ಬಂಡೀಪುರ ಅರಣ್ಯದಲ್ಲಿ ಮೋದಿ ಸಫಾರಿ

ಚಾಮರಾಜನಗರ,ಏ.೯- ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ತೆರೆದ ಜೀಪ್‌ನಲ್ಲಿ ೨೨ ಕಿಮೀ ಕ್ರಮಿಸಿ ೨ ತಾಸುಗಳ ಕಾಲ ವನ್ಯಜೀವಿ ಸಫಾರಿ ನಡೆಸಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನಿನ್ನೆ ರಾಜ್ಯಕ್ಕೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.
ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೇವಲ ಅಧಿಕಾರಿಗಳು ಮಾತ್ರ ಪ್ರಧಾನಿ ಜೊತೆಗಿದ್ದರು. ಪ್ರಧಾನಿ ಅವರು ಸಾಗುತ್ತಿದ್ದ ಕಾರಿನಲ್ಲೇ ಬಂಡೀಪುರದ ಸುತ್ತಮುತ್ತಲ ಗ್ರಾಮಸ್ಥರು ಮೋದಿಯವರನ್ನು ಕಣ್ತುಂಬಿಕೊಳ್ಳಬೇಕಾಯಿತು. ಆದರೆ, ಮೋದಿಯವರು ಬಂಡೀಪುರಕ್ಕೆ ಭೇಟಿ ನೀಡಿರುವುದು ಈ ಭಾಗದ ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮೋದಿ ಸಂಚರಿಸಿ ಗಮನ ಸೆಳೆದರು. ಸಫಾರಿ ವೇಳೆ ಹುಲಿ ಸೇರಿ ಇತರೆ ಪ್ರಾಣಿಗಳನ್ನು ಮೋದಿ ವೀಕ್ಷಿಸಿದರು. ಒಟ್ಟು ೯ ವಾಹನಗಳು ಪ್ರಧಾನಿ ಅವರ ಜೊತೆಗಿದ್ದು, ಸಫಾರಿ ಬಳಿಕ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರಕ್ಕೆ ಭೇಟಿ ನೀಡಿದರು.
ಕಳೆದ ರಾತ್ರಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ೭.೩೦ರ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬಂದಿಳಿದರು.
ಅರಣ್ಯ ಇಲಾಖೆ ಧಿರಿಸಿನಲ್ಲಿ ಮಿಂಚಿದ ಮೋದಿ, ವಿಶೇಷ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಸಮವಸ್ತ್ರ ಹೋಲುವ ಟೀ ಶರ್ಟ್ ಅನ್ನು ಮೋದಿ ಧರಿಸುವ ಮೂಲಕ ಗಮನಸೆಳೆದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದರು. ಮೈಸೂರಿನಲ್ಲಿ ಹುಲಿ ಗಣತಿ ಅಂಕಿ-ಅಂಶ ಬಿಡುಗಡೆ ಮಾಡಲಿರುವ ಮೋದಿ, ಈ ಬಾರಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ೧ ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳ ಟಾಪ್ ರ್ಯಾಂಕಿನಲ್ಲಿ ಬಂಡೀಪುರ ನಂ ೧ ಸ್ಥಾನ ಗಳಿಸುವ ನಿರೀಕ್ಷೆ ಇದೆ.
ಹೆದ್ದಾರಿ ಬಂದ್.. ಬಂಡೀಪುರಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಜನರ ಪ್ರವೇಶವನ್ನು ಗುಂಡ್ಲುಪೇಟೆಯ ಊಟಿ ಗೇಟ್‌ನಲ್ಲೇ ತಡೆಯಲಾಯಿತು. ಮೋದಿ ಅವರು ಗುಂಡ್ಲುಪೇಟೆಗೆ ಬಂದರೂ ಅವರನ್ನು ಕಾಣುವ ಆಸೆ ಜನರಿಗೆ ಈ ಬಾರಿ ಈಡೇರುತ್ತಿಲ್ಲ.


ಸುವರ್ಣ ಸಂಭ್ರಮದಲ್ಲಿ ಹುಲಿ ಸಂರಕ್ಷಿತ ಬಂಡೀಪುರ..
ಅವಸಾನದತ್ತ ಸಾಗಿದ್ದ ಹುಲಿ ಸಂತತಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ೧೯೭೩ ರಲ್ಲಿ ಹುಲಿ ರಕ್ಷಿತಾರಣ್ಯಗಳನ್ನು ಘೋಷಣೆ ಮಾಡಿ ಪ್ರಾಜೆಕ್ಟ್ ಟೈಗರ್ ಯೋಜನೆ ಆರಂಭಿಸಿದ್ದರು. ಅಂದು ಆರಂಭಗೊಂಡ ಹುಲಿ ರಕ್ಷಿತ.
ಅಭಿವೃದ್ಧಿ ಮತ್ತು ವನ್ಯಜೀವಿ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದರೊಂದಿಗೆ ಆವಾಸಸ್ಥಾನಗಳ ವೈಜ್ಞಾನಿಕವಾಗಿ ಲೆಕ್ಕಾಚಾರದ ಸಾಗಿಸುವ ಸಾಮರ್ಥ್ಯದ ಆಧಾರದ ಮೇಲೆ ಕಾರ್ಯಸಾಧ್ಯವಾದ ಹುಲಿ ಜನಸಂಖ್ಯೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಭಾರತ ಹೊಂದಿದೆ ಎಂದು ಏಪ್ರಿಲ್ ೧ ರಂದು ೫೦ ವರ್ಷಗಳನ್ನು ಪೂರೈಸಿದ ’ಪ್ರಾಜೆಕ್ಟ್ ಟೈಗರ್’ ಮುಖ್ಯಸ್ಥರು ತಿಳಿಸಿದರು.
ಉತ್ತಮ ತಂತ್ರಜ್ಞಾನ ಮತ್ತು ಸಂರಕ್ಷಣಾ ಕಾರ್ಯವಿಧಾನಗಳಿಂದಾಗಿ ಹುಲಿ ಬೇಟೆಯಾಡುವಿಕೆಯು ಗಣನೀಯವಾಗಿ ಕಡಿಮೆಯಾಗಿದೆಯಾದರೂ, ಆವಾಸಸ್ಥಾನದ ವಿಘಟನೆ ಮತ್ತು ಅವನತಿಯ ಜೊತೆಗೆ ದೊಡ್ಡ ಬೆಕ್ಕುಗಳಿಗೆ ಇದು ಇನ್ನೂ ದೊಡ್ಡ ಬೆದರಿಕೆಯಾಗಿದೆ ಎಂದು ಹೆಚ್ಚುವರಿ ಅರಣ್ಯ ಮಹಾನಿರ್ದೇಶಕ ಎಸ್‌ಪಿ ಯಾದವ್ ಹೇಳಿದ್ದಾರೆ.
ಪ್ರಸ್ತುತ, ೭೫,೦೦೦ ಚದರ ಕಿ.ಮೀ. (ದೇಶದ ಭೌಗೋಳಿಕ ಪ್ರದೇಶದ ಸರಿಸುಮಾರು ೨.೪ -ಪ್ರತಿಶತ) ಕ್ಕಿಂತ ಹೆಚ್ಚು ವ್ಯಾಪಿಸಿರುವ ೫೩ ಹುಲಿ ಸಂರಕ್ಷಿತ ಪ್ರದೇಶಗಳು ಬಂಡೀಪುರದಲ್ಲಿವೆ.
ದೇಶ ಸುಮಾರು ೩,೦೦೦ ಹುಲಿಗಳನ್ನು ಹೊಂದಿದೆ, ಜಾಗತಿಕ ಕಾಡು ಹುಲಿ ಜನಸಂಖ್ಯೆಯ ಶೇಕಡಾ ೭೦ ಕ್ಕಿಂತ ಹೆಚ್ಚು, ಮತ್ತು ಸಂಖ್ಯೆಯು ವರ್ಷಕ್ಕೆ ಆರು ಶೇಕಡಾ ದರದಲ್ಲಿ ಹೆಚ್ಚುತ್ತಿದೆ.

ಮಾವುತರೊಂದಿಗೆ ಸಂವಾದ:
ಹುಲಿ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿರುವ ಮುಂಚೂಣಿಯ ಕ್ಷೇತ್ರ ಸಿಬ್ಬಂದಿ ಮತ್ತು ಸ್ವಸಹಾಯ ಗುಂಪುಗಳೊಂದಿಗೆ ಸಂವಾದ ನಡೆಸಿದರು ಚಾಮರಾಜನಗರ ಜಿಲ್ಲೆಯ ನೆರೆಯ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.
ಹುಲಿ ಮತ್ತು ಆನೆ ಶಿಬಿರದ ಮಾವುತರು ಮತ್ತು ಕಾವಾಡಿಗಳೊಂದಿಗೆ ಸಂವಾದ ನಡೆಸಿ ಅವರ ಕಷ್ಟ ನೋವು ನಲವುಗಳಿಗೆ ಧ್ವನಿಯಾದರು.