
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.08- ಪ್ರವಾಸಿಗರ ನಡುವೆಜಟಾಪಟಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲೇ ಪೆÇಲೀಸರು ಭಾನುವಾರ ಸಂಜೆ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಕೇರಳ ಮೂಲದ ಅರ್ಜುನ್ ಎಂಬುವರಿಗೆ ಬೆಂಗಳೂರು ಮೂಲದ ನಾಲ್ವರು ಯುವಕರು ಅಡ್ಡಹಾಕಿ ಗಲಾಟೆ ಮಾಡಿದ್ದ ವಿಡಿಯೋವನ್ನು ಥರ್ಡ್ ಐ ಎಂಬ ಹೆಸರಿನ ಟ್ವಿಟರ್ ಖಾತೆದಾರರೊಬ್ಬರು ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಟ್ಯಾಗ್ ಮಾಡಿ ಹಂಚಿಕೊಂಡಿದ್ದರು.
ಟ್ವಿಟ್ ಗಮನಿಸಿದ ಎಡಿಜಿಪಿ ಅಲೋಕ್ ಕುಮಾರ್ ಚಾಮರಾಜನಗರ ಪೆÇಲೀಸ್ ಸಿಬ್ಬಂದಿ ಜೊತೆ ಮಾತನಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ, ಗುಂಡ್ಲುಪೇಟೆ ಪೆÇಲೀಸ್‍ಠಾಣೆಯಲ್ಲಿ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣದಾಖಲಾಗಿದೆ.
ದೂರಿನಲ್ಲಿ ಏನಿದೆ : ಕಳೆದ ಜೂನ್ 17 ರಂದು ಬೆಂಗಳೂರಿನಿಂದ ಕೇರಳಕ್ಕೆ ತೆರಳುವಾಗ ಯುವಕರ ಜೀಪಿಗೆ ಓವರ್ ಟೇಕ್ ಮಾಡಲು ಸ್ಥಳಾವಕಾಶ ಸಿಗದ ಹಿನ್ನೆಲೆಯಲ್ಲಿ ಏಕಾಏಕಿ ನನ್ನಕಾರನ್ನು ಅಡ್ಡಹಾಕಿ ಹೊಡೆದಿದ್ದಾರೆ. ಜೊತೆಗೆ, ಡ್ಯಾಶ್ ಬೋರ್ಡ್ ಕ್ಯಾಮರಾ ಒಡೆದು ಹಾಕಲು ಯತ್ನಿಸಿದ್ದಾರೆ. ಕೆಲಸದ ಒತ್ತಡ ಇದ್ದಿದ್ದರಿಂದ ತಡವಾಗಿ ದೂರು ಕೊಡುತ್ತಿರುವುದಾಗಿ ಅರ್ಜುನ್ ಹೇಳಿದ್ದಾರೆ.
ಸುರೇಶ್ ಕುಮಾರ್ ಬೇಸರ: ಇನ್ನು, ಜಟಾಪಟಿ ವಿಡಿಯೋವನ್ನು ಮಾಜಿ ಸಚಿವ ಸುರೇಶ್ ಕುಮಾರ್ ಹಂಚಿಕೊಂಡಿದ್ದು, ಈ ರೀತಿಯ ಘಟನೆಗಳಿಂದ ಪ್ರಾಣಿಗಳಿಗೂ ತೊಂದರೆಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‍ನಲ್ಲಿ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ :ಟ್ವಿಟರ್‍ನಲ್ಲಿಥರ್ಡ್ ಐ ಖಾತೆದಾರ ವಿಡಿಯೋ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಮಿಶ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಂದೇ ದೃಷ್ಟಿಕೋನದಿಂದ ತನಿಖೆ ನಡೆಸದೆ ಯುವಕರು ಯಾಕೆ ಆ ರೀತಿ ಮಾಡಿದರು? ಎಂಬುದನ್ನೂ ವಿಚಾರಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.