ಬಂಡಾಯ ಶಮನ : ಬಂಗಾರು ಹನುಮಂತು ನಾಮಪತ್ರ ವಾಪಸ್ಸು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.24 :- ಬಿಜೆಪಿ ಟಿಕೇಟ್ ಕೈ ತಪ್ಪಿದ್ದರಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಂಗಾರು ಹನುಮಂತು ರಾಜ್ಯದ ವರಿಷ್ಠರ ಮಾತಿಗೆ ಕಟ್ಟುಬಿದ್ದು  ಬಂಡಾಯ ಶಮನಗೊಂಡಿದ್ದರಿಂದ  ಪಕ್ಷೇತರ ಅಭ್ಯರ್ಥಿ  ನಾಮಪತ್ರ ಸಲ್ಲಿಕೆಯನ್ನು ವಾಪಸ್ಸು ಪಡೆದುಕೊಂಡಿದ್ದಾರೆ.
ಕೂಡ್ಲಿಗಿ ಕ್ಷೇತ್ರಕ್ಕೆ ಈ ಭಾರಿ ಬಿಜೆಪಿ  ಪ್ರಬಲ ಆಕಾಂಕ್ಷಿಯಾಗಿ ಕ್ಷೇತ್ರವಾರು ಸುತ್ತಾಡಿದ್ದರು ಆದರೆ ಬಿಜೆಪಿ ಟಿಕೇಟ್ ಹಂಚಿಕೆಯಲ್ಲಿ ಕಾಂಗ್ರೆಸ್ ನಿಂದ ವಲಸೆ ಬಂದು ಬಿಜೆಪಿ ಸೇರ್ಪಡೆಯಾಗಿದ್ದ ಲೋಕೇಶ ವಿ ನಾಯಕ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ತಮ್ಮ ಬೆಂಬಲಿಗರ ಜೊತೆ ಸೇರಿ ಚರ್ಚಿಸಿ ಬಂಡಾಯವೆದ್ದಿದ್ದ ಬಂಗಾರು ಹನುಮಂತು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಕಳೆದೆರಡು ದಿನದಿಂದ ಪಕ್ಷದ ಕೆಲ ವರಿಷ್ಠರು ಬಂಡಾಯವೆದ್ದ ಬಂಗಾರು ಹನುಮಂತು ಅವರನ್ನು ಕರೆಯಿಸಿ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿ ಬಂಡಾಯ ಶಮನ ಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಕೂಡ್ಲಿಗಿ ಚುನಾವಣಾಧಿಕಾರಿಗಳ ಬಳಿ ಆಗಮಿಸಿ ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದನ್ನು ವಾಪಸ್ಸು ಪಡೆದುಕೊಂಡಿದ್ದಾರೆ ಹಾಗೂ ಈತನ ಬೆಂಬಲಿಗರಾದ ರಾಘವೇಂದ್ರ ಗುರಿಕಾರ ಸಹ ಪಕ್ಷೇತರ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು ಅವರು ಸಹ ಇಂದು ಬಂಗಾರು ಹನುಮಂತು ಜೊತೆ ಆಗಮಿಸಿ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರೆಂದು ತಿಳಿದಿದೆ.