ಬಂಡೀಪುರದಲ್ಲಿ ಹುಲಿ ಸಾವು

ಚಾಮರಾಜನಗರ, ಜ.10:- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಮೃತಪಟ್ಟಿರುತ್ತದೆ.
ಹೆಡಿಯಾಲ ಉಪ-ವಿಭಾಗದ, ಹೆಡಿಯಾಲ ವಲಯದಆಂಚಿನಲ್ಲಿರುವ ಸರಗೂರು ಪ್ರಾದೇಶಿಕ ವಲಯ ವ್ಯಾಪ್ತಿಯ ಹೆಡಿಯಾಲ ಶಾಖೆಗೆ ಸೇರಿದ ಹಾದನೂರುಗ್ರಾಮದ ಸರ್ವೇ ನರ್ 86ರಲ್ಲಿ ಹುಲಿಯೊಂದು ಮೃತಪಟ್ಟಿದ್ದು, ದಿನಾಂಕ: 09-01-2022 ರಂದು ಬೆಳಿಗ್ಗೆ ಸದರಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳವನ್ನು ಪರಿಶೀಲಿಸಿ ಡಾ|| ರಮೇಶ್‍ಕುಮಾರ್ ಪಿ, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ಕ್ಷೇತ್ರ ನಿರ್ದೇಶಕರು, ಬಂಡೀಪುರ, ಈ ಕೆಳ ಸಹಿದಾರರು, ಶ್ರೀ ರಘುರಾಂ, ಎನ್.ಟಿ.ಸಿ.ಎ ಪ್ರತಿನಿಧಿ, ಕು. ಕೃತಿಕ ಆಲನಹಳ್ಳಿ, ಎಲ್ಫ್ ವಾರ್ಡನ್, ಡಾ|| ವಾಸೀಂ ಮಿರ್ಜಾ, ಇಲಾಖಾ ಪಶು ವೈಧ್ಯಾಧಿಕಾರಿಗಳು, ಬಂಡೀಪುರ, ಶ್ರೀ ವಿ. ಬಂಗಾರ, ಗ್ರಾಮ ಪಂಚಾಯಿತಿ ಸದಸ್ಯರು, ವಡೆಯನಪುರ ಮತ್ತು ವಲಯಅರಣ್ಯಾಧಿಕಾರಿ, ಹೆಡಿಯಾಲ ವಲಯ ಮತ್ತು ಸಿಬ್ಬಂದಿಗಳ ಸಮಕ್ಷಮರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಎಸ್.ಓ.ಪಿ. ಪ್ರಕಾರ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ವೈಧ್ಯಾಧಿಕಾರಿಗಳು ಮೃತಹುಲಿ ಮರಿಯನ್ನು ಪರಿಶೀಲಿಸಿದ್ದಾರೆ,
ಮೇಲ್ನೋಟಕ್ಕೆ ಹುಲಿಯು ಕಾದಾಟದಿಂದ ಮೃತ ಪಟ್ಟಿರಬಹುದೆಂದು ಅಂದಾಜಿಸಿ, ನಂತರ, ಮೃತಹುಲಿಯದೇಹದ ತುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ, ಮೈಸೂರುಇಲ್ಲಿಗೆ ಸ್ಯಾಂಪಲ್‍ಗಳನ್ನು ಕಳುಹಿಸಲು ತೀರ್ಮಾನಿಸಿ, ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ, ಮೃತ ಹುಲಿಯನ್ನು ಸುಡಲಾಯಿತು ಎಂದು ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.