ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಏ12: ಭಾರತೀಯ ಜನತಾ ಪಕ್ಷ ನೂತನ ವಿಜಯನಗರ ಜಿಲ್ಲೆಯ ವಿಜಯನಗರ ಕ್ಷೇತದ ಪ್ರಬಲ ಆಕಾಂಕ್ಷಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿರುವ ರಾಣಿ ಸಂಯುಕ್ತಾ ಬಿಜೆಪಿಯ ಬಂಡಾಯದ ಭಾವುಟ ಹಿಡಿಯಲು ಸಿದ್ಧವಾದರಾ ಎನ್ನುವ ಅನುಮಾನ ಕ್ಷೇತ್ರದಲ್ಲಿ ಆರಂಭವಾಗಿದೆ.
ಹೌದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ದಿಂದ ಹಿಡಿದು ಇಂದಿನ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯೆಯಾಗುವರೆಗೂ ಬಿಜೆಪಿನಲ್ಲಿಯೇ ಗುರಿತಿಸಿಕೊಂಡಿದ್ದ ರಾಣಿ ಸಂಯುಕ್ತ ಈ ಬಾರಿ ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದರೂ ಒಂದು ಹಂತದಲ್ಲಿ ಕಾರ್ಯಕರ್ತರು ಬಿಜೆಪಿ ಟಿಕೆಟ್ ಸಿಕ್ಕಿಯೇಬಿಟ್ಟಿತು ಎಂದು ಭಾಣ ಬಿರುಸುಗಳನ್ನು ಸಿಡಿಸುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು ಈ ಮಧ್ಯ ಮಂಗಳವಾರ ರಾತ್ರಿ ಪ್ರಕಟವಾದ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಸಿಧಾರ್ಥಸಿಂಗ್ ಹೆಸರು ಪ್ರಕಟವಾಗುತ್ತಿದ್ದಂತೆಯೇ ಶಾಖ್ ಆದ ರಾಣಿ ಸಂಯುಕ್ತ ತೀವೃ ರಾಜಕೀಯ ತಿರುವುಗಳತ್ತ ಮುಖಮಾಡಿರುವ ಎಲ್ಲಾ ಲಕ್ಷಣಗಳು ಕಾಣತೊಡಗಿದೆ.
ಸಚಿವ ಆನಂದ್‍ಸಿಂಗ್‍ಗೆ ಟಿಕೆಟ್ ಹಂಚಿಕೆಯಾಗಿದ್ದರೆ ಸುಮ್ಮನಿರುತ್ತಿದ್ದರೋ ಏನು ಗೊತ್ತಿಲ್ಲಾ ಆದರೆ ಮಗ ಸಿದ್ಧಾರ್ಥ ಸಿಂಗ್‍ಗೆ ಎಂಬ ಘೋಷಣೆ, “ಮಗನಿಗಾಗಿ ವೇದಿಕೆ ಬಿಟ್ಟುಕೊಟ್ಟ ವಿಜಯನಗರದ ಶಾಸಕ ಹಾಗೂ ಸಚಿವ ಆನಂದಸಿಂಗ್ ಎನ್ನುತ್ತಿದ್ದಂತೆ” ಬದಲಾವಣೆಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದ್ದು,
ರಾತ್ರಿಯೇ ಕಾಂಗ್ರೆಸ್ ಮುಖಂಡರಾದ ಸಿದ್ಧರಾಮಯ್ಯರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂಬ ವದಂತಿ ಹಾಗೂ ಖುದ್ದು ಸಂಬಂಧಿಗಳಾದ ಕಾಂಗ್ರೆಸ್ ಮುಖಂಡ ಸೂರ್ಯನಾರಾಯಣರೆಡ್ಡಿ ಹಾಗೂ ಅಳಿಯ(ಮಗಳ ಗಂಡ) ಯುವ ಮುಖಂಡ ಭರತ್‍ರೆಡ್ಡಿಯವರ ಮೂಲಕ ಕಾಂಗ್ರೆಸ್ ನಾಯಕರೊಂದಿಗೆ ಚೆರ್ಚಿಸಿದ್ದಾರೆ ಎಂಬವದಂತಿಗೂ ಪುಷ್ಠಿ ನೀಡುವಂತೆ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿಶಾಸಕ ಹೆಚ್.ಆರ್.ಗವಿಯಪ್ಪ ಮನೆ ಭೇಟಿ ನೀಡಿ ಗಂಟೆಗಳ ಕಾಲ ಮಾತುಕತೆ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಬಿಜೆಪಿ ಭಂಡಾಯವಂತೂ ಪಕ್ಕಾ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವರೋ, ಕಾಂಗ್ರೆಸ್ ಸೇರಿ ತಮ್ಮ ಅಸಮಾಧಾನ ತೋಡಿಕೊಳ್ಳುವುರೋ ಕಾದನೋಡಬೇಕು ಎನ್ನುತ್ತಿದೆ ರಾಣಿ ಸಂಯುಕ್ತರವರ ಆಪ್ತವಲಯ.
ಮತ್ತೊಂದಡೆ ಅನೇಕ ಮುಂಚೋಣಿ ನಾಯಕರು ಸಹ ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರೂ ಎನ್ನುವುದು ಬಂಡಾಯಕ್ಕೆ ಕಾರಣವಾಗಿದೆ. ಇಂದು ಸಂಜೆಯೊಳಗೆ ಸ್ಪಷ್ಟವಾಗಲಿರುವ ವಿಷಯ ಬಿಜೆಪಿ ವಲಯದಲ್ಲಿಂತೂ ಸಂಚಲನ ಸೃಷ್ಠಿಸಿದೆ ಎನ್ನುವುದಂತು ಸತ್ಯ.