡ ಸಾಹಿತ್ಯ ಪರಿಷತ್ತು ಆತ್ಯಂತ ಕ್ರೀಯಾಶೀಲವಾಗಿ ಕಾಯ9 ಮಾಡುತ್ತಿರುವದು ಹೆಮ್ಮೆಯ ವಿಷಯ ಎಂದರು
ಡಾ, ಸಿದ್ದಣ್ಣ ಉತ್ನಾಳ ಎಸ್ ಆರ್ ನಡಗಡ್ಡಿ ವಿಜಯಲಕ್ಷ್ಮೀ ಹಳಕಟ್ಟಿ ಎಚ್ ಜೆ ತೊನಶ್ಯಾಳ ರಫೀಕ ಪಣಿಬಂದ ಹಾಸಿಂಪೀರ ವಾಲಿಕಾರ ರಾಜೇಸಾಬ ಶಿವನಗುತ್ತಿ ವೇದಿಕೆಯಲ್ಲಿದ್ದರು ವಾಣಿ ಕುಲಕರ್ಣಿ ಪ್ರಾರ್ಥಿಸಿದರು. ಸುರೇಶ ಜತ್ತಿ ನಿರೂಪಿಸಿದರು. ಮಹಮ್ಮದಗೌಸ ಹವಾಲ್ದಾರ ಸ್ವಾಗತಿಸಿದರು. ಡಾ, ಆನಂದ ಕುಲಕರ್ಣಿ ವಂದಿಸಿದರು.
ಸುಖದೇವಿ ಅಲಬಾಳಮಠ ಸತ್ಯಣ್ಣ ಹಡಪದ ಎಸ್ ಎಲ್ ಇಂಗಳೇಶ್ವರ ಡಾ,ಸುರೇಶ ಕಾಗಲಕರ ಅನ್ನಪೂರ್ಣ ಬೆಳೆನ್ನವರ ಶಾಂತಾ ವಿಭೂತಿ ಎಚ್ ಎಲ್ ಹಳ್ಳೂರ ಧರ್ಮರಾಜ ನಾಟಿಕಾರ ಪೆÇ್ರ ಎಸ್ ಕೆ ಬಿರಾದಾರ ಎಸ್ ಎಮ್ ಡಾಂಗೆ ಅಹಮ್ಮದ ವಾಲಿಕಾರ ಸಾಯಿಬಣ್ಣ ಮಾದರ ರುಕ್ಮಿಣಿ ಅಗಸರ ಪವನ ಕುಲಕರ್ಣಿ ರೇಣುಕಾ ಜೈನಾಪೂರ ಸಿದ್ರಾಮಪ್ಪ ಜಂಗಮಶೆಟ್ಟಿ ಸುರೇಶ ಚವ್ವಾಣ ಬಿಸಮಿಲ್ಲಾ ಎಮ್. ಮುಂತಾದವರರು ಉಪಸ್ಥಿತರಿದ್ದರು