ಬಂಡೀಪುರದಲ್ಲಿ ತನ್ನ ಮರಿ ರಕ್ಷಣೆಗಾಗಿ ಹುಲಿಯನ್ನು ಅಟ್ಟಾಡಿಸಿದ ಆನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.08- ಕಾಡಿನ ರಾಜ ಎಂದೇ ಕರೆಯಿಸಿಕೊಳ್ಳುವ ಹುಲಿಯನ್ನು ಆನೆಯೊಂದು ಅಟ್ಟಾಡಿಸಿ ಓಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ನಡೆದಿದ್ದು ಸಫಾರಿಗರು ದೃಶ್ಯಕಂಡು ರೋಮಾಂಚಿತರಾಗಿದ್ದಾರೆ.
ಸಂಜೆ ಸಫಾರಿಯಲ್ಲಿ ಈ ಘಟನೆ ನಡೆದಿದೆ. ಆನೆಯೊಂದು ತನ್ನ ಮರಿಜೊತೆ ತೆರಳುತ್ತಿದ್ದಾಗ ಎದುರು ಬಂದ ಹುಲಿರಾಯ ಮರಿ ಮೇಲೆ ಹೊಂಚು ಹಾಕಿದೆ. ಕೂಡಲೇ ಎಚ್ಚೆತ್ತ ಆನೆ ಹುಲಿಯನ್ನು ಅಟ್ಟಾಡಿಸಿ ಪೇರಿ ಕೀಳುವಂತೆ ಮಾಡಿದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ಲಾಗಿದೆ.