ಬಂಡ್ರಿ ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು :ಜು:28:  ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಶ್ರೀ ಬಸವ ವಿದ್ಯಾಮಂದಿರದಲ್ಲಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಮೊಹಮ್ಮದ್ ಷಫಿವುಲ್ಲಾ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ದೇಶ ಪ್ರೇಮ ಅಳವಡಿಸಿಕೊಳ್ಳಬೇಕಾಗಿದ್ದು, ಗುರುಹಿರಿಯರನ್ನ ಗೌರವದಿಂದ ಕಾಣಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಸ್ರದ್ದೆ ಸತತ ಪರಿಶ್ರಮದ ಅಧ್ಯಯನ ನಡೆಯಬೇಕಾಗಿದೆ. ಅಂದಾಗ ಮಾತ್ರ ನೀವು ಗುರಿಯನ್ನ ತಲುಪಬಹುದಾಗಿದೆ. ಉತ್ತಮ ಶಿಕ್ಷಣ ಮತ್ತು ಉತ್ತಮ ಗುಣಗಳನ್ನು ಹೊಂದಿ ನಾಡಿನ ಉತ್ತಮ ಪ್ರಜೆಗಳಾಗಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಶಾಲೆಯ ವತಿಯಿಂದ ನಿವೃತ್ತ ಯೋಧರಾದ ಚೆನ್ನಪ್ಪಗೌಡ, ಬಸವರಾಜ ಹಾಗೂ ಮೊಹಮ್ಮದ್ ಷಫಿವುಲ್ಲಾ ಅವರನ್ನು ಸನ್ಮಾನಿಸಲಾಯಿತು. ಹಲವಾರು ವಿದ್ಯರ್ಥಿಗಳು ಯೋಧರ ಉಡುಪನ್ನು ಧರಿಸಿ ಎಲ್ಲರ ಗಮನ ಸೆಳೆದರು. ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಗಂಗಣ್ಣ ಸಂಸ್ಥೆಯ ಅಧಕ್ಷ ಶ್ರೀಧರ ನಾಯ್ಕ ಆಡಳಿತಾಧಿಕಾರಿ ವಿಶ್ರಾಂತ ಪ್ರವೀಣ ಖಜಾಂಚಿ ಪ್ರಶಾಂತ ನಾಯ್ಕ ಮುಖ್ಯ ಶಿಕ್ಷಕ ಜಿ. ರಮೇಶ್ ಅಲ್ಲದೇ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.