ಬಂಡೀಪುರ ಸಿಎಫ್‍ಓ ವಿರುದ್ಧ ಎಂಎಂಹಿಲ್ಸ್, ಕಾವೇರಿ ಡಿಸಿಎಫ್ ಕಿರುಕುಳ ಆರೋಪ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.05:- ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಗಳು ಮತ್ತು ಬಂಡೀಪುರ ಸಿಎಫ್‍ಓ ವಿರುದ್ಧರೈತರು ಪ್ರತ್ಯೇಕ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದಘಟನೆ ನಡೆಯಿತು.
ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಸಂತೋμïಕುಮಾರ್ ಹಾಗೂ ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ನಂದೀಶ್ ಅವರು ರೈತರಿಗೆ ಕಿರುಕುಳ ಕೊಡುತ್ತಿದ್ದಾರೆಂದು ಚಾಮರಾಜನಗರದಲ್ಲಿ ರಾಜ್ಯ ರೈತ ಸಂಘದಜಿಲ್ಲಾ ಪದಾಧಿಕಾರಿಗಳು ರಸ್ತೆತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಹಸುಗಳನ್ನು ಕಾಡಿಗೆ ಮೇಯಲು ಬಿಟ್ಟರೇ ಪಟಾಕಿ ಸಿಡಿಸಿ ಅವುಗಳನ್ನು ಓಡಿಸುತ್ತಿದ್ದಾರೆ, ದನದ ದೊಡ್ಡಿಗಳಿಗೆ ರಾತ್ರೋರಾತ್ರಿ ಬೆಂಕಿ ಇಟ್ಟು ಭಸ್ಮ ಮಾಡಿದ್ದಾರೆ ಎಂದು ಹತ್ತಾರು ಗ್ರಾಮಗಳ ರೈತರು ಗಂಭೀರ ಆರೋಪ ಮಾಡಿದರು.
ರೈತರು ಇದ್ದರೇ ಕಾಡು, ಗೋವುಗಳ ರಕ್ಷಣೆ ಮಾಡುವವರು ರೈತರು ಆದರೆ ಡಿಸಿಎಫ್‍ಗಳು ನಿತ್ಯ ಸುಖಾಸುಮ್ಮನೆ ಕಿರುಕುಳ ಕೊಡುತ್ತಿದ್ದಾರೆ, ಕುಡಿಯುವ ನೀರು, ಮೇವಿಗೆ ಸಮಸ್ಯೆ ಉಂಟಾಗುತ್ತಿದೆ, ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‍ಐಆರ್‍ದಾಖಲು ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಒಂದು ವಾರದೊಳಗೆ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು, ರೈತರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಭೆ ನಡೆಸಬೇಕು, ಕಾಡಿಗೆ ಜಾನುವಾರುಗಳನ್ನು ಬಿಡಲು ಅವಕಾಶ ಕೊಡಬೇಕುಇಲ್ಲದಿದ್ದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಅನಿರ್ಧಿμÁ್ಟವಧಿಧರಣಿ ನಡೆಸಲಾಗುವುದು ಎಂದು ರೈತರು ಎಚ್ಚರಿಸಿ ಡಿಸಿಗೆ ಮನವಿ ಪತ್ರಕೊಟ್ಟಿದ್ದಾರೆ.
ಬಂಡೀಪುರ ಸಿಎಫ್‍ಓ ವರ್ಗಾವಣೆಗೆ ಆಗ್ರಹ: ಬಂಡೀಪುರದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಸಿರುವ ಹುಲಿ ಯೋಜನೆ ನಿರ್ದೇಶಕ ರಮೇಶ ಕುಮಾರ್ ಅವರನ್ನು ವರ್ಗಾವಣೆಗೆ ಮಾಡುವಂತೆ ಒತ್ತಾಯಿಸಿ ರೈತ ಸಂಘಟನೆ ಪದಾಧಿಕಾರಿಗಳು ಬಂಡೀಪುರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನಾ ನಿರ್ದೇಶಕರ ಕಚೇರಿ ಮುಂದೆ ಸಮಾವೇಶಗೊಂಡರೈತ ಸಂಘಟನೆ ಪದಾಧಿಕಾರಿಗಳು, ಹುಲಿ ಯೋಜನಾ ನಿರ್ದೇಶಕರ ವರ್ಗಾವಣೆಗೆ ಒತ್ತಾಯಿಸುವ ಫಲಕ ಹಿಡಿದು, ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ರೈತ ಸಂಘಟನೆ ಜಿಲ್ಲಾಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಸಿಎಫ್ ರಮೇಶಕುಮಾರ್ ಟೆಂಡರ್ ಕರೆಯದೇ ಹಾಗೂ ಕಾಮಗಾರಿ ನಡೆಸಿದೆ ಸುಳ್ಳು ಬಿಲ್ ಮಾಡಿಕೊಂಡಿದ್ದಾರೆ. ಇದರಿಂದ ಹುಲಿ ಯೋಜನೆಯ ಅಭಿವೃದ್ಧಿ ಮತ್ತು ಏಳಿಗೆ ಸಲುವಾಗಿ ಕೇಂದ್ರ ಸರ್ಕಾರ ನೀಡಿದ ಅನುದಾನ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಬಂಡೀಪುರದಲ್ಲಿ ನಡೆದಿರುವ ಹಣದುರುಪಯೋಗದ ಬಗ್ಗೆ ದೂರು ನೀಡಲಾಗಿತ್ತು. ಈ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳ ತಂಡ ತನಿಖೆ ಸಲುವಾಗಿ ಬಂಡೀಪುರಕ್ಕೆ ಆಗಮಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ವರದಿಯನ್ನು ಗೌಪ್ಯವಾಗಿ ಇಡುವ ಮೂಲಕ ಇವರನ್ನುರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ವರ್ಗಾವಣೆ ಮಾಡುವ ಭರವಸೆ ನೀಡಿತ್ತು. ಆದರೆ ಅದು ಜಾರಿಯಾಗಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರಿಗೆ ದೂರು ನೀಡಲಾಗಿದೆ. ಶಾಸಕ ಗಣೇಶ್ ಪ್ರಸಾದ್‍ರವರು ಕೂಡ ವರ್ಗಾವಣೆ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ನಮ್ಮ ಬೇಡಿಕೆ ಈಡೇರಬೇಕು ಎಂದು ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ವರ್ಗಾವಣೆ ಆಗದಿದ್ದರೆ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.