ಬಂಟ್ವಾಳ: ವೈದ್ಯರ ನಡೆ ಹಳ್ಳಿಯ ಕಡೆ

ಬಂಟ್ವಾಳ , ಜೂ.೧- ಹಳ್ಳಿಯ ಜನತೆಯಲ್ಲಿ ಆರೋಗ್ಯದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರಕಾರ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಅನುಷ್ಠಾನಿಸಿದ್ದು, ಈ ಮೂಲಕ ವೈದ್ಯರ ತಂಡ ಪ್ರತಿ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆಯ ಜತೆಗೆ ಮಾಹಿತಿ ನೀಡುವ ಕಾರ್ಯ ಮಾಡಲಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಸೋಮವಾರ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಹಶೀಲ್ದಾರ್ ರಶ್ಮಿ ಎಸ್. ಆರ್.ಮಾತನಾಡಿ, ತಾಲೂಕಿನ ೧೭ ಕೇಂದ್ರಗಳಲ್ಲೂ ಈ ಕಾರ್ಯ ಪ್ರಾರಂಭಗೊಂಡಿದ್ದು, ಎ.ಜೆ.ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮನೆ ಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸುವ ಕಾರ್ಯ ಮಾಡಲಿದ್ದಾರೆ ಎಂದರು.
ಮಾಜಿ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ, , ಬಾಳ್ತಿಲ ಆರೋಗ್ಯ ಕೇಂದ್ರದ ಡಾ! ಚೈತ್ರ, ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿ ಗಳಾದ ಡಾ! ಅರ್ಜುನ, ಡಾ! ರೋಹಿತ್ ರೆಡ್ಡಿ, ಡಾ! ಪ್ರತೀಕಾ, ಡಾ! ಮೋಹಿತ್ , ಡಾ! ರೀತು , ಆರ್.ಬಿ.ಎಸ್.ಕೆ.ವೈದ್ಯಾಧಿಕಾರಿ ಡಾ! ಯಶೋಧ, ಪಂಚಾಯತ್ ಅಧ್ಯಕ್ಷೆ ಹಿರಣ್ಣ್ಮಯಿ,ಉಪಾಧ್ಯಕ್ಷೆ ಜ್ಯೋತಿ ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ, ಮಲ್ಲಿಕಾ, ಗ್ರಾಮ ಕರಣೀಕೆ ಯಶ್ವಿತಾ, ಆಶಾ ಕಾರ್ಯಕರ್ತರು, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಗಳು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.