ಬಂಡವಾಳ ಶಾಹಿಗಳ ಸ್ವೀಸ್ ಬ್ಯಾಂಕ್ ಹಣ ಭಾರತಕ್ಕೆ ಬಂತೆ? ಸಚಿವ ದರ್ಶನಾಪುರ ಪ್ರಶ್ನೆ

ಶಹಾಪುರ:ಸೆ.22:ಆರೇಳು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಅಲ್ಲಗಳೆದ ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅಧಿಕಾರದ ಲಾಲಾಸೆಗಳಿಗಾಗಿ ದೇಶದ ಮತ ಭಾಂದವರ ಮನೆಸೆಳೆದು. ಹೊರ ರಾಷ್ಟ್ರಗಳಲ್ಲಿ ಬಂಡವಾಳಶಾಹಿಗಳು ಕೂಡಿಟ್ಟ ಸ್ವೀಸ್ ಬ್ಯಾಂಕ್, ಸ್ವೀಡ್ಜರ್ ಲ್ಯಾಂಡಗಳಲ್ಲಿನ ಬ್ಯಾಂಕ್ ಹಣ ಮರಳಿ ಭಾರತಕ್ಕೆ ತರುತ್ತೇವೆ ಎಂದು ಉಸಿ ಭರವಸೆ ನೀಡಿದ್ದು, ಹಣ ಭಾರತದ ಮಡಿಲು ಸೇರಿತೆ? ಎಂದು ಸಣ್ಣ ಕೈಗಾರಿಕೆ ಸಾರ್ವಜನಿಕ ಉಧ್ಯಮಗಳ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರವರು ಬಿಜೆಪಿ ಪಕ್ಷಕ್ಕೆ ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದರು. ಅವರು ಶಹಾಪುರ ಪ್ರಥಮ ದರ್ಜೆ ಕಾಲೆಜಿನ ಅವರಣದಲ್ಲಿ£,À ಡಾ,ಬಿ,ಆರ್,ಅಂಬೇಡ್ಕರ ಸಭಾಂಗಣದಲ್ಲಿ ಕ,ದ,ಸಂ, ಭೀಮವಾದ ಸಂಘಟನೆಯಿಂದ ಆಯೋಜಿಸಲಾದ, ಸಚಿವ ದರ್ಶನಾಪುರವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ, ಗೌರವ ಸ್ವೀಕರಿಸಿ ಮಾತನಾಡಿದರು. ಮುಂದುವರೆದು ಮಾತನಾÀಡಿದ ಸಚಿವರು.ಧರ್ಮ ದಂಗಲಗಳ ಮಧ್ಯ ವಿಷಮದ ವಾತವರಣಗಳನ್ನು ನಿರ್ಮಿಸಿ, ದೇಶದಲ್ಲಿ ಕೊಮುಗಲಭೆಗಳಿಗೆ ಸೃಷ್ಟಿಕರ್ತರಾಗಿದ್ದಾರೆ. ಜಾತಿ ಮತಗಳ ಸಂಕೊಲೆಯಲ್ಲಿ ದೇಶದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡಿದ್ದು ಕೆಂದ್ರ ಸರ್ಕಾರದ ಸಾಧನೆಗಳಾಗಿವೆ, ಎಂದ ದರ್ಶನಾಪುರವರು 9 ವರ್ಷಗಳ ಅಧಿಕಾರದ ಅವಧಿಯಲ್ಲಿ ಪ್ರಧಾನಿ ಮೋದಿಯವರು ಭಾಷಣಗಳಿಗೆ ಸೀಮಿತಗೊಂಡು, ಆರ್ಥಿಕವಾಗಿ ದೇಶವನ್ನು ದುಳ್ಳುರಿಗೆ ತಳ್ಳಿದ್ದಾರೆ ಎಂದು ಅವರು ತಿಳಿಸಿದರು.ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸದೃಡ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಜಾರಿಗೊಳಿಸವ ಮುಖಾಂತರ, ಕಾಂಗ್ರೆಸ್ ಸಿ,ಎಮ್, ಸಿದ್ರಾಮಯ್ಯನವರ ಸರ್ಕಾರ ನುಡಿದಂತೆ ನಡೆದುಕೊಂಡಿದೆ, ಮಹಿಳೆಗಾಗಿ ಶಕ್ತಿ ಯೋಜನೆ, ಮನೆ ಒಡತಿಗೆ 2 ಸಾವಿರ, ರೂ, ಅನ್ನ ಭಾಗ್ಯ ಹೀಗೆ ಐದು ಭಾಗ್ಯಗಳನ್ನು ಸಮಪರ್ಕವಾಗಿ ಜಾರಿ ಮಾಡುತ್ತಿಲ್ಲಿದ್ದೇವೆ. ಎಂದು ತಿಳಿಸಿದ ದರ್ಶನಾಪುರವರು, ಕೆಕೆಆರ್,ಡಿ,ಬಿ ಅನುಧಾನದಲ್ಲಿ 7 ಜಿಲ್ಲೆಗಳ ಅಭಿವೃದ್ದಿ ಹೊಂದುತ್ತಿವೆ, ಕಲಂ, 371 ಜೆ, ಕಲಂ, ಜಾರಿಗೊಳಿಸವದರಲ್ಲಿ ಅವಿರತವಾಗಿ ಶ್ರಮಿಸಿದ, ರಾಷ್ಟ್ರೀಯ ಕೆಪಿಸಿಸಿ ಅಧ್ಯಕ್ಷರಾದ ಡಾ, ಮಲ್ಲಿಕಾಜುನ ಖರ್ಗೆಜಿಯವರ ಕೊಡುಗೆ ಅಪಾರವಾದದ್ದಾಗಿದೆ. ಅವರ ಈ ಸಾಧನೆಗಳಿಂದ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ 7 ಜಿಲ್ಲೆಯ ಉಧ್ಯೋಗ ದೊರೆಯುತ್ತಿದೆ. ಅಲ್ಲದೆ ಉನ್ನತ ಶಿಕ್ಷಣ ಸೀಟುಗಳು ದೊರೆಯುತ್ತಿವೆ.ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ 340 ಬಸ್ ಖರೀದಿ ಮಾಡಿಕೊಂಡು. ಈ ಭಾಗದ ಸಾರಿಗೆ ಸಂಪರ್ಕಕ್ಕೆ ಅನೂಕೂಲ ಮಾಡಿಕೊಡಲಾಗುತ್ತಿದೆ,ಶೈಕ್ಷಣಿಕ ಮತ್ತು ಗ್ರಾಮಗಳಲ್ಲಿ ರಸ್ತೆ ಚರಂಡಿ ಕುಡಿಯುವ ನೀರು, ಶೌಚಾಲಯಗಳ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡಲಾಗುತ್ತಿದೆ. ಎಂದು ಸಚಿವ ದರ್ಶನಾಪುರವರು ವಿವರ ನಿಡಿದರು. ಈ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಜಿ,ಪಂ, ಮಾಜಿ ಸದಸ್ಯರಾದ, ವಿನೋಧಗೌಡ ಮಾಲಿ ಪಾಟೀಲ್. ಜಿಲ್ಲಾ ಸಮನ್ವಯ ಅಧಿಕಾರಿ ಶ್ರೀಮತಿ ಸುರಯ್ಯಬೇಗಂ, ಡಿವೈಸ್ಪಿ ಇನಾಮದಾರ. ಕಸಾಪ ಅಧ್ಯಕ್ಷರಾದ ಡಾ, ರವಿಂದ್ರನಾಥ ಹೊಸಮನಿ, ಡಾ, ನೀಲಕಂಠ ಬಡಿಗೇರ. ಕ,ರಾ.ದ.ಸಂ,ಸ ರಾಜ್ಯ ಉಪ ಸಂಚಾಲಕರಾದ, ನಾಗಣ್ಣ ಬಡಿಗೇರ. ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಎಸ್,ಡಿಪಿಐ ಮುಖಂಡರಾದ ಸೈಯದ್ ಇಸಾಕ ಹುಸೇನಿ ಕಾಲೀದ್. ರಾಮಣ್ಣ ಸಾಧ್ಯಾಪುರ.ನಿಜಗುಣ ದೊರನಳ್ಳಿ.ಸೇರಿದಂತೆ ಅನೇಕ ದಲಿತ ಮುಖಂಡರು ಪಾಲ್ಗೊಂಡಿದ್ದರು. ನಗರಸಭೆ ಸದಸ್ಯರದ ಶಿವುಕುಮಾರ ತಳವಾರ ಮತ್ತು ಎಸ್,ಎಸ್,ಡಿ, ಜಿಲ್ಲಾ ಅಧ್ಯಕ್ಷರಾದ ಮಾಹಾದೇವ ದಿಗ್ಗಿ ಡಾ, ಬಿ,ಆರ್,ಅಂಬೇಡ್ಕರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ, ಮಲ್ಲಪ್ಪ ಉಳಂಡಗೇರಿ ಗೋಗಿಯವರು ವಹಿಸಿದ್ದರು. ಭೀಮವಾದ ಡಿ,ಎಸ್,ಎಸ್, ಸಂಚಾಲಕರಾದ, ಶರಣು ದೊರನಳ್ಳಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಚಾಲಕರಾದ ಪಿ,ಜೆ, ಗೊಮವಿಂದ್ರಾಜುರವರು ವಿಷಯ ಮಂಡನೆ ಮಾಡಿ ಮಾತನಾಡಿದರು. ವಿಶ್ವ ನಾಟೇಕಾರವರು ಕಾರ್ಯಕ್ರಮ ನೀರೂಪಿಸಿದರು. ಶಿವು ಪೋತೆಯವರು ಸ್ವಾಗತಿಸಿದರು. ಶೇಖರ ಬಡಿಗೇರವರು ವಂದಿಸಿದರು.ಬಲಭೀಮ ಬೇವಿನಳ್ಳಿಯವರಿಂದ ಕ್ರಾಂತಿಗೀತೆಗಳೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಾನಾ ಗ್ರಾಮಗಳಿಂದ ದಲಿತ ಯುವ ಮುಕಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಅಂದು ತಂದೆ ಮಾಜಿ ಸಚಿವ, ದಿ,ಬಾಪುಗೌಡ ದರ್ಶನಾಪುರವರು ದೈವಾಧಿನರಾದನಂತರದಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು 1989ರಿಂದಲೂ ನನ್ನನ್ನು ಹೆಚ್ಚು ಮತಗಳ ಅಂತರಗಳಿಂದ ಆಯ್ಕೆ ಮಾಡುತ್ತಾ ಬಂದ ಶಹಾಪುರ ಮತಕ್ಷೆತ್ರದ ಮತ ಬಂಧುಗಳಿಗೆ ಚೀರಾ ಋಣಿ,ಇಂದನ ಸಚಿವರಾಗಿದ್ದಾಗ ಈ ಭಾಗದಲ್ಲಿ ಹೆಚ್ಚು ವಿಧ್ಯುತ್ ಉಪ ಕೇಂದ್ರಗಳ ಸ್ಥಾಪನೆ ಮತ್ತು, ವಿರೋಧ ಪಕ್ಷದ ಶಾಸಕರಾಗಿದ್ದಾಗಲೂ ಸನ್ನತಿ ಬ್ಯಾರೆಜಿನಿಂದ 120 ಕೊಟಿ ರೂ,ಗಳ ವೆಚ್ಚದಲ್ಲಿ ಶಹಾಪುರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ನವಂಬರ್‍ನಲ್ಲಿ ಪೂರ್ಣಗೊಳ್ಳುತ್ತದೆ. ಪ್ರಸ್ತುತ 10 ಡಿಎಮ್,ಎಲ್,ಟಿ, ಸಾಮರ್ಥದ ನೀರು ಶುದ್ದಿಕರಣ ಘಟಕ ಪ್ರಾರಂಗೊಳಿಸಲಾಗಿದೆ. ನಗರದಲ್ಲಿ ಹೊಸ ಪೈಪಲೈನ ಅಳವಡಿಕೆಗೆ ಇನ್ನೂ 120 ಕೊಟಿ ರೂ,ಗಳ ಅವಶ್ಯಕವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುಧಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಅನೂಕೂಲ ಮಾಡಿಕೊಡಲಾಗಿದೆ. ಸಣ್ಣ ಕೈಗಾರಿಕೆಗಳ ಅನೂಕೂಲಕ್ಕಾಗಿ ನಗರದಿಂದ 8 ಕಿಮಿ ಅಂತರದಲ್ಲಿ ವಸಹಾತುಗಳ ನಿರ್ಮಾಣಕ್ಕೆ ಸ್ಥಳ ಪರೀಶೀಲನೆ ಕಾರ್ಯ ಮುಂದುವರೆದಿದೆ,
ಶರಣಬಸ್ಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕೆ ಮಂತ್ರಿಗಳು ಕರ್ನಾಟಕ ಸರ್ಕಾರ ,